ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಗೆ ಇನ್ನೊಂದೇ ದಿನ ಬಾಕಿ. ಏ.14ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿರುವ ಈ ಚಿತ್ರ ಬಿಡುಗಡೆಗೂ ಮುನ್ನವೇ ಹಲವು ದಾಖಲೆಗಳನ್ನು ಬರೆದಿದೆ. ಅಲ್ಲದೇ, ಬಾಕ್ಸ್ ಆಫೀಸ್ ನಲ್ಲೂ ನಿರ್ಮಾಪಕರ ಜೇಬು ತುಂಬಿಸುತ್ತಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಕೆಜಿಎಫ್ 2 ಕ್ರೇಜ್ ಹೆಚ್ಚಾಗಿದ್ದು, ಮುಂಗಡ ಟಿಕೆಟ್ ಗಳು ಈಗಾಗಲೇ ಬಿಕರಿ ಆಗಿವೆ.
Advertisement
ರಾಜಮೌಳಿ ಅವರು ಆರ್.ಆರ್.ಆರ್ ಸಿನಿಮಾದ ಜೊತೆ ಕನ್ನಡದ ಕೆಜಿಎಫ್ ಚಿತ್ರವನ್ನು ಹೋಲಿಸಲಾಗುತ್ತಿದ್ದು, ಸ್ಕ್ರೀನಿಂಗ್ ಮತ್ತು ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಆರ್.ಆರ್.ಆರ್ ಗಿಂತಲೂ ಕೆಜಿಎಫ್ 2 ಮುಂದಿದೆ. ವಿಶ್ವದಾದ್ಯಂತ ಅಂದಾಜು 9000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕೆಜಿಎಫ್ 2 ತೆರೆ ಕಾಣುತ್ತಿದ್ದು, ಕರ್ನಾಟಕದಲ್ಲೇ 950 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಮೊದಲ ದಿನವೇ ಮೂರು ಸಾವಿರಕ್ಕೂ ಹೆಚ್ಚು ಶೋಗಳನ್ನು ಏರ್ಪಡಿಸಲಾಗಿದ್ದು, ಬೆಂಗಳೂರು ಒಂದರಲ್ಲೇ 1500 ಶೋಗಳು ನಡೆಯಲಿವೆ. ಒಟ್ಟು 630 ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ನಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದ್ದು, ಕನ್ನಡದ ಆವೃತ್ತಿ 500 ಸ್ಕ್ರೀನ್ ಗಳ್ಲಲ್ಲಿದ್ದರೆ, ಉಳಿದ ಆವೃತ್ತಿಗಳು ತಲಾ 50 ಸ್ಕ್ರೀನ್ ಗಳಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!
Advertisement
Advertisement
ಭಾರತದ ಮಟ್ಟಿಗೆ ಬರುವುದಾದರೆ, 6000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಭಾರತದಾದ್ಯಂತ ಕೆಜಿಎಫ್ 2 ಪ್ರದರ್ಶನ ಕಾಣುತ್ತಿದೆ. ದಕ್ಷಿಣ ಭಾರತದಲ್ಲಿ 3000 ಸಾವಿರ ಸ್ಕ್ರೀನ್ ಮೇಲೆ ರಾಕಿಭಾಯ್ ತನ್ನ ಆರ್ಭಟವನ್ನು ತೋರಲಿದ್ದಾನೆ. ಯುಎಸ್ ನಲ್ಲಿ 1000 ಸ್ಕ್ರೀನ್ ಗಳಲ್ಲಿ ಪ್ರದರ್ಶನಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂಲಗಳ ಪ್ರಕಾರ ಕೆಜಿಎಫ್ ಚಾಪ್ಟರ್ ಹಿಂದಿ ಆವೃತ್ತಿಯ ಬುಕಿಂಗ್ ಗಳು ಆರ್.ಆರ್.ಆರ್ ದಾಖಲೆಗಳನ್ನು ಈಗಾಗಲೇ ಮುರಿದಿವೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ
Advertisement
ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿಯಿಂದಲೇ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಮೊದಲ ಶೋ ಮಧ್ಯರಾತ್ರಿ 1 ಗಂಟೆಗೆ ಶುರುವಾಗಲಿದೆ. ಆ ಪ್ರದರ್ಶನಗಳ ಒಟ್ಟು ಟಿಕೆಟ್ ಗಳನ್ನು ಅಭಿಮಾನಿಗಳು ಖರೀದಿಸಿದ್ದು, ಅದನ್ನು ಅಭಿಮಾನಿ ಶೋ ಎಂದೇ ಕರೆಯಲಾಗುತ್ತಿದೆ. ಮಧ್ಯ ರಾತ್ರಿ ಒಂದು ಗಂಟೆಯಿಂದ, 3 ಮತ್ತು 4 ಗಂಟೆಗೂ ಚಿತ್ರ ಪ್ರದರ್ಶನಗಳು ಬೆಂಗಳೂರಿನಲ್ಲಿ ಮತ್ತು ಇತರ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿವೆ. 1100 ಸಾವಿರ ಸೀಟುಗಳಿರುವ ಬೆಂಗಳೂರಿನ ಊರ್ವಶಿ ಥಿಯೇಟರ್ ಮೊದಲ ಪ್ರದರ್ಶನದ ಬಹುತೇಕ ಟಿಕೆಟ್ ಗಳು ಖಾಲಿ ಆಗಿವೆಯಂತೆ. ಆ ಥಿಯೇಟರ್ ನಲ್ಲಿಯೇ ಐದು ಪ್ರದರ್ಶನಗಳು ನಡೆಯಲಿವೆ. ಇದನ್ನು ಓದಿ: ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್
ಏ.14 ಅಂಬೇಡ್ಕರ್ ಜಯಂತಿ, ಏ.15ರಂದು ಗುಡ್ ಫ್ರೈಡೇ, ಶನಿವಾರ ಮತ್ತು ಭಾನುವಾರ ರೆಗ್ಯುಲರ್ ರಜೆ ದಿನಗಳು ಇರುವ ಕಾರಣಕ್ಕಾಗಿ ಮೊದಲ ವಾರದ ಕಲೆಕ್ಷನ್ ಆರ್.ಆರ್.ಆರ್ ಗಿಂತ ಎರಡು ಪಟ್ಟು ಹೆಚ್ಚಾಗಲಿದೆ ಎನ್ನುವ ಲೆಕ್ಕಾಚಾರವಿದೆ.