ಆರ್‌ಆರ್‌ಆರ್ ಸಿನಿಮಾ ಅಬ್ಬರ ಜೋರಾಗಿದೆ. ಅಭಿಮಾನಿಗಳು ನಾಮುಂದೆ, ತಾಮುಂದೆ ಎಂದು ಸಿನಿಮಾ ನೋಡಲು ಮುಗಿ ಬೀಳುತ್ತಿದ್ದಾರೆ. ಶಿಳ್ಳೆ-ಚಪ್ಪಾಳೆ ಹಾಕುತ್ತ ಸಿನಿಮಾ ನೋಡುತ್ತಿದ್ದ ಅಭಿಮಾನಿಯೊಬ್ಬ ಕುಸಿದು ಬಿದ್ದು, ನೋಡ ನೋಡುತ್ತಿದ್ದಂತೆ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.
ನಡೆದಿದ್ದೇನು?: ಅನಂತಪುರಂನಲ್ಲಿ ಎಸ್‌ವಿ ಮ್ಯಾಕ್ಸ್ ಚಿತ್ರಮಂದಿರದಲ್ಲಿ ಬೆಳಗಿನ ಜಾವದ ಶೋ ನೋಡುತ್ತಿದ್ದನು. ಸಿನಿಮಾ ನೋಡುತ್ತದ್ದಂತೆ ಚಿತ್ರಮಂದಿರದಲ್ಲಿಯೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ. ಅಭಿಮಾನಿ ಕುಸಿದು ಬಿದ್ದ ಕೂಡಲೇ ಆತನ ಗೆಳೆಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ : RRR ಸಿನೆಮಾ ನೋಡಲು ಬಾಗಿಲು ಮುರಿದು ಚಿತ್ರಮಂದಿರಕ್ಕೆ ನುಗ್ಗಿದ ಪ್ರೇಕ್ಷಕರು
ಆದರೆ ಆತ ಆಸ್ಪತ್ರೆಗೆ ಬರುವ ಮೊದಲೇ ಮೃತನಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳೀದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆರ್‌ಆರ್‌ಆರ್ ಸಿನಿಮಾ ದೇಶದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಆಗಲಿದೆ ಎಂಬ ಮಾತುಗಳು ಸಿನಿ ಪಂಡಿತರಿಂದ ಕೇಳಿ ಬರುತ್ತಿದೆ. ಜೂ.ಎನ್‌ಟಿಆರ್, ರಾಮ್ ಚರಣ್ ತೇಜ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಜಮೌಳಿ ನಿರ್ದೇಶನಕ್ಕೆ ಅಭಿಮಾನಿಗಳು ಮತ್ತೊಮ್ಮೆ ಮನಸೋತಿರುವುದಂತೂ ಪಕ್ಕಾ ಹೌದು, ಪೈಸಾ ವಸೂಲ್ ಸಿನಿಮಾ ಇದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.