ಭಾರತೀಯ ಸಿನಿಮಾ ರಂಗದ ಹೆಮ್ಮೆಯಾಗಿರುವ ಆರ್.ಆರ್.ಆರ್ (RRR) ಸಿನಿಮಾ ತಂಡದಿಂದ ಶಾಕಿಂಗ್ ನ್ಯೂಸ್ ಬಂದಿದ್ದು, ಅದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದಿದ್ದಾರೆ ನಿರ್ದೇಶಕ ರಾಜಮೌಳಿ (Rajamouli). ಈ ಸಿನಿಮಾದಲ್ಲಿ ಬ್ರಿಟಿಷ್ ಅಧಿಕಾರಿಯ ಪಾತ್ರ ಮಾಡಿದ್ದ ಐರಿಶ್ ನಟ ರೇ ಸ್ಟೀವನ್ಸನ್ (Ray Stevenson) ನಿಧನವಾಗಿದ್ದಾರೆ. ಈ ಕುರಿತಂತೆ ರಾಜಮೌಳಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ರೇ ನಿಧನದ (passed away) ಸುದ್ದಿಯನ್ನು ರಾಜಮೌಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ರೇ ಅವರ ಎನರ್ಜಿ ಹಾಗೂ ಅವರು ಸೆಟ್ ನಲ್ಲಿ ತರುತ್ತಿದ್ದ ವೈಬ್ರೆನ್ಸ್ ಬಗ್ಗೆ ಬರೆದುಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿದ ಖುಷಿ ತಾವತ್ತೂ ನನ್ನೊಂದಿಗೆ ಇರುತ್ತದೆ. ನನ್ನ ಫ್ರಾರ್ಥನೆ ಅವರ ಕುಟುಂಬದ ಜೊತೆ ಇರಲಿದೆ’ ಎಂದು ಅವರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ರೆಡ್ ಕಲರ್ ಡ್ರೆಸ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಸಾನ್ಯ ಅಯ್ಯರ್
ಐರ್ಲೆಂಡ್ ಮೂಲದ ರೇ ಹಾಲಿವುಡ್ ಸಿನಿಮಾಗಳಾದ ದಿ ವಾರ್ ಜೋನ್, ಕಿಂಗ್ ಆಥರ್ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಫೇಮಸ್ ಶೋಗಳಾದ ರೆಮೋ, ಅಶೋಕಾ ಸೀರಿಸ್ ನಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಮೇ 21ರಂದು ರೇ ನಿಧನರಾಗಿದ್ದು, ಅವರಿಗೆ 58 ವರ್ಷ ವಯಸ್ಸಾಗಿತ್ತು. ನಿಧನಕ್ಕೆ ನಿಖರವಾದ ಮಾಹಿತಿ ದೊರೆತಿಲ್ಲ. ಆದರೆ, ನಿಧನದ ಸುದ್ದಿಯನ್ನು ಅವರ ಕುಟುಂಬ ಖಚಿತ ಪಡಿಸಿದೆ.