ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

Public TV
1 Min Read
jr.ntr

ಭಾರತದಲ್ಲಿ(India) ಭರ್ಜರಿ ಸಕ್ಸಸ್ ಕಂಡ ತ್ರಿಬಲ್ ಆರ್ ಸಿನಿಮಾ ಇದೀಗ ಜಪಾನ್‌ನಲ್ಲಿ ರಿಲೀಸ್ ಆಗಿದೆ. ಅಲ್ಲೂ ಕೂಡ ರಾಮ್ ಚರಣ್ ಮತ್ತು `ಆರ್‌ಆರ್‌ಆರ್'(RRR Film) ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಈ ಚಿತ್ರದ ಪ್ರಚಾರಕ್ಕೆ ಇಡೀ ತಂಡ ಜಪಾನ್‌ಗೆ ಹಾರಿದ್ದಾರೆ. ಈ ವೇಳೆ ಜ್ಯೂ.ಎನ್‌ಟಿಆರ್‌ನ ನೋಡಿ ಫ್ಯಾನ್ಸ್ ಭಾವುಕರಾಗಿದ್ದಾರೆ.

RRR 1

ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್'(RRR Film)ಭಾರತದ ಮೂಲೆ ಮೂಲೆ ಕೋಟಿ ಕೋಟಿ ಕಲೆಕ್ಷನ್ ಮಾಡಿ, ಸಿನಿಮಾ ಗೆದ್ದಿತ್ತು. ಈ ಮೂಲಕ ರಾಮ್ ಚರಣ್ ಮತ್ತು ಜ್ಯೂ.ಎನ್‌ಟಿಆರ್‌ಗೆ(Jr.Ntr) ನಟನೆಗೆ ಫ್ಯಾನ್ಸ್ ಸೆಲ್ಯೂಟ್ ಹೊಡೆದಿದ್ದರು. ಇದೀ `ಆರ್‌ಆರ್‌ಆರ್’ ಸಿನಿಮಾ ಜಪಾನ್ ಅಂಗಳಕ್ಕೂ ಲಗ್ಗೆ ಇಟ್ಟಿದೆ. ಜಪಾನ್ ಅಂಗಳದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

jr.ntr 1

ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದಾರೆ. ಸಿನಿಮಾಗಾಗಿ ಇಡೀ ತಂಡ ಜಪಾನ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

 

View this post on Instagram

 

A post shared by Viral Bhayani (@viralbhayani)


ಜಪಾನ್‌ನಲ್ಲೂ ರಾಜಮೌಳಿ ಸಿನಿಮಾಗೆ ಒಳ್ಳೆಯ ಮೈಲೇಜ್ ಸಿಕ್ಕಿದೆ. ಚಿತ್ರದ ಸ್ಟಾರ್‌ಗಳನ್ನ ಬರಮಾಡಿಕೊಂಡಿರು ಜಪಾನಿ ಪ್ರಜೆಗಳು ಸಿಕ್ಕಾಪಟಟೆ ಖುಷಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್‌ನ ಭೇಟಿಯಾದ ಕೆಲವರು ಭಾವುಕರಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *