ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಸಲಿಂಗ ಪ್ರೇಮಕಥೆಯನ್ನು ಹೊಂದಿದೆ ಎಂದು ಈ ಹಿಂದೆ ವಿದೇಶಿಗರು ಆಡಿಕೊಂಡಿದ್ದರು. ಈ ಬಾರಿ ಭಾರತದವರೇ ಆ ರೀತಿಯ ಹೇಳಿಕೆಯನ್ನು ಕೊಡುತ್ತಿದ್ದಾರೆ. ಸೌಂಡ್ ವಿನ್ಯಾಸಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿರುವ ಮಲಯಾಳಂ ಚಿತ್ರರಂಗದ ರೆಸೂಲ್ ಪೂಕಟ್ಟಿ ಆರ್.ಆರ್.ಆರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇದೊಂದು ಸಲಿಂಗ ಪ್ರೇಮಕಥೆಯನ್ನು ಹೊಂದಿರುವ ಚಿತ್ರ ಎಂದಿದ್ದಾರೆ.
ರೆಸೂಲ್ ಪೂಕಟ್ಟಿ ಆಸ್ಕರ್ ಪ್ರಶಸ್ತಿ ಪಡೆದ ಸಿನಿಮಾ ಸೌಂಡ್ ಇಂಜಿನಿಯರ್. ಭಾರತದ ಸಿನಿಮಾ ರಂಗಕ್ಕೆ ಒಂದೊಳ್ಳೆ ಹೆಸರು ತಂದು ಕೊಟ್ಟ ತಂತ್ರಜ್ಞ. ಅವರು ಭಾರತೀಯ ಸಿನಿಮಾ ರಂಗವೇ ಹೆಮ್ಮೆ ಪಡುವಂತಹ ಸಿನಿಮಾಗೆ ಈ ರೀತಿ ಹೇಳಿದ್ದು ಸಹಜವಾಗಿಯೇ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ವಿಶ್ವವೇ ಮೆಚ್ಚಿಕೊಂಡಿದ್ದ ಸಿನಿಮಾಗೆ ಆ ರೀತಿ ಅವರು ಹೇಳಬಾರದಿತ್ತು ಎನ್ನುವ ಮಾತೂ ಕೇಳಿ ಬಂದಿದೆ. ಅಲ್ಲದೇ, ಆರ್.ಆರ್.ಆರ್ ಸಿನಿಮಾ ನಿರ್ಮಾಪಕರು ಈ ಕುರಿತು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ಗೆ ಕರ್ನಾಟಕದಲ್ಲಿ ಧರ್ಮ ಸಂಕಟ
ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ್ ಕಾಂಬಿನೇಷನ್ ನ ಸಿನಿಮಾ ಇದಾಗಿದ್ದು, ಸಾವಿರಾರು ಕೋಟಿ ಗಳಿಕೆ ಮಾಡಿದೆ. ಮಿತ್ರರಿಬ್ಬರು ಒಬ್ಬರಿಗೊಬ್ಬರು ಸಹಾಯ ಪಡೆದುಕೊಳ್ಳುತ್ತಾ, ತಮ್ಮ ಹಠವನ್ನು ಹೇಗೆ ಸಾಧಿಸುತ್ತಾರೆ ಎನ್ನುವುದೇ ಸಿನಿಮಾದ ಕಥೆ. ಈ ಕಥೆಗೆ ಸಲಿಂಗ ಪ್ರೇಮಕಥೆ ಎಂದು ವ್ಯಂಗ್ಯವಾಡಲಾಗುತ್ತಿದೆ.