RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

Advertisements

ಮುಂಬೈ: ‘ಆರ್‌ಆರ್‌ಆರ್’ ಸಿನಿಮಾ ದೇಹವಾದರೆ ಅಜಯ್ ದೇವಗನ್ ಆತ್ಮ ಮತ್ತು ಆಲಿಯಾ ಭಟ್ ಶಕ್ತಿ ಎಂದು ನಿರ್ದೇಶಕ ಎಸ್‍ಎಸ್ ರಾಜಮೌಳಿ ಹೇಳಿದ್ದಾರೆ.

ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಆರ್‌ಆರ್‌ಆರ್’ ಜನವರಿ 7 ರಂದು ರಿಲೀಸ್ ಆಗುವುದೆಂದು ಚಿತ್ರತಂಡ ತಿಳಿಸಿದೆ. ಈ ಹಿನ್ನೆಲೆ ಚಿತ್ರತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಈ ವೇಳೆ ಸಂದರ್ಶನವೊಂದರಲ್ಲಿ ವರದಿಗಾರರು, ಈ ಸಿನಿಮಾದಲ್ಲಿ ಆಲಿಯಾ ಮತ್ತು ಅಜಯ್ ದೇವಗನ್ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದ್ಯ ಎಂದು ಪ್ರಶ್ನೆಯನ್ನು ಕೇಳಿದರು. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

Advertisements

ಅದಕ್ಕೆ ಉತ್ತರಿಸಿದ ರಾಜಮೌಳಿ, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಅವರ ಪಾತ್ರಗಳು ಬಹಳ ಮುಖ್ಯವಾಗಿವೆ. ನಾವು ಆರ್‌ಆರ್‌ಆರ್ ಅನ್ನು ದೇಹವಾಗಿ ನೋಡಿದರೆ, ಅಜಯ್ ಸರ್ ಈ ಚಿತ್ರದಲ್ಲಿ ಆತ್ಮ. ಈ ಸಿನಿಮಾದಲ್ಲಿ ಎರಡು ಶಕ್ತಿಗಳಿವೆ. ಅವರನ್ನು ಸಮತೋಲನಗೊಳಿಸುವ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊಂದಿರುವ ಒಬ್ಬ ವ್ಯಕ್ತಿ ಇದ್ದಾರೆ. ಅವರೇ ಸೀತೆ ಪಾತ್ರದಲ್ಲಿ ನಟಿಸಿರುವ ಆಲಿಯಾ ಭಟ್ ಎಂದು ಉತ್ತರಿಸಿದರು.

Advertisements

ಅಜಯ್ ಮತ್ತು ಆಲಿಯಾ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾನು ಪ್ರೇಕ್ಷಕರನ್ನು ಮೋಸ ಮಾಡಲು ಹೋಗುವುದಿಲ್ಲ. ಆಲಿಯಾ ಮತ್ತು ಅಜಯ್ ಅವರ ಪಾತ್ರ ಈ ಸಿನಿಮಾದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದು ಅಲ್ಲದೇ ಅವರಿಬ್ಬರು ನಾಯಕರಿಗಿಂತ ಹೆಚ್ಚು ಮುಖ್ಯರಾಗಿದ್ದಾರೆ ಎಂದು ಉತ್ತರಿಸಿದರು.

ಆರ್‌ಆರ್‌ಆರ್ ಸಿನಿಮಾದಲ್ಲಿ 1920 ರ ದಶಕ ಪೌರಾಣಿಕ ಸ್ವಾತಂತ್ರ್ಯ ಹೋರಾಟಗಾರರನ್ನು ಆಧರಿಸಿದ ಕಾಲ್ಪನಿಕ ಕಥೆ ಇದೆ. ಈ ಭಾಗದಲ್ಲಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ್, ಕೊಮ್ಮರಮ್ ಭೀಮ್ ಪಾತ್ರದಲ್ಲಿ ಜೂ.ಎನ್‍ಟಿಆರ್ ಅಭಿನಯಿಸಿದ್ದಾರೆ. ಸೀತಾ ಪಾತ್ರದಲ್ಲಿ ಆಲಿಯಾ ಕಾಣಿಸಿದ್ದಾರೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

ಜೂನಿಯರ್ ಎನ್‍ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್, ಸಮುದ್ರಕನಿ, ಅಲಿಸನ್ ಡೂಡಿ, ರೇ ಸ್ಟೀವನ್ಸನ್ ಒಳಗೊಂಡಂತೆ ‘ಆರ್‍ಆರ್‍ಆರ್’ ಸಿನಿಮಾ ಬಹುದೊಡ್ಡ ತಾರಾ ಬಳಗವನ್ನು ಹೊಂದಿದೆ.

ಈ ಸಿನಿಮಾವನ್ನು ಮುಂದಿನ ವರ್ಷ ಜ.7 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಆದರೆ ಪ್ರಸ್ತುತ ಕೊರೊನಾ ಹರಡುತ್ತಿರುವ ಹಿನ್ನೆಲೆ ಇದು ಇನ್ನು ಮುಂದೆ ಹೋಗುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳಿಂದ ತಿಳಿದುಬರುತ್ತಿದೆ.

Advertisements
Exit mobile version