RRR ಸಿನಿಮಾಟೋಗ್ರಾಫರ್ ಸೆಂಥಿಲ್ ಕುಮಾರ್ ರ ಪತ್ನಿ ನಿಧನ

Public TV
1 Min Read
Senthil Kumar Ruhi 1

ಭಾರತಕ್ಕೆ ಆಸ್ಕರ್ ತಂದು ಕೊಟ್ಟ ಹಾಗೂ ವಿಶ್ವ ಮಟ್ಟದಲ್ಲಿ ಸಖತ್ ಸುದ್ದಿ ಮಾಡಿದ್ದ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ (RRR) ಸಿನಿಮಾದ ಸಿನಿಮಾಟೋಗ್ರಾಫರ್ ಸೆಂಥಿಲ್ ಕುಮಾರ್ (Senthil Kumar) ಅವರ ಪತ್ನಿ ನಿಧನರಾಗಿದ್ದಾರೆ. ಯೋಗ ಕೋಚ್ ಕೂಡ ಆಗಿದ್ದ ಅವರ ಪತ್ನಿ ರೂಹಿ (Ruhi) ಅನಾರೋಗ್ಯದಿಂದಾಗಿ ಇಹಲೋಕ ತ್ಯಜಿಸಿದ್ದಾರೆ.

Senthil Kumar Ruhi 2

ಅನಾರೋಗ್ಯದ ಕಾರಣದಿಂದಾಗಿ ರೂಹಿ ಅವರನ್ನು ಸಿಕಂದರಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರೂಹಿ ನಿಧನರಾಗಿದ್ದಾರೆ (Passed away) ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ. 2009ರಲ್ಲಿ ಸೆಂಥಿಲ್ ಮತ್ತು ರೂಹಿ ಹೊಸ ಜೀವನಕ್ಕೆ ಕಾಲಿಟ್ಟದ್ದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

 

ಕೋವಿಡ್ ಗೆ ತುತ್ತಾದ ನಂತರ ರೂಹಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ನಿರಂತರವಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೂ, ಅವರ ಆರೋಗ್ಯ ಸುಧಾರಿಸಲಿಲ್ಲ ಎಂದು ಹೇಳಲಾಗುತ್ತಿದೆ. ಕೊನೆಗೂ ಅಂಗಾಂಗ ವೈಫಲ್ಯದಿಂದಾಗಿ ರೂಹಿ ಸಾವು ಕಂಡಿದ್ದಾರೆ.

Share This Article