ಆರ್.ಆರ್.ಆರ್ : ಬಾಕ್ಸ್ ಆಫೀಸ್ ಗಳಿಕೆ ಸುಳ್ಳು ಸುಳ್ಳು ಎಂದ ಬಾಲಿವುಡ್ ಖಾನ್

Public TV
2 Min Read
RRR

ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಿದೆ. ಈವರೆಗಿನ ಎಲ್ಲಾ ದಾಖಲೆಗಳನ್ನು ಅದು ಮುರಿದು ಮುನ್ನುಗ್ಗುತ್ತಿದೆ. ಹತ್ತಿರ ಹತ್ತಿರ ಸಾವಿರ ಕೋಟಿ ಸಮೀಪಕ್ಕೆ ಸಿನಿಮಾ ಬರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಬಾಲಿವುಡ್ ನ ಸ್ವಯಂ ವಿಮರ್ಶಕ ಕಮಲ್ ಆರ್ ಖಾನ್ ಹೇಳುವುದೇ ಬೇರೆ. ಇದನ್ನೂ ಓದಿ: ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

RRR

ಭಾರತೀಯ ಬಹುತೇಕ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಇತರ ದೇಶಗಳ ಭಾಷೆಗಳಿಗೂ ಅದು ಡಬ್ ಆಗಿ ಬಿಡುಗಡೆ ಆಗಿದೆ. ಮೊದಲ ಮೂರು ದಿನಗಳ ಗಳಿಕೆಯಲ್ಲೇ ಅದು ದಾಖಲೆ ನಿರ್ಮಿಸಿತ್ತು. ರಿಲೀಸ್ ಆದ ವಾರದೊಳಗೆ ಹಿಂದಿಯೊಂದರಲ್ಲೇ ಅದು ನೂರು ಕೋಟಿ ಕ್ಲಬ್ ಸೇರಿ ಆಗಿದೆ. ಆದರೆ, ಅದೆಲ್ಲ ಸುಳ್ಳು ಪ್ರಚಾರ ಎಂದು ಕಮಲ್ ಟ್ವೀಟ್ ಮಾಡಿದ್ದಾರೆ. ಓದಿ: ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

RRR film 2

ಬಾಲಿವುಡ್ ನ ಸ್ವಯಂ ವಿಮರ್ಶಕ ಖ್ಯಾತಿಯ ಈ ಕಮಲ್ ಆರ್ ಖಾನ್ ಇಂತಹ ಅಚ್ಚರಿಯ ಹೇಳಿಕೆಯನ್ನು  ಕೊಡುವುದು ಇದೇ ಮೊದಲೇನೂ ಅಲ್ಲ. ಬಾಲಿವುಡ್ ನ ಬಹುತೇಕ ಸ್ಟಾರ್ ನಟ ನಟಿಯರನ್ನು ಕಾಲೆಳೆದು ಕಂಗೆಣ್ಣಿಗೆ ಗುರಿಯಾದವರು ಇವರು. ನಿರ್ದೇಶಕರನ್ನೂ, ನಿರ್ಮಾಪಕರನ್ನೂ ಬಿಡದೇ ತಮ್ಮದೇ ಆದ ರೀತಿಯಲ್ಲಿ ಕಟುವಾಗಿ ಟೀಕಿಸುತ್ತಲೇ ಇರುತ್ತಾರೆ ಕಮಲ್. ಇದೀಗ ಆರ್.ಆರ್.ಆರ್ ವಿಷಯದಲ್ಲೂ ಅದನ್ನೇ ಮಾಡಿದ್ದಾರೆ.

 

‘ನನ್ನ ಪ್ರಕಾರ ಆರ್.ಆರ್.ಆರ್ ಸಿನಿಮಾವನ್ನು ಜನರು ತಿರಸ್ಕರಿಸಿದ್ದಾರೆ. ಅಷ್ಟೊಂದು ಪ್ರಮಾಣದಲ್ಲಿ ಬಾಕ್ಸ್ ಆಫೀಸ್ ತುಂಬುವುದಕ್ಕೆ ಹೇಗೆ ಸಾಧ್ಯ? ನಿರ್ಮಾಪಕರು ಮತ್ತು ನಿರ್ದೇಶಕರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ, ಈ ಸಿನಿಮಾ 680 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಅದು ಕೂಡ ಸುಳ್ಳು. ಜನರಿಗೆ ಬಜೆಟ್ ಅರ್ಥವಾಗಲ್ಲ. ಆ ಪ್ರಮಾಣದಲ್ಲಿ ಈ ಚಿತ್ರಕ್ಕೆ ಹಣ ಹೂಡಿಲ್ಲ ಎಂದು ಮುಂದಿನ ದಿನಗಳಲ್ಲಿ ಸಾಬೀತು ಮಾಡುವುದಾಗಿ’ ನಮ್ಮ ಟ್ವಿಟರ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

RRR 2

ಕಮಲ್ ಈ ರೀತಿ ಟ್ವಿಟ್ ಮಾಡುತ್ತಿದ್ದಂತೆಯೇ ರಾಜಮೌಳಿ, ರಾಮ್ ಚರಣ್ ತೇಜ, ಜೂನಿಯರ್ ಎನ್.ಟಿ.ಆರ್ ಮತ್ತು ಆಲಿಯಾ ಭಟ್ ಅಭಿಮಾನಿಗಳು ಒಟ್ಟಾಗಿ ಕಮಲ್ ಮೇಲೆ ಮುಗಿಬಿದ್ದಿದ್ದಾರೆ. ಕಮಲ್ ಕುರಿತಾಗಿ ನಿಂದಿಸಿದ್ದಾರೆ. ಕಮಲ್ ಯಾರು ಎನ್ನುವುದನ್ನೂ ಕೆಲವರು ಬಿಚ್ಚಿಟ್ಟಿದ್ದಾರೆ. ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಇಡುತ್ತಿರುವ ಆರ್.ಆರ್.ಆರ್ ತನ್ನದೇ ದಾಖಲೆ ಮುರಿದು ಮುನ್ನುಗ್ಗುತ್ತಿದೆ. ಅತೀ ಶೀಘ್ರದಲ್ಲೇ ಅದು ಮೈಲುಗಲ್ಲು ಸ್ಥಾಪಿಸಲಿದೆ ಎಂದಿದ್ದಾರೆ ಅಭಿಮಾನಿಗಳು.

Share This Article
Leave a Comment

Leave a Reply

Your email address will not be published. Required fields are marked *