ಬೆಂಗಳೂರು: ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ RRR ಚಿತ್ರದ ಆಡಿಯೋ ಪಡೆದುಕೊಂಡ ಒಪ್ಪಂದಕ್ಕೆ ಲಹರಿ ಸಂಸ್ಥೆ ಇಂದು ಸಹಿ ಹಾಕಿದೆ.
Advertisement
ಕೆಲದಿನಗಳ ಹಿಂದೆ ಲಹರಿ ಸಂಸ್ಥೆ ಆರ್‍ಆರ್‍ಆರ್ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿತ್ತು. ಇದೀಗ ಲಹರಿ ಸಂಸ್ಥೆಯು ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ಆರ್‍ಆರ್‍ಆರ್ ಅಗ್ರಿಮೆಂಟ್ ಗೆ ಸೈನ್ ಮಾಡಿರುವ ಅಧಿಕೃತವಾಗಿ ಪತ್ರವನ್ನು ಪಡೆಯುವ ಮೂಲಕ ಹಕ್ಕನ್ನು ಪಡೆದುಕೊಂಡಿದೆ. ಆಗಸ್ಟ್ 1ರ ಬೆಳಗ್ಗೆ 11 ಗಂಟೆಗೆ ಆರ್‍ಆರ್‍ಆರ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ. ಇದನ್ನೂ ಓದಿ: RRR ಆಡಿಯೋ ರೈಟ್ಸ್ ಲಹರಿ ಪಾಲು
Advertisement
Advertisement
ಲಹರಿ ಸಂಸ್ಥೆ ಹೈದರಾಬಾದ್‍ನಲ್ಲಿ ಲಿಖಿತವಾಗಿ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ನವೀನ್, ಕೀರವಾಣಿ ಜೊತೆ ಸಭೆಯಲ್ಲಿ ಭಾಗಿಯಾಗಿದ್ದರು. 28 ಕೋಟಿ ರೂ.ಗೆ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ ಎಂದು ತಿಳಿದು ಬಂದಿದೆ.
Advertisement
Thanks for the wonderful opportunity @mmkeeravaani garu, @ssrajamouli garu, #DVVDanayya garu & @ssk1122 – Manohar Naidu & Naveen
Watch out for the Amazing Soulful Song from #RRRMovie on 1st August at 11:00AM. #RRRAudioOnTseriesLahari pic.twitter.com/IZipUhEvSq
— LahaRRRi Music (@LahariMusic) July 29, 2021
ಆರ್‌ಆರ್‌ಆರ್ ಚಿತ್ರದ ಆಡಿಯೋ ಹಕ್ಕನ್ನು ಭಾರೀ ಮೊತ್ತಕ್ಕೆ ಖರೀದಿಸಲಾಗಿದೆ. ಒಟ್ಟು 5 ಭಾಷೆಗಳಲ್ಲಿ ಆರ್‌ಆರ್‌ಆರ್ ತೆರೆಕಾಣುತ್ತಿದ್ದು, ಐದೂ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಹಾಗೂ ಟಿ ಸಿರೀಸ್ ತಮ್ಮ ಜೋಳಿಗೆಗೆ ಹಾಕಿಕೊಂಡಿವೆ. ಬಾಹುಬಲಿ ಚಿತ್ರದ ಆಡಿಯೋ ಹಕ್ಕನ್ನೂ ಇದೇ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿತ್ತು. ಇದನ್ನೂ ಓದಿ: RRR ಸಿನಿಮಾದ ಒಂದು ಸಾಂಗ್ ಶೂಟ್‍ಗೆ ರಾಜಮೌಳಿ ಬೃಹತ್ ಪ್ಲಾನ್
ಈಗಾಗಲೇ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣ ಕೊನೇಯ ಹಂತ ತಲುಪಿದ್ದು, ಇದೇ ಆಗಸ್ಟ್ 1 ರಂದು ವಿಶೇಷ ಹಾಡನ್ನು ಬಿಡುಗಡೆಗೊಳಿಸಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಇದರ ಮಧ್ಯೆಯೇ ಜುಲೈ 15ರಂದು ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಲು ಸಹ ತಯಾರಿ ನಡೆದಿದೆ. ಈ ಮೇಕಿಂಗ್ ವೀಡಿಯೋ ನಿಮ್ಮನ್ನು ಆರ್‍ಆರ್‍ಆರ್ ಪ್ರಪಂಚಕ್ಕೆ ಕೊಂಡೊಯ್ಯಲಿದ್ದು, ಈ ಮೂಲಕ ಚಿತ್ರವನ್ನು ಹೇಗೆ ನಿರ್ಮಿಸಲಾಗಿದೆ ಎಂಬುದರ ಝಲಕ್ ತೋರಿಸಲಾಗುತ್ತಿದೆ.
ಹೀಗೆ ಆರ್‌ಆರ್‌ಆರ್ ಸಿನಿಮಾ ಕುರಿತು ಚಿತ್ರ ತಂಡ ಬ್ಯಾಕ್ ಟು ಬ್ಯಾಕ್ ಅಪ್‍ಡೇಟ್ ನೀಡುತ್ತಿದೆ. ಅಂದಹಾಗೆ ಬಹುನಿರೀಕ್ಷಿತ ಆರ್‍ಆರ್‍ಆರ್ ಸಿನಿಮಾ ಅಕ್ಟೋಬರ್ 13ರಂದು ವಿಶ್ವಾದ್ಯಂತ ತೆರೆಗಪ್ಪಳಿಸುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಹೀಗಾಗಿ ಅಭಿಮಾನಿಗಳು ಆರ್‍ಆರ್‍ಆರ್ ಅಪ್‍ಡೇಟ್ಸ್‍ಗಾಗಿ ಕಾತರದಿಂದ ಕಾಯುತ್ತಿದ್ದಾರೆ.