ಬೆಂಗಳೂರು: ಮತದಾರರಿಗೆ ಗಿಫ್ಟ್ ಬಾಕ್ಸ್ (Gift Box) ಹಂಚಿ ಆಮಿಷವೊಡ್ಡುತ್ತಿದ್ದ ಆರೋಪದ ಮೇಲೆ ಆರ್‌ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ (Kusuma Hanumantharayappa) ಹಾಗೂ ಸಂಸದ ಡಿ.ಕೆ ಸುರೇಶ್ (DK Suresh) ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Advertisement
ಆರ್‌ಆರ್ ನಗರದ ಬಿಬಿಎಂಪಿ (BBMP) ಕಚೇರಿ ಬಳಿ ಮತದಾರರಿಗೆ ತವಾ ಬಾಕ್ಸ್ ಹಂಚಿಕೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಸುರೇಶ್ ಸ್ಥಳಕ್ಕೆ ತೆರಳಿದಾಗ, ತವಾ ಹಂಚುತ್ತಿದ್ದವರಲ್ಲಿ ಇಬ್ಬರು ಓಡಿಹೋಗಿದ್ದು, ಓರ್ವ ಸಿಕ್ಕಿಬಿದ್ದಿದ್ದಾನೆ. ಗಿಫ್ಟ್ ಬಾಕ್ಸ್‌ಗಳ ಮೇಲೆ ಕುಸುಮಾ ಹಾಗೂ ಡಿ.ಕೆ ಸುರೇಶ್ ಭಾವಚಿತ್ರಗಳಿದ್ದು, ಅವುಗಳನ್ನ ಸೀಜ್ ಮಾಡಲಾಗಿದೆ. ಈ ಬಗ್ಗೆ ಆರ್‌ಆರ್ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಂಡಾಯದ ಬಾಣಲೆಯಲ್ಲಿ ಕಾಂಗ್ರೆಸ್ ಕೊತಕೊತ – ಯಾರು ಎಲ್ಲಿ ರೆಬೆಲ್?
Advertisement
Advertisement
2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಕಟಿಸಿದ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಕುಸುಮಾ ಅವರಿಗೆ ಟಿಕಟ್ ಘೋಷಣೆ ಮಾಡಲಾಗಿತ್ತು. ಇದನ್ನೂ ಓದಿ:ನಮ್ಮ ಜೊತೆಗೆ ಸೂಪರ್ ಸ್ಟಾರ್ ಬಂದ್ರೆ ಕುಮಾರಸ್ವಾಮಿಗೆ ಯಾಕೆ ಚಿಂತೆ – ಸಿಎಂ ಪ್ರಶ್ನೆ
Advertisement
ಒಂದೇ ದಿನ 8 ಕೋಟಿ ಹಣ ಸೀಜ್: ಚುನಾವಣೆ ಹೊತ್ತಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಹುಡುಕಿದಷ್ಟೂ ನಗ-ನಗದು ಪತ್ತೆಯಾಗ್ತಿವೆ. ಶುಕ್ರವಾರ ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 8 ಕೋಟಿ ನಗದು ಪತ್ತೆಯಾಗಿದ್ದು, ಈವರೆಗೆ 35 ಕೋಟಿಗೂ ಹೆಚ್ಚು ನಗದು ಸೀಜ್ ಆಗಿದೆ. ನಗದು ಚಿನ್ನಾಭರಣ ಸೇರಿ 93 ಕೋಟಿ ಅಧಿಕ ಮೌಲ್ಯದ ವಸ್ತುಗಳನ್ನ ಚುನಾವಣಾ ಆಯೋಗ ವಶಕ್ಕೆ ಪಡೆದುಕೊಂಡಿದೆ.