ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಟಾರ್ಗೆಟ್ ಪಾಲಿಟಿಕ್ಸ್ ವಿರುದ್ಧ ಆರ್.ಆರ್ ನಗರ ಶಾಸಕ ಮುನಿರತ್ನ (Muniratna) ಸಿಡಿದೆದ್ದಿದ್ದಾರೆ.
ಬಸವರಾಜ್ ಬೊಮ್ಮಾಯಿ (Basavaraj Bommai) ಸರ್ಕಾರದಲ್ಲಿ ಕೊಟ್ಟಿದ್ದ ಅನುದಾನ ವಾಪಸ್ ಪಡೆದ ಸರ್ಕಾರದ ನಡೆ ಖಂಡಿಸಿ ಖಂಡಿಸಿ ಮುನಿರತ್ನ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಇಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎಚ್‍ಡಿ ರೇವಣ್ಣ ಆಪ್ತನ ಮೇಲೆ ಡೆಡ್ಲಿ ಅಟ್ಯಾಕ್!
ಅಲ್ಲದೇ ಆರ್.ಆರ್ ನಗರ ಕ್ಷೇತ್ರದ 126 ಕೋಟಿ ಅನುದಾನ ವಾಪಸ್‍ಗೆ ಮುನಿರತ್ನ ಆಗ್ರಹಿಸಲಿದ್ದಾರೆ. ಮುನಿರತ್ನ ಹೋರಾಟಕ್ಕೆ ನಗರ ಬಿಜೆಪಿ ಶಾಸಕರ ಬೆಂಬಲವೂ ಇದೆ. ಇದು ಕಾಂಗ್ರೆಸ್ – ಬಿಜೆಪಿ ನಡುವಿನ ಅನುದಾನ ವಾರ್‍ಗೆ ಮತ್ತೊಂದು ಟ್ವಿಸ್ಟ್ ಕೊಟ್ಟಿದೆ. ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಸಿಕ್ಕಿದ್ದ 126 ಕೋಟಿ ಅನುದಾನ ವಾಪಸ್ ಹಿಂದೆ ಡಿಸಿಎಂ ಡಿಕೆಶಿ ನೇರ ಹಸ್ತಕ್ಷೇಪ ಆರೋಪಿಸಲಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]