ಬೆಂಗಳೂರು: ನಾವು ಶಾಶ್ವತ ಅಲ್ಲ. ನಾವು ಮಾಡೋ ಕೆಲಸ ಶಾಶ್ವತವಾಗಿ ಇರುತ್ತೆ. ನಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಬೇಕು. ನಾವು ಬಿಟ್ಟು ಹೋದ ಕೆಲಸದ ಬಗ್ಗೆ ಜನರು ಮಾತಾಡಬೇಕು. ಅದು ನಮ್ಮ ಸಾಧನೆ. ಕ್ಷೇತ್ರದ ಯಾವುದೇ ಕೆಲಸ ಇದ್ದರು ನಿಮ್ಮ ಮನೆ ಮಗನಾಗಿ, ಸಹೋದರನಾಗಿ ಮಾಡಿಕೊಡ್ತೀನಿ ಎಂದು ಸಚಿವ ಮುನಿರತ್ನ ಹೇಳಿದರು.
Advertisement
ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಪೀಣ್ಯದಲ್ಲಿ ಹೈಟೆಕ್ ಪದವಿ, ಪಿಯುಸಿ ಕಾಲೇಜ್ ಮತ್ತು ಮಾದರಿ ಶಾಲೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 3,500 ವಿದ್ಯಾರ್ಥಿಗಳು ಓದುವ ವ್ಯವಸ್ಥೆ ಮಾಡಲಾಗಿದೆ. ನಾವು ಶಾಶ್ವತವಾಗಿ ಉಳಿಯೋದಿಲ್ಲ. ನಾವು ಮಾಡಿದ ಕೆಲಸ ಶಾಶ್ವತವಾಗಿ ಉಳಿಯಬೇಕು. ನಮ್ಮ ಕ್ಷೇತ್ರದಲ್ಲಿ ಅನೇಕ ಕೆಲಸ ಮಾಡಿದ್ದೇವೆ. ಉತ್ತಮ ರಸ್ತೆ ಮಾಡಿದ್ದೇವೆ. ಪುರಾತನ ದೇವಾಲಯ ಜೀರ್ಣೋದ್ಧಾರ ಮಾಡಿದ್ದೇವೆ. ಕ್ಷೇತ್ರದ ಯಾವುದೇ ಕೆಲಸ ಇದ್ದರು ಈ ಮುನಿರತ್ನ ನಿಮ್ಮ ಮನೆ ಮಗನಾಗಿ, ಸಹೋದರನಾಗಿ ಮಾಡಿಕೊಡ್ತೀನಿ ಎಂದು ಭರವಸೆ ನೀಡಿದರು. ಇದನ್ನೂ ಓದಿ: 18 ತಿಂಗಳಲ್ಲಿ 200 ಕೋಟಿ ಡೋಸ್ ಕೊರೊನಾ ಲಸಿಕೆ- ದಾಖಲೆ ಸೃಷ್ಟಿಸಿದ ಭಾರತ
Advertisement
Advertisement
3,500 ಮಕ್ಕಳು ಈ ಶಾಲಾ-ಕಾಲೇಜಿನಲ್ಲಿ ಓದುತ್ತಿದ್ದು, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಪೀಣ್ಯದಲ್ಲಿ ಹೈಟೆಕ್ ಪದವಿ, ಪಿಯುಸಿ ಕಾಲೇಜ್ ಮತ್ತು ಮಾದರಿ ಶಾಲೆ ಲೋಕಾರ್ಪಣೆಗೆ ಆಗಮಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರದ್ದು ಮಗುವಿನಂತ ಮನಸ್ಸು. ಏನು ಬೇಕಾದ್ರು ಸಹಾಯ ಮಾಡುವ ಮನಸ್ಸು ಸಿಎಂ ಅವ್ರಿಗೆ ಇದೆ. ನಾವು ದೂರದೃಷ್ಟಿ ಇಟ್ಟು ಕೊಂಡು ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿಯ ಕೆಲಸಗಳನ್ನು ಕೈಗೊಂಡಿದ್ದೇವೆ ಎಂದರು. ಇದನ್ನೂ ಓದಿ: 1950ರಲ್ಲೇ ಈದ್ಗಾ ಮೈದಾನ ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಟ್ಟಿತ್ತು: ದಾಖಲೆ ರಿಲೀಸ್
Advertisement
ಕಾರ್ಯಕ್ರಮದಲ್ಲಿ ಸಚಿವರಾದ ಭೈರತಿ ಬಸವರಾಜ್, ಬಿ.ಸಿ ನಾಗೇಶ್, ಗೋಪಾಲಯ್ಯ ಭಾಗವಹಿಸಿದ್ರು.