– ತನ್ನ ಕ್ರಿಕೆಟ್ ಜೀವನದ ದುರಂತ ಕಥೆ ಬಿಚ್ಚಿಟ್ಟ ಸಿಂಗ್
ನವದೆಹಲಿ: ಧೋನಿ ಜೀವನದಲ್ಲಿ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ನಮ್ಮ ಸ್ನೇಹವನ್ನು ಮರೆತಿಲ್ಲ ಎಂದು ಭಾರತದ ಮಾಜಿ ವೇಗಿ ಆರ್‌ಪಿ ಸಿಂಗ್ ಅವರು ಮಾಜಿ ನಾಯಕನನ್ನು ಹಾಡಿ ಹೊಗಳಿದ್ದಾರೆ.
ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿಯಾಗಿದ್ದ ಆರ್‌ಪಿ ಸಿಂಗ್ ಅವರು, ನಂತರ ಉತ್ತಮ ಪ್ರದರ್ಶನ ತೋರಿದರೂ ತಂಡದಿಂದ ಹೊರಗೆ ಉಳಿದರು. ಆದರೆ ಧೋನಿ ಅವರು ಭಾರತ ತಂಡದ ನಾಯಕನಾಗಿ ಯಶಸ್ಸು ಕಂಡರು ಆತ ನಮ್ಮ ಸ್ನೇಹವನ್ನು ಮರೆತಿಲ್ಲ. ಇಂದು ಕೂಡ ನಮ್ಮ ಜೊತೆ ಬಂದು ಸಮಯ ಕಳೆಯುತ್ತಾರೆ ಎಂದು ಸಿಂಗ್ ಹೇಳಿದ್ದಾರೆ.
Advertisement
Advertisement
ಇನ್‍ಸ್ಟಾಗ್ರಾಮ್‍ನಲ್ಲಿ ಆಕಾಶ್ ಚೋಪ್ರಾ ಅವರ ಜೊತೆ ಲೈವ್ ಚಾಟ್‍ಗೆ ಬಂದಿದ್ದ ಆರ್‌ಪಿ ಸಿಂಗ್, ನಾನು ಮತ್ತು ಧೋನಿ ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದೇವು. ನಂತರ ಆತ ಟೀಂ ಇಂಡಿಯಾದ ನಾಯಕನಾದ, ನಾನೂ ತಂಡದಿಂದ ಹೊರಗೆ ಉಳಿದೆ. ಆದರೆ ನಮ್ಮಿಬ್ಬರ ಗೆಳೆತನ ಮಾತ್ರ ಹಾಗೇ ಉಳಿದಿದೆ. ಈಗಲೂ ಕೂಡ ನಾವು ಜೊತೆಯಲ್ಲೇ ಹೊರಗೆ ಹೋಗುತ್ತೇವೆ. ಆದರೆ ನಮಗೆ ಕ್ರಿಕೆಟ್ ವಿಚಾರದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ ಎಂದು ಆರ್‌ಪಿ ಸಿಂಗ್ ತಿಳಿಸಿದ್ದಾರೆ.
Advertisement
Advertisement
ಇದೇ ವೇಳೆ ಸಿಂಗ್ ನಾನು ಧೋನಿ ಬಳಿ ನಾನು ಭಾರತ ತಂಡದಲ್ಲಿ ಸತತವಾಗಿ ಆಡಲು ಏನೂ ಮಾಡಬೇಕು ಎಂದು ಕೇಳಿದ್ದೇನೆ. ಆದರೆ ಧೋನಿ ಸೂಕ್ತವಾದ ಉತ್ತರವನ್ನು ನೀಡಿಲ್ಲ. ನಾನು ಕೇಳಿದಾಗ ಧೋನಿ, ನೀನು ಕಷ್ಟಪಡುತ್ತಿದ್ದೀಯಾ ಆದರೆ ನಿನ್ನ ಬಳಿ ಲಕ್ ಇಲ್ಲ ಅಷ್ಟೇ ಎಂದು ಹೇಳುತ್ತಿದ್ದರು. ನನಗೂ ಕೂಡ ಧೋನಿ ಅವರ ಮಾತು ಸರಿ ಎನಿಸುತ್ತಿತ್ತು ಎಂದು ಆರ್‌ಪಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್‌ಪಿ ಸಿಂಗ್ ಅವರು 2005ರಲ್ಲಿ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದರು. ನಂತರ ಧೋನಿ ನಾಯಕತ್ವದಲ್ಲಿ 2007ರ ಟಿ-20 ವಿಶ್ವಕಪ್‍ನಲ್ಲಿ ಭಾರತದ ಪರವಾಗಿ ಅತೀ ಹೆಚ್ಚು ವಿಕೆಟ್ ಪಡೆದಿದ್ದರು. ಜೊತೆಗೆ ನಂತರ 2009ರಲ್ಲಿ ಐಪಿಎಲ್ ಗೆದ್ದ ಡೆಕ್ಕನ್ ಚಾರ್ಜಸ್ ತಂಡದಲ್ಲಿ ಆಡಿದ್ದರು. ಅಲ್ಲಿಯೂ ಕೂಡ ಐಪಿಎಲ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದು ಮಿಂಚಿದ್ದರು. ಇಷ್ಟಾದರೂ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನಗಳಿಸಲು ಆರ್‌ಪಿ ವಿಫಲರಾಗಿದ್ದರು.
ಈ ವಿಚಾರವಾಗಿಯೂ ಲೈವ್‍ನಲ್ಲಿ ಮಾತನಾಡಿರುವ ಆರ್‌ಪಿ ಸಿಂಗ್, ನಾನು ಐಪಿಎಲ್ ಮತ್ತು ಟಿ-10 ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆಯಲಿಲ್ಲ. ಐಪಿಎಲ್‍ನ ಮೂರು ಅವೃತ್ತಿಯಲ್ಲಿ ನಾನು ಬೆಸ್ಟ್ ಬೌಲರ್ ಆಗಿದ್ದೆ. ಅದರೂ ನನಗೆ ಚಾನ್ಸ್ ಸಿಗಲಿಲ್ಲ. ಬಹುಶಃ ಆಯ್ಕೆಗಾರರಿಗೆ ಮತ್ತು ತಂಡದ ನಾಯಕನಿಗೆ ನನ್ನ ಮೇಲೆ ನಂಬಿಕೆ ಇರಲಿಲ್ಲ ಅನಿಸುತ್ತದೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ಪರ 14 ಟೆಸ್ಟ್ ಮತ್ತು 58 ಏಕದಿನ ಪಂದ್ಯಗಳನ್ನು ಆಡಿದ್ದ ಆರ್‌ಪಿ ಸಿಂಗ್ ಟೆಸ್ಟ್ ನಲ್ಲಿ 40 ಮತ್ತು ಏಕದಿನದಲ್ಲಿ 69 ವಿಕೆಟ್ ಪಡೆದಿದ್ದರು. ಅಂತಯೇ 10 ಟಿ-20 ಪಂದ್ಯಗಳನ್ನು ಆಡಿದ್ದ ಸಿಂಗ್ ಅಲ್ಲಿಯೂ ಕೂಡ 15 ವಿಕೆಟ್ ಪಡೆದಿದ್ದರು. ಭಾರತ ಪರ 2011ರಲ್ಲಿ ಕೊನೆಯ ಪಂದ್ಯವನ್ನು ಆಡಿದ್ದ ಆರ್‌ಪಿ ಸಿಂಗ್ ಅವರು 2018ರಲ್ಲಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು.