ಇಂಗ್ಲೆಂಡ್ ರಾಣಿ ಎಲಿಜಬೆತ್‍ರ 2 ವರ್ಷದವರಿದ್ದಾಗಿನ ಫೋಟೋ ವೈರಲ್

Public TV
1 Min Read
Elizabeth photo

ಲಂಡನ್: ಇಂಗ್ಲೆಂಡ್ ರಾಣಿ ಎಲಿಜಬೆತ್ ಇಂದು 96 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ರಾಜಮನೆತನವು ರಾಣಿಯ 2 ವರ್ಷದವಳಾಗಿದ್ದಾಗ ತೆಗೆದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಫೋಟೋದಲ್ಲಿ ಅವರ ಮುಖದ ಮೇಲೆ ಹೊಳೆಯುವ ನಗುವಿನೊಂದಿಗೆ ತನ್ನ ಎರಡು ಕೈಗಳನ್ನು ಗದ್ದಕ್ಕೆ ಹಿಡಿದುಕೊಂಡು ನೇರವಾಗಿ ಕ್ಯಾಮೆರಾಗೆ ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ಜನ್ಮದಿನದ ಶುಭಾಶಯಗಳು ಮಹಾರಾಣಿಯವರೇ. ಇಂದು, ರಾಣಿ 96 ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವರು 2 ವರ್ಷದ ಮಗುವಿದ್ದಾಗ ತೆಗೆದ ಫೋಟೋವನ್ನು ನಾವು ಹಂಚಿಕೊಳ್ಳುತ್ತಿದ್ದೇವೆ ಎಂಬ ಸಾಲುಗಳನ್ನು ಬರೆದುಕೊಂಡು ಪೋಸ್ಟ್ ಮಾಡಿದೆ.

ನಂತರ ರಾಜಕುಮಾರಿ ಎಲಿಜಬೆತ್ ಯಾರ್ಕ್‍ನ ಡ್ಯೂಕ್ ಮತ್ತು ಡಚೆಸ್‍ನ ಹಿರಿಯ ಪುತ್ರಿಯಾಗಿದ್ದಾರೆ. ಅವರು ರಾಣಿಯಾಗಬೇಕೆಂದು ಎಂದಿಗೂ ನಿರೀಕ್ಷಿಸಿರಲಿಲ್ಲ. 1936 ರಲ್ಲಿ ಅವರ ಚಿಕ್ಕಪ್ಪ ಕಿಂಗ್ ಎಡ್ವರ್ಡ್ ಪದತ್ಯಾಗ ಮಾಡಿದಾಗ ಅವರ ಜೀವನ ಬದಲಾಯಿತು. ಅವರ ತಂದೆ ಕಿಂಗ್ ಜಾರ್ಜ್ ಆಗಿ ಪಟ್ಟಕ್ಕೆ ಏರಿದಾಗ ಯುವ ರಾಜಕುಮಾರಿ ಉತ್ತರಾಧಿಕಾರಿಯಾದರು.

1952 ರಲ್ಲಿ ತನ್ನ ತಂದೆಯ ಮರಣದ ಸಂದರ್ಭದಲ್ಲಿ ರಾಜಕುಮಾರಿ ಎಲಿಜಬೆತ್‍ಗೆ ಕೇವಲ 25 ವರ್ಷ. ಈ ವರ್ಷ ಸಿಂಹಾಸನದ ಮೇಲೆ 70 ವರ್ಷಗಳನ್ನು ಆಚರಿಸುತ್ತಿದ್ದಾರೆ. ಇದು ಬ್ರಿಟಿಷ್ ಇತಿಹಾಸದಲ್ಲಿ ಮೊದಲನೆಯದು ಎಂದು ಶೀರ್ಷಿಕೆ ಬರೆಯಲಾಗಿದೆ.

WhatsApp Image 2022 04 21 at 4.39.22 PM

ಅವರ ಜನ್ಮದಿನದ ಮೊದಲು, ರಾಜಮನೆತನವು ರಾಣಿಯ ಭವ್ಯವಾದ ಭಾವಚಿತ್ರವನ್ನು ಅವರ ಎರಡು ಕುದುರೆಗಳೊಂದಿಗೆ ಹಂಚಿಕೊಂಡಿದೆ. ಕಡು ಹಸಿರು ಬಣ್ಣದ ಮೇಲಂಗಿಯನ್ನು ಧರಿಸಿದ್ದ ರಾಣಿಯು ಗಾರ್ಡನ್‍ವೊಂದರಲ್ಲಿ ಪೋಸ್ ನೀಡಿದ್ದಾರೆ. ರಾಜಮನೆತನದ ಸೊಬಗನ್ನು ಹೊರಹಾಕಿದ ಅವರು, ಬೈಬೆಕ್ ಕೇಟೀ ಮತ್ತು ಬೈಬೆಕ್ ನೈಟಿಂಗೇಲ್ ಎಂಬ ಎರಡು ಬಿಳಿ ಕುದುರೆಗಳ ನಡುವೆ ನಿಂತಿದ್ದಾರೆ.

ಈ ವರ್ಷ ರಾಣಿ ಎಲಿಜಬೆತ್ ಅವರನ್ನು ಬಾರ್ಬಿ ಗೊಂಬೆಯಾಗಿ ಹೋಲಿಕೆ ಮಾಡಿ ಗೌರವಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *