ನವದೆಹಲಿ: ವಿಶ್ವದ ಹಳೆಯ ಮೋಟಾರ್‌ಸೈಕಲ್ ತಯಾರಿಕಾ ಸಂಸ್ಥೆಯಾದ ರಾಯಲ್ ಎನ್‍ಫೀಲ್ಡ್ ಅಗಸ್ಟ್ ತಿಂಗಳಿನಲ್ಲಿ ಒಟ್ಟು 69,377 ಬೈಕ್‍ಗಳನ್ನು ಮಾರಾಟ ಮಾಡುವ ಮೂಲಕ 2% ರಷ್ಟು ಮಾರಾಟವನ್ನು ಹೆಚ್ಚಿಸಿಕೊಂಡಿದೆ.
ಶನಿವಾರ ತನ್ನ 2018 ರ ಆಗಸ್ಟ್ ತಿಂಗಳ ವರದಿಯನ್ನು ಬಿಡುಗಡೆ ಮಾಡಿದ ಸಂಸ್ಥೆಯು, ಜುಲೈನಲ್ಲಿ ಒಟ್ಟು 66,872 ಬೈಕ್ ಗಳನ್ನು ಮಾರಾಟ ಮಾಡಿದ್ದರೆ, ಅಗಸ್ಟ್ ನಲ್ಲಿ 69,377 ಬೈಕ್ ಗಳನ್ನು ಮಾರಾಟ ಮಾಡುವ ಮೂಲಕ 2% ಮಾರಾಟವನ್ನು ಹೆಚ್ಚಿಸಿಕೊಂಡಿದೆ. 2017 ರ ಈ ಅವಧಿಯಲ್ಲಿ 67,977 ಬೈಕ್ ಗಳು ಮಾರಾಟವಾಗಿದ್ದವು. ಇದನ್ನೂ ಓದಿ: ಭಾರತೀಯ ಸೇನೆಗೆ ಗೌರವ ಸಲ್ಲಿಸಲು ಕ್ಲಾಸಿಕ್ ಸಿಗ್ನಲ್ಸ್ 350 ಎಬಿಎಸ್ ಬೈಕ್ ಬಿಡುಗಡೆ: ಬೆಲೆ ಎಷ್ಟು?
ರಾಯಲ್ ಎನ್‍ಫೀಲ್ಡ್ ರಫ್ತಿನಲ್ಲಿಯೂ ಸಹ 23% ರಷ್ಟು ಹೆಚ್ಚಳವಾಗಿದ್ದು, ಒಟ್ಟು 1,363 ಬೈಕ್ ಗಳು ರಫ್ತಾಗಿದ್ದರೆ, 2017 ರಲ್ಲಿ 1,105 ಬೈಕುಗಳನ್ನು ರಫ್ತು ಮಾಡಿತ್ತು.
ರಾಯಲ್ ಎನ್‍ಫೀಲ್ಡ್ ಕಂಪೆನಿಯು ತನ್ನ ಕ್ಲಾಸಿಕ್ 350 ಹಾಗೂ 500, ಬುಲೆಟ್ 350 ಹಾಗೂ 500 ಹಾಗೂ ಥಂಡರ್‌ಬರ್ಡ್ 350 ಹಾಗೂ 500ಸಿಸಿ ಮಾದರಿಗಳಲ್ಲಿ ಸಾಕಷ್ಟು ಬದಲಾವಣೆಗಳು ಮಾಡಿ, ನೂತನ ಆವೃತ್ತಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಮಾದರಿಗಳು ಗ್ರಾಹಕರನ್ನು ಆಕರ್ಷಿಸಿ, ಅತಿ ಹೆಚ್ಚು ಮಾರಾಟವಾಗುವಂತೆ ಮಾಡಿದ್ದವು.ಇದನ್ನೂ ಓದಿ: ದಾಖಲೆ ನಿರ್ಮಿಸಿದ ರಾಯಲ್ ಎನ್‍ಫೀಲ್ಡ್ ನ ಕ್ಲಾಸಿಕ್ 500 ಪೆಗಾಸಸ್ ಬೈಕ್: ಬೆಲೆ ಎಷ್ಟು? ವೈಶಿಷ್ಟ್ಯವೇನು
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv