ನವದೆಹಲಿ: ರಾಯಲ್ ಎನ್‍ಫೀಲ್ಡ್ ಕಂಪೆನಿಯು ಭಾರತೀಯ ಸೇನೆಗೆ ಗೌರವಾರ್ಥಕವಾಗಿ ತನ್ನ ನೂತನ ಕ್ಲಾಸಿಕ್ ಸಿಗ್ನಲ್ 350 ಎಬಿಎಸ್ ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಮಾಡಿದೆ.
ಭಾರತೀಯ ಸೇನೆಯೊಂದಿಗೆ 1952 ರಿಂದ ಸುದೀರ್ಘ 65 ವರ್ಷಗಳ ಪಯಣವನ್ನು ಮುಂದುವರಿಸಿರುವ ರಾಯಲ್ ಎನ್‍ಫೀಲ್ಡ್ ಮೋಟಾರ್‌ಸೈಕಲ್ ತಯಾರಿಕಾ ಸಂಸ್ಥೆಯು, ಸೇನೆಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ತನ್ನ ನೂನತ ಕ್ಲಾಸಿಕ್ ಸಿಗ್ನಲ್ 350 ಎಬಿಎಸ್ ಆವೃತ್ತಿಯನ್ನು ಬಿಡುಗಡೆಮಾಡಿದೆ.
Advertisement
ವಿಶೇಷವಾಗಿ ಈ ಬಾರಿಯ ಬೈಕಿನ ಇಂಜಿನ್ ಹಾಗೂ ಚಕ್ರದ ರಿಮ್ ಅನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ನಿರ್ಮಿಸಿದ್ದು, ಪ್ರತಿ ಬೈಕಿನ ಪೆಟ್ರೋಲ್ ಟ್ಯಾಂಕಿನ ಮೇಲೆ ಸೇನೆಯ ವಿಶಿಷ್ಟವಾದ ಸರಣಿಯ ಸಂಖ್ಯೆಯನ್ನು ಮುದ್ರಿಸಿದೆ.
Advertisement
Advertisement
ಏನಿದು ಎಬಿಎಸ್?
ಪ್ರಸ್ತುತ ಬೈಕ್ ಮತ್ತು ಕಾರುಗಳಲ್ಲಿ ವೇಗವನ್ನು ಕೂಡಲೇ ನಿಯಂತ್ರಿಸಲು ಆ್ಯಂಟಿಲಾಕ್ ಬ್ರೇಕಿಂಗ್ ಸಿಸ್ಟಂ(ಎಬಿಎಸ್) ಅಳವಡಿಸಲಾಗಿರುತ್ತದೆ. ವೇಗವಾಗಿ ಹೋಗುತ್ತಿದ್ದಾಗ ಸಡನ್ ಆಗಿ ಬ್ರೇಕ್ ಹಾಕಿದಾಗ ವಾಹನ ಪಲ್ಟಿ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಬೈಕಿನಲ್ಲಿ ಡಿಸ್ಕ್ ಬ್ರೇಕ್ ಇದ್ದಾಗ ಸ್ವಲ್ಪ ಅಪಾಯ ಜಾಸ್ತಿ ಇರುತ್ತದೆ. ಈ ಅಪಾಯವನ್ನು ತಪ್ಪಿಸಲು ಬ್ರೇಕ್ ಹಿಡಿದ ಕೂಡಲೇ ವೇಗವನ್ನು ನಿಯಂತ್ರಿಸಲು ಎಬಿಎಸ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಸಾಧಾರಣವಾಗಿ ಸ್ಫೋರ್ಟ್ಸ್ ಬೈಕ್ ಗಳಲ್ಲಿ ಎಬಿಎಸ್ ಹೊಂದಿರುವ ಮತ್ತು ಎಬಿಎಸ್ ಇಲ್ಲದ ಮಾದರಿಗಳು ಮಾರುಕಟ್ಟೆಯಲ್ಲಿರುತ್ತದೆ. ಎಬಿಎಸ್ ಹೊಂದಿರುವ ಬೈಕ್ ಬೆಲೆ ಜಾಸ್ತಿ ನಿಗದಿಯಾಗಿರುತ್ತದೆ.
Advertisement
ಬೆಲೆ ಎಷ್ಟು? ಯಾವ ಬಣ್ಣಗಳಲ್ಲಿ ಸಿಗುತ್ತೆ?
ಕ್ಲಾಸಿಕ್ ಸಿಗ್ನಲ್ಸ್ 350 ಎಬಿಎಸ್ ಬೈಕಿನ ಬೆಲೆ ಅಂದಾಜು 1.68 ಲಕ್ಷ ರೂಪಾಯಿಗಳಾಗಿದ್ದು, ಹಳೆಯ ಕ್ಲಾಸಿಕ್ ಮಾದರಿಗಿಂತ 16 ಸಾವಿರ ರೂ. ಹೆಚ್ಚಿರಲಿದೆ. ಗ್ರಾಹಕರು ಈ ಮಾದರಿಯನ್ನು ಬುಕ್ಕಿಂಗ್ ಮಾಡಲು ನೇರವಾಗಿ ಷೋರೂಂಗಳಿಗೆ ತೆರಳಬೇಕಾಗಿದೆ. ಯಾವುದೇ ಆನ್‍ಲೈನ್ ಬುಕ್ಕಿಂಗ್ ಇಲ್ಲ. ನೂತನ ಕ್ಲಾಸಿಕ್ ಸಿಗ್ನಲ್ಸ್ ಕೇವಲ ಎರಡು ಬಣ್ಯಗಳಲ್ಲಿ ಲಭ್ಯವಿದ್ದು, ಒಂದು ಏರ್‌ಬಾರ್ನ್ ಬ್ಲೂ ಹಾಗೂ ಸ್ಟೋರ್ಮ್‍ರೈಡ್ ಸ್ಯಾಂಡ್ ಬಣ್ಣಗಳಲ್ಲಿ ಲಭ್ಯವಿದೆ.
LIVE! From Indian Air Force Museum, Palam https://t.co/QnXf69BCUi
— Royal Enfield (@royalenfield) August 28, 2018
ಕ್ಲಾಸಿಕ್ ಸಿಗ್ನಲ್ಸ್ 350 ಎಬಿಎಸ್ ಎಂಜಿನ್ ಮತ್ತು ಸಸ್ಪೆನ್ಷನ್:
346 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 19.8-ಬಿಎಚ್‍ಪಿ @ 5250 ಆರ್‌ಪಿಎಂ ಜೊತೆಗೆ 28-ಎನ್‍ಎಂ ಟಾರ್ಕ್ ಹಾಗೂ 4000 ಆರ್‌ಪಿಎಂ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಫ್ರಂಟ್ ಸಸ್ಪೆನ್ಷನ್ ಟೆಲಿಸ್ಕೋಪಿಕ್ 35 ಎಂಎಂ ಫೋರ್ಕ್ಸ್ 130 ಎಂಎಂ ಸಸ್ಪೆನ್ಷನ್ ಹೊಂದಿದ್ದು, ಹಿಂದುಗಡೆ ಟ್ವಿನ್ ಗ್ಯಾಸ್ 5-ಹಂತದಲ್ಲಿ ಹೊಂದಾಣಿಕೆಯ ಮಾಡುವ 80 ಎಂಎಂ ಸಸ್ಪೆನ್ಷನ್ ಹೊಂದಿದೆ.
ಬ್ರೇಕ್ ಹಾಗೂ ಟೈರ್ ಗಳು:
ಮುಂದುಗಡೆ 90/90 ಅಳತೆಯ 19 ಇಂಚಿನ ಟೈರ್ ಹೊಂದಿದ್ದು, 280 ಎಂಎಂ ಡಿಸ್ಕ್ ಬ್ರೇಕ್ ಹೊಂದಿದ್ದು, ಹಿಂದುಗಡೆ 120/80 ಅಳತೆಯ 18 ಇಂಚಿನ ಟೈರ್ ಹೊಂದಿದ್ದು, 240 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಜೊತೆಗೆ ಎಬಿಎಸ್(ಆ್ಯಂಟಿಲಾಕ್ ಬ್ರೇಕಿಂಗ್) ಸಿಸ್ಟಮ್ ಅನ್ನು ಹೊಂದಿದೆ.
ಸುತ್ತಳತೆ ಹಾಗೂ ತೂಕ:
ಬೈಕ್ ನ ಉದ್ದ x ಅಗಲ x ಎತ್ತರ: 2160ಎಂಎಂ x 790ಎಂಎಂ x 1090ಎಂಎಂ ಆಗಿದ್ದು, ಗ್ರೌಂಡ್ ಕ್ಲಿಯರೆನ್ಸ್ 135 ಎಂಎಂ ಆಗಿದೆ. ಇಂಧನ ಸಾಮರ್ಥ್ಯ 13.5 ಲೀಟರ್ ಆಗಿದ್ದು, ಒಟ್ಟು ತೂಕ 134 ಕೆಜಿ ಇದೆ.
ಇತರೆ ಫೀಚರ್ ಗಳು:
ಹ್ಯಾಂಡಲ್ ಬಾರ್, ಹೆಡ್‍ಲೈಟ್, ಎಕ್ಸಾಸ್ಟ್ ಮಫ್ಲರ್, ಲೆದರ್ ಸ್ಟ್ಯಾಪ್, ಕ್ರಶ್ ಗಾರ್ಡ್, ಸೈಡ್ ಬ್ಯಾಗ್ಸ್ ಹಾಗೂ ದೊಡ್ಡದಾದ ವಿಂಡ್ ಸ್ಕ್ರೀನ್ ಕಾಣಬಹುದಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv