ಇಂದು ಬೆಂಗ್ಳೂರಿನಲ್ಲಿ ಆರ್‌ಸಿಬಿ V/s ಕೆಕೆಆರ್‌ ನಡುವೆ ಹೈವೋಲ್ಟೇಜ್‌ ಕದನ – ಯಾರಿಗೆ ಗೆಲುವು?

Public TV
2 Min Read
Virat 1

– ಕೊಹ್ಲಿ – ಗಂಭೀರ್‌ ಮತ್ತೆ ಮುಖಾಮುಖಿ
– 24.75 ಕೋಟಿ ರೂ. ಸರದಾರ ಮಿಚೆಲ್‌ ಸ್ಟಾರ್ಕ್‌ ಮೇಲೆ ಎಲ್ಲರ ಕಣ್ಣು

ಬೆಂಗಳೂರು: ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (chinnaswamy stadium) ಇಂದು (ಮಾ.29) ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಎದುರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಸಜ್ಜಾಗಿದೆ.

IPL 2022 KKR VS RCB

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಇದು 3ನೇ ಪಂದ್ಯವಾಗಿದ್ದು, ತವರಿನಲ್ಲಿ ನಡೆಯುತ್ತಿರುವ 2ನೇ ಪಂದ್ಯವಾಗಿದೆ. ಇನ್ನೂ ಕೆಕೆಆರ್‌ಗೆ ಆವೃತ್ತಿಯ 2ನೇ ಪಂದ್ಯವಾಗಿದೆ. ಇತ್ತಂಡಗಳು ಈವರೆಗೆ ಒಟ್ಟು 32 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್‌ಸಿಬಿ 14 ರಲ್ಲಿ ಗೆಲುವು ಸಾಧಿಸಿದ್ದರೆ, ಕೋಲ್ಕತ್ತಾ 18 ಪಂದ್ಯಗಳಲ್ಲಿ ಜಯಗಳಿಸಿದೆ. ಕೆಕೆಆರ್ ವಿರುದ್ಧ ಬೆಂಗಳೂರು ತಂಡ ಗರಿಷ್ಠ ರನ್‌ 213 ಆಗಿದ್ದರೆ, ಬೆಂಗಳೂರು ತಂಡದ ವಿರುದ್ಧ ಕೆಕೆಆರ್‌ ಗಳಿಸಿರುವ ಗರಿಷ್ಠ ರನ್‌ 222 ರನ್‌ ಆಗಿದೆ.  ಇದನ್ನೂ ಓದಿ: ಯಾರಾದ್ರು ಕೊಟ್ರೆ ನಾವೂ ತಿರುಗಿಸಿ ಕೊಡ್ತೀವಿ – ಮತ್ತೆ ಗಂಭೀರ್‌ಗೆ ಕೌಂಟರ್‌ ಕೊಟ್ಟ ಕಿಂಗ್‌ ಕೊಹ್ಲಿ

IPL 2023 RCB VS KKR 7

ಟಾಪ್‌-4ನಲ್ಲಿ ಕೋಲ್ಕತ್ತಾ:
ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೆಕೆಆರ್‌ ಪಡೆ, ತನ್ನ ತವರು ಮೈದಾನದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಜಯ ಸಾಧಿಸಿತ್ತು. ಅತ್ತ ಆರ್‌ಸಿಬಿ ತಂಡವು ಆಡಿರುವ 2 ಪಂದ್ಯಗಳಲ್ಲಿ, ಪಂಜಾಬ್‌ ವಿರುದ್ಧದ ಕೊನೆಯ ಪಂದ್ಯ ಗೆದ್ದು 2 ಅಂಕ ಸಂಪಾದಿಸಿದೆ. ತಂಡವು ಸದ್ಯ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಕೋಲ್ಕತಾ 1 ಪಂದ್ಯದಿಂದ 2 ಅಂಕ ಗಳಿಸಿ 4ನೇ ಸ್ಥಾನದಲ್ಲಿದೆ.

rcb 2 4

ಪಿಚ್‌ ರಿಪೋರ್ಟ್‌ ಹೇಗಿದೆ?
ಬೆಂಗಳೂರು ಮೈದಾನವು ಚಿಕ್ಕ ಬೌಂಡರಿಗಳನ್ನು ಹೊಂದಿರುವುದರಿಂದ ಇದು ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ಪವರ್‌ ಹಿಟ್ಟರ್‌ಗಳಿದ್ದಾರೆ. ಹೀಗಾಗಿ ಬ್ಯಾಟರ್‌ಗಳಿಗೆ ಪಿಚ್‌ ಸ್ವರ್ಗವಾಗಿದ್ದು, ರನ್‌ ಹೊಳೆ ಹರಿಯುವ ಸಾಧ್ಯತೆಗಳಿವೆ.  ಇದನ್ನೂ ಓದಿ: ಆರ್‌ಸಿಬಿ ದಾಖಲೆ ಉಡೀಸ್‌ – ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೈದರಾಬಾದ್‌

ಸ್ಟಾರ್ಕ್‌ ಮೇಲೆ ಕಣ್ಣು:
ಐಪಿಎಲ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಬಿಕರಿಯಾಗಿರುವ ಮಿಚೆಲ್‌ ಸ್ಟಾರ್ಕ್‌ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಭಾರೀ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಮಿಚೆಲ್‌ ಸ್ಟಾರ್ಕ್‌ ಮೊದಲ ಪಂದ್ಯದಲ್ಲಿ ಒಂದೇ ಒಂದು ವಿಕೆಟ್‌ ಪಡೆಯದೇ 4 ಓವರ್‌ಗಳಲ್ಲಿ 53 ರನ್‌ ಚಚ್ಚಿಸಿಕೊಂಡು, ಟೀಕೆಗೆ ಗುರಿಯಾಗಿದ್ದರು. ಹಾಗಾಗಿ ಈ ಪಂದ್ಯದಲ್ಲಾದರೂ ಆರ್‌ಸಿಬಿ ಕಲಿಗಳನ್ನು ಕಟ್ಟಿಹಾಕುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

Virat Kohli

ಗಂಭೀರ್‌-ಕೊಹ್ಲಿ ಮತ್ತೆ ಮುಖಾಮುಖಿ:
17ನೇ ಆವೃತ್ತಿಯಲ್ಲಿ ಮತ್ತೆ ತವರು ತಂಡಕ್ಕೆ ಮೆಂಟರ್‌ ಆಗಿ ಮರಳಿರುವ ಕೆಕೆಆರ್‌ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಹಾಗೂ ಕೊಹ್ಲಿ ಮತ್ತೆ ಮುಖಾಮುಖಿಯಾಗುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಕೋಚ್‌ ಆಗಿದ್ದ ಗಂಭೀರ್‌ ಹಾಗೂ ಆರ್‌ಸಿಬಿ ಆಟಗಾರ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದು, ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.

Share This Article