– ಕುಗ್ಗದಿರಿ ʻಮುಂದಿನ ಸಲ ಕಪ್ ನಮ್ದೇʼ ಅಂದ್ರು ಫ್ಯಾನ್ಸ್
ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ (IPL 2024) ಲೀಗ್‌ನಲ್ಲಿ ʻಇದು ಆರ್‌ಸಿಬಿಯ ಹೊಸ ಅಧ್ಯಾಯʼ ಎಂಬ ಘೊಷವಾಕ್ಯದೊಂದಿಗೆ ಸರಣಿ ಆರಂಭಿಸಿದ ಆರ್‌ಸಿಬಿ, 2024ರ ಆವೃತ್ತಿಗೆ ವಿದಾಯ ಹೇಳಿದೆ. ಆವೃತ್ತಿಯಲ್ಲಿ ಹಲವು ಏಳು-ಬೀಳುಗಳನ್ನು ಕಂಡ ಆರ್‌ಸಿಬಿ (Royal Challengers Bengaluru) ತಂಡ ಈ ಬಾರಿಯೂ ಕಪ್ ಗೆಲ್ಲದೇ ಸೋಲಿನೊಂದಿಗೆ ಹಿಂತಿರುಗಿದೆ. ಅಭಿಮಾನಿಗಳ ನಡುವೆ ನೂರಾರು ನೆನಪುಗಳನ್ನು ಬಿಟ್ಟುಹೋಗಿದೆ.
Unfortunately, sport is not a fairytale and our remarkable run in #IPL2024 came to an end. Virat Kohli, Faf du Plessis and Dinesh Karthik express their emotions and thank fans for their unwavering support. ❤️#PlayBold #ನಮ್ಮRCB pic.twitter.com/FYygVD3UiC
— Royal Challengers Bengaluru (@RCBTweets) May 23, 2024
Advertisement
17ನೇ ಆವೃತ್ತಿಯಲ್ಲಿ ಕಂಡ ಅನೇಕ ಏಳು-ಬೀಳುಗಳ ನೆನಪುಗಳನ್ನು ಮೆಲುಕು ಹಾಕಿರುವ ಆರ್‌ಸಿಬಿ ಫ್ರಾಂಚೈಸಿ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿದ್ದು, ಮುಂದಿನ ಸಲ ಕಪ್ ನಮ್ದೇ ಅನ್ನೋ ಸಂದೇಶವನ್ನೂ ನೀಡಿದೆ. ಇದನ್ನೂ ಓದಿ: IPL 2024: ಆರ್‌ಸಿಬಿ ಹೃದಯವಿದ್ರಾವಕ ಸೋಲಿನೊಂದಿಗೆ ಐಪಿಎಲ್‌ಗೆ ವಿದಾಯ ಹೇಳಿದ ʻಡಿಕೆʼ
Advertisement
So many memories, good and bad, but it’s been a journey to remember and cherish! ♥️
We can say for sure that the RCB fans are super proud of the character you guys showed! 🫡
Once an RCBian, always an RCBian… 🤗#PlayBold #ನಮ್ಮRCB #IPL2024 pic.twitter.com/2cCfoWOB8n
— Royal Challengers Bengaluru (@RCBTweets) May 22, 2024
Advertisement
ಈ ಆವೃತ್ತಿಯಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದೇವೆ. ಒಳ್ಳೆಯದ್ದು, ಕೆಟ್ಟದ್ದು ಎಲ್ಲವನ್ನು ನೆನಪಿನಲ್ಲಿಡುವ, ಪಾಲಿಸುವ ಪ್ರಯಾಣವೂ ಇದಾಗಿದೆ. ನೀವು ಮೈದಾನದಲ್ಲಿ ತೋರಿದ ಪಾತ್ರದ ಬಗ್ಗೆ ಆರ್‌ಸಿಬಿ ಅಭಿಮಾನಿಗಳಿಗೆ (RCB Fans) ಹೆಮ್ಮೆಯಿದೆ. ಹಾಗಾಗಿ ಖಚಿತವಾಗಿ ಹೇಳಬಹುದು ʻಆರ್‌ಸಿಬಿಯನ್ ಯಾವಾಗಲೂ ಆರ್‌ಸಿಬಿಯನ್ʼ ಎಂದು ಫ್ರಾಂಚೈಸಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
Advertisement
Remember, they wrote us off.
Remember, they said we were finished.
Remember, we had less than 1% chance.
Remember, when nobody else believed in you, our 12th Man Army did.
Remember, you kept your heads and our hopes up.
Remember, you turned that 1% into 100%.
Remember, we… pic.twitter.com/vNez6sISLe
— Royal Challengers Bengaluru (@RCBTweets) May 23, 2024
ಮುಂದುವರಿದು.. ʻʻನೆನಪಿಡಿ.. ಕೆಲವರು ನಮ್ಮ ಕಥೆ ಮುಗಿಯಿತು ಅಂತ ಅವರು ಹೇಳಿದ್ದರು. ನೆನಪಿಡಿ ನಮಗೆ 1% ಗಿಂತಲೂ ಕಡಿಮೆ ಅವಕಾಶವಿತ್ತು. ನೆನಪಿಡಿ ಬೇರೆ ಯಾರಿಗೂ ನಮ್ಮ ಮೇಲೆ ನಂಬಿಕೆಯಿಲ್ಲದಿದ್ದಾಗ 12 ಆಟಗಾರರ ಆರ್ಮಿ ತಮ್ಮ ಮೇಲೆ ವಿಶ್ವಾಸ ಹೊಂದಿದ್ದರು. ನೆನಪಿಡಿ.. ಎಂದಿಗೂ ಆರ್ಮಿ ತಮ್ಮ ಮೇಲಿನ ಭರವಸೆ ಕಳೆದುಕೊಳ್ಳಲಿಲ್ಲ. ನೆನಪಿಡಿ.. ತಮಗಿದ್ದ 1% ಅವಕಾಶವನ್ನು 100% ಆಗಿ ಪರಿವರ್ತಿಸಿದಿರಿ.. ಇದು ನಿಜಕ್ಕೂ ಸಾರ್ಥಕʼʼ ಸದಾ ನಾವು ನಿಮ್ಮನ್ನು ಪ್ರೀತಿಸುತ್ತೇವೆ, ಈ ಎಲ್ಲಾ ನೆನಪುಗಳೊಂದಿಗೆ ಧನ್ಯವಾದ ಹೇಳುತ್ತಾ.. ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಕನಸು ಭಗ್ನ – ರಾಜಸ್ಥಾನಕ್ಕೆ 4 ವಿಕೆಟ್‌ಗಳ ಜಯ
ಆರ್‌ಸಿಬಿಯ ಈ ಭಾವುಕ ಸಂದೇಶಕ್ಕೆ ಅಭಿಮಾನಿಗಳೂ ಭಾವುಕರಾಗಿದ್ದಾರೆ. ಆರ್‌ಸಿಬಿ ಕಪ್ ಗೆಲ್ಲದೇ ಇದ್ದರೂ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದೆ. ಅದುವೇ ನಮಗೆ ಸಾಕು. ಆತ್ಮವಿಶ್ವಾಸ ಎಂದಿಗೂ ಕಳೆದುಕೊಳ್ಳದಿರಿ, ನಾವು ಎಂದೆಂದೆಗೂ ನಿಮ್ಮ ಅಭಿಮಾನಿಗಳೇ.. ʻಮುಂದಿನ ಸಲ ಕಪ್ ನಮ್ದೇʼ ʻಜೈ ಆರ್‌ಸಿಬಿʼ ಎಂದೆಲ್ಲಾ ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.