– ಫೈನಲ್‌ಗೆ ಡೆಲ್ಲಿ, ಸೆಮಿಸ್‌ಗೆ ಮುಂಬೈ
ಮುಂಬೈ: 2025ರ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ಕೊನೆಯ ಪಂದ್ಯವನ್ನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಅಭಿಯಾನಕ್ಕೆ ವಿದಾಯ ಹೇಳಿದೆ. ಸತತ 5 ಸೋಲುಗಳಿಂದ ಲೀಗ್ ಸುತ್ತಿನಲ್ಲೇ ಹೊರಬಿದ್ದ ಆರ್‌ಸಿಬಿ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 11 ರನ್‌ಗಳ ರೋಚಕ ಗೆಲುವು ಸಾಧಿಸಿದೆ.
ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಮಹಿಳಾ ತಂಡ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 199 ರನ್ ಸಿಡಿಸಿತ್ತು. 200 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಗಿ ಸೋಲೊಪ್ಪಿಕೊಂಡಿದೆ. ಆದ್ರೆ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡ ಸೆಮಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈಗಾಗಲೇ 10 ಅಂಕಗಳೊಂದಿಗೆ ಉತ್ತಮ ರನ್‌ರೇಟ್‌ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಸತತ 3ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಮುಂಬೈ ಪರ ನ್ಯಾಟ್ ಸಿವರ್ ಬ್ರಂಟ್ 35 ಎಸೆತಗಳಲ್ಲಿ 2 ಸಿಕ್ಸರ್, 9 ಬೌಂಡರಿ ನೆರವಿನಿಂದ 69 ರನ್ ಕಲೆಹಾಕಿದರು. ಹರ್ಮನ್ ಪ್ರೀತ್ ಕೌರ್ 18 ಎಸೆತಗಳಲ್ಲಿ 20 ರನ್, ಹೇಲಿ ಮ್ಯಾಥ್ಯೂಸ್ 16 ಎಸೆತಗಳಲ್ಲಿ 19 ರನ್ ಕಲೆಹಾಕಿದರು.
ಆರ್‌ಸಿಬಿ ಪರ ಎಲಿಸ್ ಪೆರ್ರಿ 2 ವಿಕೆಟ್ , ಕಿಮ್ ಗಾರ್ತ್ 2 ವಿಕೆಟ್, ಸ್ನೇಹ್ ರಾಣಾ 3 ವಿಕೆಟ್, ಜಾರ್ಜಿಯಾ 1 ವಿಕೆಟ್, ಹೀದರ್ ಗ್ರಹಾಂ 1 ವಿಕೆಟ್ ಕಬಳಿಸಿದರು.
ಆರ್‌ಸಿಬಿ ಪರ ಸ್ಮೃತಿ ಮಂಧಾನ 37 ಎಸೆತಗಳಲ್ಲಿ 3 ಸಿಕ್ಸರ್, 6 ಬೌಂಡರಿ ನೆರವಿಂದ 53 ರನ್, ಎಲಿಸ್ ಪೆರ್ರಿ ಔಟಾಗದೆ 38 ಎಸೆತಗಳಲ್ಲಿ 1 ಸಿಕ್ಸರ್, 3 ಬೌಂಡರಿ ಸಿಡಿಸಿ 49 ರನ್, ರಿಚಾ ಘೋಷ್ 22 ಎಸೆತಗಳಲ್ಲಿ 1 ಸಿಕ್ಸರ್, 5 ಬೌಂಡರಿ ನೆರವಿಂದ 36 ರನ್, ಜಾರ್ಜಿಯಾ 10 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ನೆರವಿಂದ 31 ಕಲೆ ಹಾಕಿದರು.
ಮುಂಬೈ ಪರ ಹೇಲಿ ಮ್ಯಾಥ್ಯೂಸ್ 2 ವಿಕೆಟ್, ಅಮೆಲಿಯಾ ಕೇರ್ 1 ವಿಕೆಟ್ ಕಬಳಿಸಿದರು.