ಬೆಂಗಳೂರು: ನಗರದ ಜೈಲಿನಲ್ಲಿ ಇತ್ತೀಚೆಗೆ ಗಾಂಜಾ, ಮೊಬೈಲ್ ಯಾವುದು ಇಲ್ಲ. ಅಷ್ಟರ ಮಟ್ಟಿಗೆ ಸ್ಟ್ರಿಕ್ಟ್ ಮಾಡಲಾಗಿದೆ. ಅದರ ನಡುವೆಯೂ ರೌಡಿಯೊಬ್ಬ ಫೇಸ್‍ಬುಕ್‍ನಿಂದಲೇ ಆವಾಜ್ ಹಾಕಿದ್ದಾನೆ
ನಟೋರಿಯಸ್ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ರಾಬರಿ ಕಿಟ್ಟಿ ಎಂಬಾತ ಮೆಸೇಂಜರ್ ನಿಂದಲೇ ಆವಾಜ್ ಹಾಕಿದ್ದಾನೆ. 2016ರಲ್ಲಿ ಕೆಂಗೇರಿ ಉಪನಗರ ಬಳಿ ಮಾರ ಹನುಮ ಎಂಬಾತನನ್ನ ಕ್ವಾಲೀಸ್‍ನಲ್ಲಿ ಬರುವಾಗ ಕೊಚ್ಚಿ ಕೊಲ್ಲಲಾಗಿತ್ತು. ಕೇಸ್‍ನ ಪ್ರಮುಖ ಆರೋಪಿ ಶ್ರೀನಿವಾಸ್ ಅಲಿಯಾಸ್ ರಾಬರಿ ಕಿಟ್ಟಿ, ಕಿರಣ್ ಅಲಿಯಾಸ್ ತಮಟೆ, ಸುನಿಲ್ ಅಲಿಯಾಸ್ ಸಿಲಿಂಡರ್ ಎಂಬವರು ಸೇರಿ 6 ಜನ ಜೈಲು ಸೇರಿದ್ರು. ಬೇಲ್ ಕೂಡ ಸಿಕ್ಕಿರಲಿಲ್ಲ.
Advertisement
ಈ ಕೇಸ್‍ಗೆ ಮೃತ ಮಾರಹನುಮನ ಮಗ ವಿಜಯ್ ಕುಮಾರ್ ಪ್ರಮುಖ ಸಾಕ್ಷಿ. ಹೀಗಾಗಿ ಆತ ಏನಾದ್ರೂ ಸಾಕ್ಷಿ ಹೇಳಿಬಿಟ್ರೆ ಎಡವಟ್ಟಾಗುತ್ತೆ ಅಂತಾ ಜೈಲಿನಲ್ಲಿ ಇದ್ದುಕೊಂಡೇ ಶ್ರೀನಿವಾಸ ಒತ್ತಡ ಹಾಕ್ತಿದ್ದ. ಇಷ್ಟು ಸಾಲದು ಅಂತ ಪರಪ್ಪನ ಅಗ್ರಹಾರದಲ್ಲೇ ಕೂತು ಫೇಸ್‍ಬುಕ್ ಮೆಸೆಂಜರ್‍ನಿಂದ ಆಡಿಯೋ ಸೆಂಡ್ ಮಾಡಿ, ರಾಜಿ ಮಾಡ್ಕೋ ಅಂತ ಧಮ್ಕಿ ಹಾಕಿದ್ದಾನೆ. ಇದರಿಂದ ಬೆಚ್ಚಿರುವ ಮಾರಹನುಮ ಅವರ ಪುತ್ರ ವಿಜಯ್ ಈಗ ಪೊಲೀಸರಿಗೆ ದೂರು ನೀಡಿದ್ದಾರೆ.