ಬಳ್ಳಾರಿ: ನೆಟೋರಿಸ್ ರೌಡಿ ಬಂಡಿ ರಮೇಶನನ್ನು ಬಳ್ಳಾರಿಯ ಹೊರವಲಯದ ಗುಗ್ಗರಹಟ್ಟಿಯ ಸಾಯಿ ಪವನ್ ಡಾಬಾದಲ್ಲಿ ಇಂದು ಮಧ್ಯಾಹ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ.
2 ಕೊಲೆ ಪ್ರಕರಣ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಂಡಿ ರಮೇಶನನ್ನು ರುಂಡ ಛಿದ್ರವಾಗುವಂತೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕಳೆದ ವರ್ಷ ಬಿಜೆಪಿ ಪಕ್ಷ ಸೇಪರ್ಡೆಯಾಗಿ ಬಳ್ಳಾರಿ ನಗರ ಎಸ್‍ಟಿ ಮೋರ್ಚಾ ಅಧ್ಯಕ್ಷನಾಗಿದ್ದ ರಮೇಶ, ಇತ್ತೀಚೆಗಷ್ಟೆ ಬಿಜೆಪಿ ತೊರೆದಿದ್ದ.
Advertisement
ಬಂಡಿ ರಮೇಶ ಕೊಲೆಯಾಗುತ್ತಿದ್ದಂತೆ ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರೆಸಿದ್ದಾರೆ.