ವಿಜಯಪುರ: ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದು ವಿಜಯಪುರದಲ್ಲಿ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ರೌಡಿಗಳ ಪರೇಡ್ ನಡೆಸಿದರು.
ಜಿಲ್ಲೆಯಲ್ಲಿ ಅಧಿಕ ಕ್ರೈಂ ಗಳು ನಡೆಯುವುದರಿಂದ ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡು ತಾಕೀತು ಮಾಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಐಜಿಪಿ, ಒಂದೇ ಕೋಮುವಿನ ಗುಂಪುಗಳು ಜಗಳದಲ್ಲಿ ಕಚ್ಚಾಬಾಂಬ್ ಬಳಕೆ ಮಾಡಿದ್ದಾರೆ. ಈ ಬಾಂಬ್ ನಿಷೇಧಿತ ಆಗಿದ್ದು, ನಾಡಬಾಂಬ್ ಬಳಕೆ ಮಾಡಿದ ಸ್ಥಳಕ್ಕೆ ಸಂಜೆ ಭೇಟಿಕೊಡುವುದಾಗಿ ತಿಳಿಸಿದರು. ಅಲ್ಲದೆ ನಿನ್ನೆ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದವರ ಬಳಿ ಹಣ ಕೇಳಿದ್ದಕ್ಕೆ ಪೊಲೀಸ್ ಪೇದೆ ಪರಶುರಾಮನನ್ನು ಅಮಾನತು ಮಾಡಿರುವುದಾಗಿ ತಿಳಿಸಿದರು. ಇದನ್ನು ಓದಿ: ದೂರು ನೀಡಲು ಬಂದವನ ಬಳಿ ಲಂಚ ಪಡೆದ ಪೊಲೀಸ್ ಪೇದೆ! -ವಿಡಿಯೋ ನೋಡಿ
ಇದೀಗ 491 ವ್ಯಕ್ತಿಗಳು ಜಿಲ್ಲಾಧಿಕಾರಿಗೆ ವೆಪನ್ ಲೈಸೆನ್ಸ್ ಗೆ ಮನವಿ ಮಾಡಿದ್ದಾರೆ. ಅದರಲ್ಲಿ ಯಾರಿಗೆ ಬೇಕು ಅನ್ನುವುದನ್ನು ಗಮನಿಸಿ ಆಮೇಲೆ ಕೊಡುತ್ತೇವೆ. ರೌಡಿಗಳು ಚುರುಕಾಗಿರುವ ಆಧಾರದ ಮೇಲೆ ಪರೇಡ್ ಗೆ ಕರೆಸಲಾಗಿದೆ. 20 ವರ್ಷಗಳಿಂದ ಯಾರ ಹೆಸರಿನಲ್ಲಿ ಕೇಸ್ ಗಳಿಲ್ಲ ಅವರ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ತೆಗೆಯುತ್ತೇವೆ. ನಮ್ಮ ನಿಗಾ ಯಾವಾಗಲೂ ಭೀಮಾತೀರದ ಮೇಲಿರುತ್ತೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=Tw2RFpT6AJk