ಬೆಂಗಳೂರು: ನಗರದ ಡಿಜೆ ಹಳ್ಳಿ ಪಿಎಸ್‍ಐ ನಯಾಜ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು ರೌಡಿಗಳಿಗೆ ಬೆಂಗಳೂರು ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ.
ಮಂಗಳವಾರ ರಾತ್ರಿ ಏರ್‍ಪೋರ್ಟ್ ರಸ್ತೆಯ ಚಿಕ್ಕಜಾಲ ಬಳಿ ರೌಡಿ ಇಮ್ರಾನ್, ಮಜೀರ್ ಮತ್ತು ವಾಜೀಮ್ ಓಡಾಡ್ತಿದ್ದಾರೆ ಅನ್ನೋ ಮಾಹಿತಿ ತಿಳಿದ ಸಿಸಿಬಿ ಎಸಿಪಿ ಮಹದೇವಪ್ಪ ತಂಡ ಆರೋಪಿಗಳ ಬೆನ್ನು ಬಿದ್ದು, ಚಿಕ್ಕಜಾಲ ಬಳಿ ಅಂಡರ್ ಪಾಸ್ ಬಳಿ ಕಾರನ್ನು ಅಡ್ಡ ಹಾಕಿದ್ರು.
Advertisement
ಇದನ್ನೂ ಓದಿ: ಎಸ್‍ಐ ಮೇಲೆ ಮಚ್ಚು, ಲಾಂಗ್ ಬೀಸಿ ಹಲ್ಲೆ ಮಾಡಿದ ದುಷ್ಕರ್ಮಿಗಳು
Advertisement
ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಇಮ್ರಾನ್ ಮತ್ತು ಮಜೀರ್ ಮಾರಕಾಸ್ತ್ರಗಳಿಂದ ಸಿಸಿಬಿ ಇನ್ಸ್ ಪೆಕ್ಟರ್ ಅನಿಲ್, ಮುಖ್ಯ ಪೇದೆ ಮೂರ್ತಿ ಹಲ್ಲೆ ಮಾಡಿದ್ದಾರೆ. ಇದರಿಂದ ಆತಂಕಗೊಂಡ ಇನ್ಸ್ ಪೆಕ್ಟರ್ ಅನಿಲ್ ಅತ್ಮರಕ್ಷಣೆಗಾಗಿ ಇಬ್ಬರು ರೌಡಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಇಬ್ಬರೂ ರೌಡಿಗಳು ಪೊಲೀಸರ ಕೈಗೆ ಸಿಕ್ಕಿದ್ದು, ಸದ್ಯ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಇದನ್ನೂ ಓದಿ: ಎಸ್‍ಐ ನಯಾಜ್ ಮೇಲೆ ಲಾಂಗು ಮಚ್ಚಿನಿಂದ ಹಲ್ಲೆ – ರೌಡಿ ನದೀಮ್ ಗ್ಯಾಂಗ್‍ನ ಕೃತ್ಯ ಸಿಸಿಟಿವಿಯಲ್ಲಿ ಸೆರೆ
Advertisement
ಏನಿದು ಘಟನೆ?: ಕಳೆದ ಗುರವಾರ ಸಂಜೆ ಡಿಜಿ ಹಳ್ಳಿಯ ಶಾಂಪುರ ರಸ್ತೆಯಲ್ಲಿ ರೌಡಿ ಶೀಟರ್ ಉಮರ್ ನ ಕೊಲೆ ಮಾಡಲು ನದೀಮ್ ಗ್ಯಾಂಗ್ ಅಟ್ಟಿಸಿಕೊಂಡು ಹೋಗ್ತಿತ್ತು. ಇದನ್ನ ನೋಡಿದ ಡಿಜಿ ಹಳ್ಳಿಯ ಸಬ್ ಇನ್ಸ್ ಪೆಕ್ಟರ್ ನಯಾಜ್ ಆರೋಪಿಗಳನ್ನ ಹಿಡಿಯಲು, ಹಾಗೂ ಕೊಲೆ ಮಾಡೋದನ್ನ ತಡೆಯಲು ಗ್ಯಾಂಗ್‍ನ ಹಿಂದೆ ಓಡಿದ್ದರು. ಕೊನೆಗೆ ನದೀಮ್ ಗ್ಯಾಂಗ್ ಸಬ್ ಇನ್ಸ್ ಪೆಕ್ಟರ್ ನಯಾಜ್ ಮೇಲೆಯೇ ಮುಗಿಬಿದ್ದು, ಮಚ್ಚಿನಿಂದ ನಯಾಜ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
https://www.youtube.com/watch?v=v1NHipYj3_E