ಮೈಸೂರು: ಅಪ್ಪ ಸಿಎಂ, ಡಿಸಿಎಂ ಹಿಂದೆ ಓಡಾಡುತ್ತಿದ್ದರೆ, ಇತ್ತ ಮಗ ಊರೆಲ್ಲಾ ಪುಂಡಾಟ ಮಾಡುತ್ತಿದ್ದಾನೆ. ಮೈಸೂರಿನಲ್ಲಿ (Mysuru) ಮೊಬೈಲ್ ಅಂಗಡಿಗೆ ನುಗ್ಗಿ ಯುವಕನೊಬ್ಬ ಪುಂಡಾಟ ಮಾಡಿದ್ದ. ಆತನ ಹೆಸರು ನೆವಲ್ ಅಶೋಕ್. ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಆಗಿರುವ ನೆವಲ್‌ನ ತಂದೆ ಅಶೋಕ್ (Ashok) ಕಾಂಗ್ರೆಸ್ (Congress) ಪಕ್ಷದ ಮುಖಂಡ.
ಸಿಎಂ ಹಾಗೂ ಡಿಸಿಎಂ ಮೈಸೂರಿಗೆ ಬಂದಾಗಲೆಲ್ಲಾ ಅವರ ಹಿಂದೆ ಅಶೋಕ್ ಇರುತ್ತಾನೆ. ನೆವಲ್ ಈ ಹಿಂದೆ ಕೂಡ ಇಂತಹದೇ ಪ್ರಕರಣದಲ್ಲಿ ಭಾಗಿಯಾಗಿದ್ದ. ಇದೀಗ ಮತ್ತೆ ಪುಂಡಾಟ ಮಾಡಿದ್ದಾನೆ. ಕಾಂಗ್ರೆಸ್ ಮುಖಂಡ ಅಶೋಕ್ ಮಗನ ಪುಂಡಾಟದಿಂದ ಈಗ ಅಪ್ಪನ ಚರಿತ್ರೆಯೂ ಒಂದೊಂದಾಗಿ ಹೊರ ಬರುತ್ತಿವೆ.
ಕಾಂಗ್ರೆಸ್ ಮುಖಂಡ ಅಶೋಕ್ ರೌಡಿ ಶೀಟರ್ ಆಗಿದ್ದು, ಈತನಿಗೆ ಮೊನ್ನೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅಶೋಕ್‌ಗೆ ನೀಡಲಾಗಿದೆ. ಕಾಂಗ್ರೆಸ್ ಮುಖಂಡನಾಗಿರುವ ಅಶೋಕ್ ಮೇಲೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟ ಇದೆ. ಇದನ್ನೂ ಓದಿ: ದೆಹಲಿಯಲ್ಲಿ ತಗ್ಗಿದ ವಾಯು ಮಾಲಿನ್ಯ – ಶಾಲೆ, ಕಾಲೇಜುಗಳು ಪುನಾರಂಭ
ಅಶೋಕ್ ಪುತ್ರ ನೇವಲ್ ಅಶೋಕ್‌ನಿಂದ ಪುಂಡಾಟ ಪ್ರಕರಣ ಬೆಳಕಿಗೆ ಬಂದಿತ್ತು. ಕಾಂಗ್ರೆಸ್ ಮುಖಂಡನಾಗಿರುವ ಅಶೋಕ್ ಹೆಸರಿನಲ್ಲೂ ಆರೋಪಗಳಿರುವುದು ಈಗ ಬೆಳಕಿಗೆ ಬಂದಿದೆ. ಸಿಎಂ, ಡಿಸಿಎಂ ಹಿಂದಿಂದೆ ಓಡಾಡುತ್ತಿರುವ ಅಶೋಕ್‌ಗೆ ಇದೇ ಕಾರಣಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆಯಾ ಎಂಬುದಾಗಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ವಿಷ ಕುಡಿದ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ ಶಾಸಕ