Connect with us

Bengaluru City

ಇದು ನೋಡಲಾಗದ, ಆದರೆ ಬೆಚ್ಚಿಬೀಳಿಸುವ ದೃಶ್ಯ: ಅಟ್ಟಾಡಿಸಿಕೊಂಡು ಎಳೆದಾಡಿ ಬರ್ಬರ ಹತ್ಯೆ

Published

on

Share this

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗ್ಯಾಂಗ್ ವಾರ್ ಆರಂಭಗೊಂಡಿದ್ದು, ಬುಧವಾರ ಬೆಳ್ಳಂಬೆಳಗ್ಗೆ ರೌಡಿಯೊಬ್ಬನನ್ನು ಮತ್ತೊಂದು ಗ್ಯಾಂಗ್ ಹತ್ಯೆ ಮಾಡಿದೆ.

ಸುನೀಲ್ ಹತ್ಯೆಯಾದ ರೌಡಿ ಶೀಟರ್. ಸ್ಪಾಟ್ ನಾಗನ ಗ್ಯಾಂಗ್ ಬಸವೇಶ್ವರನಗರದಲ್ಲಿ ನೆಲೆಸಿದ್ದ ಸುನೀಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದೆ.

ಕೊಲೆ ಹೇಗಾಯ್ತು?
ಬೆಳಗ್ಗೆ ಎಂಟು ಗಂಟೆ ವೇಳೆಗೆ ನಾಲ್ವರ ತಂಡದಿಂದ ಸುನೀಲ್ ಮನೆ ಮೇಲೆ ದಾಳಿ ನಡೆದಿದೆ. ಈ ವೇಳೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡು ಪಾರಾಗಲು ರೌಡಿ ಸುನೀಲ್ ಯತ್ನಿಸಿದ್ದಾನೆ. ಈ ವೇಳೆ ಮನೆಯ ಬಾಗಿಲು ಒಡೆದು ಒಳನುಗ್ಗಿ ಹೊರಗಡೆ ಎಳೆದು ಸ್ಪಾಟ್ ನಾಗನ ಗ್ಯಾಂಗ್ ಕೊಲೆ ಮಾಡಿ ಪರಾರಿಯಾಗಿದೆ. ದಾಳಿ ವೇಳೆ ಸುನೀಲ್ ಪೋಷಕರಿಗೂ ಗಾಯವಾಗಿದೆ.

ಹಳೆ ದಾಳಿಗೆ ಸೇಡು:
ಸ್ಪಾಟ್ ನಾಗನ ಮೇಲೆ ರೌಡಿ ಸುನೀಲ್ ಗ್ಯಾಂಗ್ 2016ರ ಮಾರ್ಚ್ ನಲ್ಲಿ ಹಲ್ಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಈ ಘಟನೆಯಿಂದ ಹೆಂಡತಿ ಮತ್ತು ಮಕ್ಕಳು ನಾಗನನ್ನು ತೊರೆದಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಸುನೀಲ್ 10 ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಬಳಿಕವೂ ನಾಗನನ್ನು ಕುಂಟ ಎಂದು ಲೇವಡಿ ಮಾಡುತ್ತಿದ್ದ. ಹಲ್ಲೆ ಮತ್ತು ಲೇವಡಿಯಿಂದ ಮನನೊಂದಿದ್ದ ನಾಗ ಇಂದು ಒಂದು ವರ್ಷದ ಹಿಂದಿನ ದಾಳಿಗೆ ಸುನೀಲ್ ನನ್ನು ಕೊಲೆ ಮಾಡುವ ಮೂಲಕ ಸೇಡನ್ನು ತೀರಿಸಿಕೊಂಡಿದ್ದಾನೆ.

https://www.youtube.com/watch?v=a3vmsD9DKZw

Click to comment

Leave a Reply

Your email address will not be published. Required fields are marked *

Advertisement