ಬೆಂಗಳೂರು: ಮೂವತ್ತಕ್ಕೂ ಹೆಚ್ಚು ಕೇಸ್‍ಗಳಲ್ಲಿ ಭಾಗಿಯಾಗಿ ರೌಡಿ ಶೀಟರ್ (Rowdy Sheeter) ಆಗಿರುವ ಸೈಲೆಂಟ್ ಸುನೀಲ (Silent Sunila) ರಾಜಕಾರಣಿಗಳ ಮಧ್ಯೆ ದರ್ಬಾರ್ ನಡೆಸುತ್ತಿದ್ದರೆ, ಇತ್ತ ಪೊಲೀಸರು (Police) ಮಾತ್ರ ಕಣ್ಮುಂದೆ ರೌಡಿ ಇದ್ದರು ಸೈಲೆಂಟ್ ಆಗಿದ್ದಾರೆ. ಇದು ಬಾರಿ ಅನುಮಾನಕ್ಕೆ ಕಾರಣವಾಗಿದೆ.
Advertisement
ಕೆಲದಿನಗಳ ಹಿಂದೆ ಬೆಂಗಳೂರಿನ 80ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ 23 ಪುಡಿರೌಡಿಗಳನ್ನು ವಶಕ್ಕೆ ಪಡೆದು ವಾರ್ನ್ ಮಾಡಿದ್ದರು. ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಒಂಟೆ ರೋಹಿತ, ಕಾಡುಬೀಸನಹಳ್ಳಿ ರೋಹಿತ, ಕಾಡಬೀಸನಹಳ್ಳಿ ಲೋಕಿ ದಾಳಿ ವೇಳೆ ಪರಾರಿಯಾಗಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದ್ದರು. ಆದರೆ ನಿನ್ನೆ ರಾಜಕಾರಣಿಗಳ ಸಭೆಯಲ್ಲಿ ಸೈಲೆಂಟ್ ಸುನೀಲ ಪ್ರತ್ಯಕ್ಷನಾಗಿದ್ದಾನೆ. ಈ ಕಾರ್ಯಕ್ರಮದಲ್ಲಿ ರಾಜಕಾರಣಿಗಳ ಜೊತೆ ಪೊಲೀಸರು ಇದ್ದರು ಆದರೂ ಸುನೀಲ ರಾಜಾರೋಷವಾಗಿ ಮೆರೆದಾಡಿದ್ದಾನೆ. ಇದನ್ನು ಗಮನಿಸಿದಾಗ ರೌಡಿಶೀಟರ್ ಸೈಲೆಂಟ್ ಸುನೀಲನ ಬೆನ್ನಿಗೆ ಪ್ರಭಾವಿ ರಾಜಕಾರಣಿಗಳು ನಿಂತ್ರಾ ಎಂಬ ಅನುಮಾನ ಮೂಡಿದೆ. ಇದನ್ನೂ ಓದಿ: ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕಟ್
Advertisement
Advertisement
ಕುಖ್ಯಾತ ರೌಡಿಶೀಟರ್ ಆಗಿರುವ ಸೈಲೆಂಟ್ ಸುನೀಲ ನಿನ್ನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿದ್ದ. ಇದೇ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಪಿ.ಸಿ ಮೋಹನ್, ಶಾಸಕ ಉದಯ್ ಗರುಡಾಚಾರ್, ಎನ್.ಆರ್.ರಮೇಶ್ ಭಾಗಿಯಾಗಿದ್ದರು. ಇದೇ ವೇದಿಕೆಯಲ್ಲೇ ಸುನೀಲ ಕೂಡ ಕಾಣಿಸಿಕೊಂಡಿದ್ದು, ಚಾಮರಾಜಪೇಟೆಯ ಮುಂದಿನ ಬಿಜೆಪಿ ಎಮ್‍ಎಲ್‍ಎ ಅಭ್ಯರ್ಥಿ ಅಂತಲೇ ಬಿಂಬಿತನಾಗಿದ್ದಾನೆ. ಇದನ್ನೂ ಓದಿ: ಜೋಡೋ ಯಾತ್ರೆ ವೇಳೆ ಪಾಕ್ ಪರ ಘೋಷ – ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್
Advertisement
ಅಂದು ಪೊಲೀಸರು ದಾಳಿ ವೇಳೆ ಪರಾರಿಯಾಗಿದ್ದಾನೆ. ಹೆದರಿ ಬೆಂಗಳೂರು ಬಿಟ್ಟು ತಮಿಳುನಾಡು ಸೇರಿಕೊಂಡಿದ್ದಾನೆ ಎಂದು ಸಿಸಿಬಿ ಪೊಲೀಸರು ಹೇಳಿದ್ದರು. ಆದರೆ ನಿನ್ನೆ ಸೈಲೆಂಟ್ ಸುನೀಲ ಬಹಿರಂಗವಾಗಿ ಕಾಣಿಸಿಕೊಂಡಿದ್ದ. ಆದರೂ ಅಲ್ಲೇ ಇದ್ದ ಪೊಲೀಸರು ಸೈಲೆಂಟ್ ಆಗಿದ್ದರು.
ಒಂದು ಕಾಲದಲ್ಲಿ ರಕ್ತ ಹರಿಸಿದ್ದ ರೌಡಿಶೀಟರ್‌ನಿಂದ ಈಗ ರಕ್ತ ದಾನ ಶಿಬಿರ ನಡೆಯುತ್ತಿದೆ. ಇದೇ ಕಾರ್ಯಕ್ರಮದಲ್ಲಿ ಸುನೀಲನ ಹತ್ರ ಸೆಲ್ಫಿ ತೆಗೆದುಕೊಳ್ಳೋಕೆ ಪುಡಿ ರೌಡಿಗಳು ಮುಗಿಬಿದ್ದಿದ್ದರು. ಇಷ್ಟೇಲ್ಲಾ ರಾಜಕೀಯ ಮುಖಂಡರು, ಪೊಲೀಸರ ಮುಂದೆಯೇ ನಡೀತಿದ್ರು ಪೊಲೀಸರು ಮಾತ್ರ ಫುಲ್ ಸೈಲೆಂಟ್ ಆಗಿದ್ದಿದ್ದು ಅಚ್ಚರಿ ಮೂಡಿಸಿದೆ.