ಬೆಂಗಳೂರು: ರೌಡಿಶೀಟರೊಬ್ಬ ಸಿಕ್ಕಸಿಕ್ಕವರ ಮೇಲೆ ಲಾಂಗ್ ಬೀಸಿರುವ ಪ್ರಕರಣ ಬ್ಯಾಡರಹಳ್ಳಿಯಲ್ಲಿ (Byadarahalli) ನಡೆದಿದೆ.
ಭಾನುವಾರ ಮುಂಜಾನೆ ರೌಡಿಶೀಟರ್ ಸನ್ನಿ ಎಂಬಾತ ನಗರದ ರಸ್ತೆಯಲ್ಲಿ ಲಾಂಗ್ ಹಿಡಿದು ತಿರುಗಾಡಿದ್ದಾನೆ. ಈ ವೇಳೆ, ನಮ್ಮ ಹುಡ್ಗಿ ತಂಟೆಗೆ ಬಂದ್ರೆ ಮುಗ್ಸಿ ಬಿಡ್ತೀನಿ ಅಂತ ಕಂಡಕಂಡವರ ಮೇಲೆ ಲಾಂಗ್ ಬೀಸಿದ್ದಾನೆ. ಆತನ ಅಟ್ಟಹಾಸದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ – ಮತ್ತೆ ಮೂವರು ಅರೆಸ್ಟ್
ವಿಘ್ನೇಶ್ವರ ನಗರದ ಹುಲಿಯೂರಮ್ಮ ದೇವಸ್ತಾನದ ಬಳಿ ಈ ಘಟನೆ ನಡೆದಿದೆ. ಪುಡಿರೌಡಿಗಳ ಅಟ್ಟಹಾಸದಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಅಬ್ಬಿ ಫಾಲ್ಸ್‌ನಲ್ಲಿ ಬೆಂಗಳೂರಿನ ಯುವಕ ನೀರುಪಾಲು – ವಿಡಿಯೋ ವೈರಲ್