ದಾವಣಗೆರೆ: ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ನ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಹೈಟೆಕ್ ಆಸ್ಪತ್ರೆಯ ಹಿಂಭಾಗವಿರುವ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ನಡೆದಿದೆ.
ನಾಗರಾಜ್ ಅಲಿಯಾಸ್ ಬುಳ್ ನಾಗ(30) ಹತ್ಯೆಯಾದ ರೌಡಿಶೀಟರ್. ಹಳೆ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ಅಂದರೆ ಕಳೆದ ಡಿಸೆಂಬರ್ 9, 2017ರಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕುಮಾರ್ ಪಟ್ಟಣಂ ಬಳಿ ಗ್ಯಾಂಗ್ ಒಂದು ಬುಳ್ ನಾಗನ ಮೇಲೆ ದಾಳಿ ಮಾಡಿತ್ತು. ಆದರೆ ನಾಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದನು.
Advertisement
Advertisement
ಆದರೆ ಇಂದು ಬುಳ್ ನಾಗ ತನ್ನ ಸಹಚರರೊಂದಿಗೆ ಬೈಕಿನಲ್ಲಿ ಬರುತ್ತಿದ್ದಾಗ ದುಷ್ಕರ್ಮಿಗಳು ನಾಗನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಪರಿಣಾಮ ರೌಡಿಶೀಟರ್ ನಾಗ ಮಚ್ಚಿನ ಏಟಿಗೆ ಬಲಿಯಾಗಿದ್ದಾನೆ. ಬುಳ್ ನಾಗನನ್ನು ಕೊಲೆ ಮಾಡಲು ಸುಫಾರಿ ಕಿಲ್ಲರ್ಸ್ ಸಹ ಬಂದಿದ್ದು, ಮೂರು ಬಾರಿ ಆತನ ಮೇಲೆ ದಾಳಿ ನಡೆಸಿ ವಿಫಲರಾಗಿದ್ದರು ಎಂದು ತಿಳಿದು ಬಂದಿದೆ.
Advertisement
ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಎಸ್‍ಪಿ ಆರ್.ಚೇತನ್ ಮಾಹಿತಿ ಪಡೆದಿದ್ದು, ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೃತ ರೌಡಿ ಕೊಲೆ, ಜೀವ ಬೆದರಿಕೆ, ಹಲ್ಲೆ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿ ಆಗಿದ್ದನು.
Advertisement
ಈ ಕುರಿತು ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.