ಬೆಂಗಳೂರು: ನಡು ರಸ್ತೆಯಲ್ಲೇ ರೌಡಿಶೀಟರ್ ಭೀಕರವಾಗಿ ಕೊಲೆಯಾಗಿ ಹೋಗಿರುವ ಘಟನೆ ಜಂಬೂ ಸವಾರಿ ದಿಣ್ಣೆ ಬಳಿ ನಡೆದಿದೆ.
ಮಂಜ ಅಲಿಯಾಸ್ ಮಂಜುನಾಥ್ ಕೊಲೆಯಾದ ರೌಡಿಶೀಟರ್. ಶರತ್ ಕುಮಾರ್ ಕೊಲೆ ಮಾಡಿದ ಆರೋಪಿ. ಮಂಜುನಾಥ್ ಹುಳಿಮಾವು ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದು, ಕೋಣಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಇದನ್ನೂ ಓದಿ: 7 ರಾಜ್ಯಗಳ ಅಳಿಯ, 14 ಮಹಿಳೆಯರಿಗೆ ಪತಿ ಈ ನಕಲಿ ವೈದ್ಯ
ನಿನ್ನೆ ರಾತ್ರಿ ಕೆಲಸ ಮುಗಿದ ಬಳಿಕ ಕಂಟಪೂರ್ತಿ ಕುಡಿದು ರಸ್ತೆಯಲ್ಲಿ ತೂರಾಕೊರ್ಂಡು ಬರುತ್ತಿರುವಾಗ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಶರತ್ ಕುಮಾರ್ ಮೊಬೈಲ್ ಕೇಳಿದ್ದಾನೆ. ಶರತ್ ಕುಮಾರ್ ಮೊಬೈಲ್ ಕೊಡಲು ನಿರಾಕರಿಸಿದಾಗ ಮಂಜ ಆರೋಪಿ ಶರತ್ ಜೊತೆ ಕಿರಿಕ್ ಮಾಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಮಂಜ ಸಿಮೆಂಟ್ ಇಟ್ಟಿಗೆಯಿಂದ ಆರೋಪಿ ಶರತ್‍ಗೆ ಹೊಡೆಯಲು ಹೋಗಿದ್ದಾನೆ.
ಆರೋಪಿ ಶರತ್ ಅದೇ ಸಿಮೆಂಟ್ ಇಟ್ಟಿಗೆ ಕಸಿದುಕೊಂಡು ಮಂಜನ ತಲೆಗೆ ಹೊಡೆದ್ದಿದ್ದಾನೆ. ಕಂಟಪೂರ್ತಿ ಕುಡಿದಿದ್ದ ಮಂಜ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆರೋಪಿ ಶರತ್ ಕುಮಾರ್ ಘಟನೆ ಬಳಿಕ ನೇರವಾಗಿ ಕೋಣನಕುಂಟೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆರೋಪಿ ಶರತ್ ಮೂಲತಃ ಮಂಡ್ಯದವನಾಗಿದ್ದು ಮರ್ನಾಲ್ಕು ದಿನಗಳ ಹಿಂದಷ್ಟೆ ಬೆಂಗಳೂರಿಗೆ ಬಂದು ಕೆಲಸ ನೋಡಿಕೊಂಡು ದುಡಿಮೆ ಕೆಲಸ ಮಾಡುತ್ತಿದ್ದ. ಸದ್ಯ ಘಟನೆ ಸಂಬಂದ ಆರೋಪಿ ಶರತ್ ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು