ಬೆಂಗಳೂರು: ಸಿಸಿಬಿ ಪೊಲೀಸರು ನಗರದ ಕುಖ್ಯಾತ ರೌಡಿಶೀಟರ್ ಲಕ್ಷ್ಣಣ್ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಬರೋಬ್ಬರಿ 2 ಸಾವಿರ ಕೋಟಿ ರೂ ಆಸ್ತಿ ಪತ್ತೆಯಾಗಿದೆ.
ಕಳೆದ 3 ದಿನಗಳ ಹಿಂದೆ ಸಿಸಿಬಿ ಪೊಲೀಸರು ಲಕ್ಷ್ಣಣ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಹೆಚ್ಚಿನ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿದೆ. ಇವುಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ವೇಳೆ ಅವುಗಳ ಮೌಲ್ಯ ಸುಮಾರು 2,500 ಕೋಟಿ ರೂ. ಬೆಲೆಬಾಳುತ್ತದೆ ಎಂದು ಸಿಸಿಬಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
Advertisement
Advertisement
ನಗರದಲ್ಲಿ ಮೊದಲು ಸಣ್ಣ ಪುಟ್ಟ ಸುಲಿಗೆ ಮಾಡುತ್ತಾ ತನ್ನ ಜಾಲ ವಿಸ್ತರಿಸಿದ್ದ ಲಕ್ಷ್ಣಣ್ ಬಳಿಕ ಕೊಲೆ, ಬೆದರಿಕೆ ಅಂತಹ ಕೃತ್ಯಗಳನ್ನು ನಡೆಸುತ್ತಿದ್ದ. ಈ ನಡುವೆ ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಿದ ರೌಡಿಶೀಟರ್ ಲಕ್ಷ್ಣಣ್ ವೈಟ್ ಕಲರ್ ಭ್ರಷ್ಟಾಚಾರ ನಡೆಸಲು ಆರಂಭಿಸಿದ್ದ. ಸದ್ಯ ಲಕ್ಷ್ಣಣ ವಿರುದ್ಧ ರೌಡಿಶೀಟರ್ ಕೂಡ ತೆರೆಯಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವೇಳೆ ಲಕ್ಷ್ಣಣ್ ಭಾರೀ ಪ್ರಮಾಣದ ಹಣ, ಆಸ್ತಿ ಗಳಿಸಿದ್ದು, ಲಭ್ಯವಾಗಿರುವ ಎಲ್ಲಾ ಆಸ್ತಿಗಳು ಕೂಡ ಬೇನಾಮಿ ಎಂದು ತಿಳಿದು ಬಂದಿದೆ.
Advertisement
ಸಿಸಿಬಿ ಅಧಿಕಾರಿಗಳು ಸದ್ಯ ವಶ ಪಡೆದಿರುವ ದಾಖಲೆಗಳನ್ನು ಜಾರಿ ನಿರ್ದೇಶನಾಲಯ (ಇಡಿ)ಅಧಿಕಾರಿಗಳ ಮುಂದಿಟ್ಟಿದ್ದಾರೆ. ಅಲ್ಲದೇ ಈ ಕುರಿತು ಇಡಿ ಹಾಗೂ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಪ್ರಕರಣದ ತನಿಖೆಗೆ ಸಹಾಯ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv