ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣದಲ್ಲಿ ಕಳೆದ ಶನಿವಾರವಷ್ಟೇ ಸಿಐಡಿ ಅಧಿಕಾರಿಗಳು ಬೈರತಿ ಬಸವರಾಜ್ (Byrati Basavaraj) ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಬೈರತಿ ಫುಲ್ ಸೈಲೆಂಟ್ ಆಗಿದ್ದಾರೆ.
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಇಲ್ಲಿವರೆಗೂ ಇಪ್ಪತ್ತು ಜನ ಆರೋಪಿಗಳು ಬಂಧನವಾಗಿದ್ದಾರೆ. ತನಿಖೆ ವೇಳೆ ಸಿಐಡಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿ ಕೊಲೆ ಸಂಬಂಧ ಹೇಳಿಕೆಗಳನ್ನು ಪಡೆದುಕೊಂಡು ಕೆಲವೊಂದು ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಿದ್ರು. ಅದರ ಪೂರಕ ದಾಖಲೆಗಳನ್ನು ಮುಂದಿಟ್ಟುಕೊಂಡೇ ಸಿಐಡಿ ಪೊಲೀಸರು, ಬೈರತಿ ಬಸವರಾಜ್ ಬಂಧಿಸಿ ವಿಚಾರಣೆಯ ಅನಿವಾರ್ಯತೆಯ ಉದ್ದೇಶವನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ, ಕಸ್ಟಡಿಗೆ ಪಡೆದ ಸಿಐಡಿ ಅಧಿಕಾರಿಗಳಿಗೆ ಬೈರತಿ ಬಸವರಾಜ್ ಮೊಂಡಾಟ ತಲೆನೋವಾಗಿ ಪರಿಣಾಮಿಸಿದೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್ – ಶಾಸಕ ಬೈರತಿ ಬಸವರಾಜ್ 7 ದಿನ ಸಿಐಡಿ ಕಸ್ಟಡಿಗೆ
ಅನಾರೋಗ್ಯದ ನೆಪದಲ್ಲಿ ಕಸ್ಟಡಿಗೆ ಸಿಕ್ಕಿರುವ ಬೈರತಿ ಬಸವರಾಜ್, ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಏನೇ ಪ್ರಶ್ನೆ ಕೇಳಿದರೂ, ನಂಗೇನು ಗೊತ್ತಿಲ್ಲ ಗೊತ್ತಿಲ್ಲ ಅನ್ನೋ ಸಿದ್ಧ ಉತ್ತರ ನೀಡುತ್ತಿದ್ದಾರೆ. ಆದರೆ, ಈ ಹಿಂದೆ ಇದೇ ಕೇಸಲ್ಲಿ ಬಂಧಿತರಾಗಿರುವ ಆರೋಪಿಗಳ ಹೇಳಿಕೆಗಳು ಬೈರತಿ ಬಸವರಾಜ್‌ಗೆ ಸಂಕಷ್ಟ ತರಲಿವೆ ಎನ್ನುವ ಮಾಹಿತಿಗಳು ಹೊರಬಿದ್ದಿವೆ.
ಬೈರತಿ ಹೇಳಿಕೆಗಳು, ಇತರೆ ಆರೋಪಿಗಳ ಹೇಳಿಕೆಗಳಿಗೆ ತದ್ವಿರುದ್ಧವಾಗಿವೆ. ಅದಕ್ಕೆ ಪೂರಕವಾಗಿ ತಾಂತ್ರಿಕ ಸಾಕ್ಯಗಳನ್ನು ಸಿಐಡಿ ಅಧಿಕಾರಿಗಳು ಮುಂದಿಟ್ಟು ಪ್ರಶ್ನೆ ಮಾಡಿದರೂ ಉತ್ತರ ಕೊಡ್ತಿಲ್ಲ. ಹಾಗಾಗಿ, ವಿಚಾರಣೆಯ ವಿಡಿಯೋ ಮತ್ತು ದಾಖಲೆಗಳ ಸಮೇತ ಸಿಐಡಿ ಅಧಿಕಾರಿಗಳು ಮುಂದಿನ ಶನಿವಾರ ಕೋರ್ಟ್ ಗಮನಕ್ಕೆ ತರಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಇಸಿಜಿಯಲ್ಲಿ ವ್ಯತ್ಯಾಸ – ಶಾಸಕ ಬೈರತಿ ಬಸವರಾಜ್‌ಗೆ ಜಯದೇವದಲ್ಲಿ ಆಂಜಿಯೋಗ್ರಾಂ?

