– ಬೆಂಬಲಿಗರಿಲ್ಲದೇ ಬಿಕೋ ಎನ್ನುತ್ತಿದೆ ಶಾಸಕನ ಮನೆ
– ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಶಾಸಕ ಬೈರತಿ ಬಸವರಾಜ್ ಅವರು ಕಳೆದೆರಡು ದಿನಗಳಿಂದ ಮನೆಯಲ್ಲೇ ಇಲ್ಲ.
ಬಿಕ್ಲು ಶಿವ ಹತ್ಯೆ ಕೇಸಲ್ಲಿ ಶಾಸಕ ಬೈರತಿ ಬಸವರಾಜ್ ಅವರು ಎ5 ಆರೋಪಿಯಾಗಿದ್ದಾರೆ. ಭಾರತಿ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಆಗುವಂತೆ ನೋಟಿಸ್ ನೀಡಲಾಗಿದೆ. ಆಗಿನಿಂದ ಶಾಸಕರು ಮನೆಯಲ್ಲಿಲ್ಲ. ಎರಡು ದಿನಗಳಿಂದ ಮನೆಗೆ ಬಂದಿಲ್ಲ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಶಾಸಕರು ಮನೆಯಲ್ಲಿಲ್ಲದೇ ಬೆಂಬಲಿಗರು ಕೂಡ ಅತ್ತ ಸುಳಿದಿಲ್ಲ. ಹೀಗಾಗಿ, ಬೆಂಬಲಿಗರಿಲ್ಲದೇ ಶಾಸಕರ ಮನೆ ಬಿಕೋ ಎನ್ನುತ್ತಿದೆ.
ಇಂದು ಬೆಳಗ್ಗೆ 11:30ಕ್ಕೆ ಠಾಣೆಗೆ ವಿಚಾರಣೆಗೆ ಶಾಸಕರು ಹಾಜರಾಗಬೇಕಿದೆ. ಅದಕ್ಕಾಗಿ ಠಾಣೆ ಮುಂದೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಠಾಣಾ ಸಿಬ್ಬಂದಿ ಜೊತೆ ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.