– ರೈಲ್ವೆ ಹಳಿ ಬಳಿ ಶವ ಎಸೆದು ಪರಾರಿಯಾದ ದುಷ್ಕರ್ಮಿಗಳು
ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಪಟ್ಟಣ ಗ್ರಾಮದಲ್ಲಿ ನಡೆದಿದೆ.
- Advertisement -
ಸೋಮು ತಾಳಿಕೋಟಿ (40) ಬರ್ಬರವಾಗಿ ಕೊಲೆಯಾದ ರೌಡಿಶೀಟರ್. ಕಲಬುರಗಿಯ ಪಟ್ಟಣ ಗ್ರಾಮದಲ್ಲಿ ಕೊಲೆ ಮಾಡಿ ಆಳಂದ ರಸ್ತೆಯ ರೈಲ್ವೆ ಹಳಿ (Railway Track) ಬಳಿ ಶವ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇದನ್ನೂ ಓದಿ: Kolar| ಕೆಟ್ಟು ನಿಂತಿದ್ದ ಟಿಪ್ಪರ್‌ಗೆ ಟ್ರಕ್ ಡಿಕ್ಕಿ – ಚಾಲಕ ಸ್ಥಳದಲ್ಲೇ ಸಾವು
- Advertisement -
- Advertisement -
ಕೆಲ ತಿಂಗಳ ಹಿಂದೆ ಸೋಮು ಪಟ್ಟಣ ಗ್ರಾಮದ ಡಾಬಾ ಮಾಲೀಕನ ಜೊತೆ ಈತ ಜಗಳವಾಡಿದ್ದನು. ಅಲ್ಲದೆ ಸೋಮು ಮತ್ತು ಆತನ ಸಂಗಡಿಗರು ಡಾಬಾ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಹೀಗಾಗಿ ಹಳೆಯ ವೈಷಮ್ಯದ ಹಿನ್ನೆಲೆ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆರ್‌ಟಿಪಿಎಸ್, ವೈಟಿಪಿಎಸ್‌ನಿಂದ ನದಿಗೆ ವಿಷಕಾರಿ ರಾಸಾಯನಿಕ ಬಿಡುಗಡೆ – ಕಲುಷಿತಗೊಂಡ ಕೃಷ್ಣೆಯ ಒಡಲು
- Advertisement -
ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಸಂಡೂರು ಉಪ ಚುನಾವಣೆ – ಮಸ್ಟರಿಂಗ್ ಕಾರ್ಯ ಪೂರ್ಣ