ಬೆಂಗಳೂರು: ಕುಡಿದ ಮತ್ತಿನಲ್ಲಿ ಶುರುವಾಗಿದ್ದ ಜಗಳ ಮನೆಯನ್ನೆ ಧ್ವಂಸ ಮಾಡುವ ಹಂತಕ್ಕೆ ಬಂದಿದೆ. ಹೆಂಡತಿ ನಂಬರ್ ಕೊಡು ಎಂದಿದ್ದಕ್ಕೆ ರೊಚ್ಚಿಗೆದ್ದ ರೌಡಿಶೀಟರ್ (Rowdy Sheeter) ರಸ್ತೆಯಲ್ಲಿಯೇ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಚಂದ್ರಲೇಔಟ್ ಠಾಣಾ (Chandra Layout Police Station) ವ್ಯಾಪ್ತಿಯಲ್ಲಿ ನಡೆದಿದೆ.
ರೌಡಿಶೀಟರ್ ಕೆಂಪೇಗೌಡ ಅಲಿಯಾಸ್ ಕೆಂಪ, ಸ್ನೇಹಿತ ರಮೇಶ್‌ನನ್ನೇ ಥಳಿಸಿದ್ದಾನೆ. ಸ್ನೇಹಿತರಾಗಿದ್ದ ಇಬ್ಬರೂ ಬಾರ್ ನಲ್ಲಿ ಕುಡಿದು ಅಂಗಡಿ ಮುಂದೆ ಬಂದು ನಿಂತಿದ್ದಾರೆ. ಈ ವೇಳೆ ಕೆಂಪೇಗೌಡನಿಗೆ ನಿನ್ನ ಪತ್ನಿ ನಂಬರ್ ಕೊಡು ಎಂದು ರಮೇಶ್ ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಕೆಂಪೇಗೌಡ, ರಮೇಶ್‌ಗೆ ಕಪಾಳಕ್ಕೆ ಹೊಡೆದು ಹೋಗಿದ್ದ. ನಂತರ ಹೊಯ್ಸಳ ನಗರದಲ್ಲಿರುವ ತನ್ನ ಮನೆಗೆ ವಾಪಸ್ ಆಗಿದ್ದ. ಇದನ್ನೂ ಓದಿ: ನಿಫಾ ವೈರಸ್ ಭೀತಿ – ರಾಜ್ಯದ ಗಡಿಯಲ್ಲಿ ಹೈ ಅಲರ್ಟ್, ಕಟ್ಟುನಿಟ್ಟಿನ ತಪಾಸಣೆಗೆ ಸರ್ಕಾರ ಸೂಚನೆ
ರಾತ್ರಿ 11 ಗಂಟೆಗೆ ಹಲ್ಲೆ ವಿಚಾರವಾಗಿ ಪ್ರಶ್ನೆ ಮಾಡಲು ರಮೇಶ್ ಸಂಬಂಧಿಕರು ಮತ್ತು ಸ್ನೇಹಿತರು ಕೆಂಪನ ಮನೆ ಬಳಿ ಹೋಗಿದ್ದರು. ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನ ಗುಂಪು ಕಟ್ಟಿಕೊಂಡು ರಮೇಶ್ ಹೋಗಿದ್ದಾನೆ. ಮನೆ ಬಳಿ ಬಂದು ಕಿರಿಕ್ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಮತ್ತೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿಗೆ ರೌಡಿ ಕೆಂಪ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ರೊಚ್ಚಿಗೆದ್ದ ಗುಂಪಿನವರು ಕೆಂಪೇಗೌಡ ಮನೆ ಮೇಲೆ ಕಲ್ಲು ಎಸೆದು ಕಿಟಕಿ ಗಾಜುಗಳನ್ನ ಪುಡಿ-ಪುಡಿ ಮಾಡಿ, ಬಾಗಿಲು, ಗೇಟ್ ಮುರಿದು ಹಾಕಿದ್ದಾರೆ.
ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸರು ರೌಡಿ ಕೆಂಪನನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಜೀ ಅಲಿಯಾಸ್ ಚನ್ನನಾಯ್ಕ್ ಪತ್ನಿಗೆ ಬೆದರಿಕೆ ಹಾಕಿದ್ದ ಚೈತ್ರಾ ಕುಂದಾಪುರ!
Web Stories