– ತನಿಖೆ ವೇಳೆ ಆರೋಪಿ ಮೇಲೆ 17 ಇರುವುದು ಪತ್ತೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಪುಂಡಾಟ ಮುಂದುವರಿದಿದೆ. ಕೈಯಲ್ಲಿ ಲಾಂಗ್ ಹಿಡಿದು ಬೈಕ್‌ನಲ್ಲಿ ಪ್ರಯಾಣಿಸಿದ ರೌಡಿಶೀಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರ ಪೊಲೀಸರು, ರೌಡಿಶೀಟರ್ ಸಿದ್ದಿಕಿಯನ್ನು ಬಂಧಿಸಿದ್ದಾರೆ. ಶಿವಾಜಿನಗರದ ಬಂಬೂ ಬಜಾರ್‌ನಲ್ಲಿ ಬೈಕ್ ರೈಡ್ ವೇಳೆ ಲಾಂಗ್ ಹಿಡಿದಿದ್ದ ರೌಡಿಶೀಟರ್ ಸಿದ್ದಿಕಿ ಪ್ರಯಾಣಿಸಿದ್ದ. ಲಾಂಗ್ ಹಿಡಿದುಕೊಂಡಿದ್ದ ವೀಡಿಯೋ ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿತ್ತು.
ವೀಡಿಯೋ ಆಧಾರದಲ್ಲಿ ಸುಮೋಟೊ ಕೇಸ್ ದಾಖಲಸಿಕೊಂಡಿದ್ದರು. ತನಿಖೆ ವೇಳೆ ಆರೋಪಿಯು ರೌಡಿಶೀಟರ್ ಎಂಬ ವಿಚಾರ ಬೆಳಕಿಗೆ ಬಂದಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ರೌಡಿಶೀಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ತನಿಖೆ ವೇಳೆ ಆರೋಪಿ ಮೇಲೆ 17 ಪ್ರಕರಣ ಇರುವುದು ಪತ್ತೆಯಾಗಿದೆ. ಕೋರ್ಟ್‌ನಿಂದ ಅರೆಸ್ಟ್ ವಾರೆಂಟ್ ಕೂಡ ಜಾರಿಯಾಗಿತ್ತು. ಆರೋಪಿಯನ್ನು ಬಂಧಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.