ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹೀಗಾಗಿ ನಗರದ ಬಹುತೇಕ ರೌಡಿಗಳನ್ನು ಕರೆಸಿ ಪೊಲೀಸರು ಅಹಿತಕರ ಘಟನೆಗಳಲ್ಲಿ ತೊಡಗಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.
ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಎಲ್ಲ ಪುಡಿ ರೌಡಿಗಳನ್ನು ನಗರದ ಬಿಇಎಲ್ ಆಟದ ಮೈದಾನದಲ್ಲಿ ಗುಡ್ಡೆ ಹಾಕಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಲೋಕಸಭಾ ಚುನಾವಣಾ ಹೊಸ್ತಿಲಿನಲ್ಲಿ ರೌಡಿಗಳು ಬಾಲಾ ಬಿಚ್ಚುವ ಉದಾರಣೆಗಳಿವೆ. ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಹದ್ದಿನ ಕಣ್ಣಿಡಲು ಸಂಬಂಧಪಟ್ಟ ಡಿಸಿಪಿಗಳಿಗೆ ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಪರೇಡ್ ನಡೆಸಲಾಗಿದೆ.
ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ರಾಜಗೋಪಾಲ ನಗರ ಸೇರಿದಂತೆ ಒಟ್ಟು 18 ಪೊಲೀಸ್ ಠಾಣೆಯ 800 ರೌಡಿಗಳನ್ನ ಕರೆ ತಂದು ಬೆವರಿಳಿಸಿದರು. ಕಟ್ಟಿಂಗ್, ಶೇವಿಂಗ್ ಮಾಡದೆ ಕೂದಲುಬಿಟ್ಕೊಂಡು ಜನರನ್ನ ಭಯಪಡಿಸುವಂತಿದ್ದವರನ್ನ ಅಲ್ಲಿಯೇ ರೌಡಿಶೀಟರ್ ಒಬ್ಬನಿಂದ ಕಟ್ಟಿಂಗ್ ಹಾಗೂ ಶೇವಿಂಗ್ ಮಾಡಿಸಲಾಯ್ತು.
ಹಳೆ ರೌಡಿ ಹೊಸ ರೌಡಿಗಳ ಮೇಲೆ ಸೆಕ್ಷನ್ 110 ಅಡಿ ಕೇಸ್ ದಾಖಲಿಸಿಕೊಂಡು ಕಳಿಸಿಕೊಡಲಾಯ್ತು. ಕೆಲ ರೌಡಿಗಳ ಮನೆಯಲ್ಲಿ ಮಾರಾಕಾಸ್ತ್ರಗಳು ಸಿಕ್ಕಿದ್ದು ವಶಕ್ಕೆ ಪಡೆದು ತನಿಖೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ರೌಡಿಗಳು ಚುನಾವಣಾ ಸಮಯದಲ್ಲಿ ಪೊಗರು ತೋರಿಸಿ ಒಂದಷ್ಟು ಹಣ ಮಾಡ್ಕೋಳಣ್ಣ ಅಂದ್ಕೊಂಡವ್ರಿಗೆ ಚುನಾವಣಾ ಆರಂಭದಲ್ಲಿ ಪೊಲೀಸರು ನೀಡಿರುವ ಎಚ್ಚರಿಕೆಯಿಂದ ನಿರಾಸೆ ತಂದಿದೆ.