ಬೆಂಗಳೂರು: ಯುವಕ ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜಾಮೀನಿಗಾಗಿ ಹೊಸ ಟ್ವಿಸ್ಟ್ ಕೊಟ್ಟಿದ್ದಾನೆ.
ಶುಕ್ರವಾರ ನಲಪಾಡ್ ನ ಅರ್ಜಿ ವಿಚಾರಣೆ ನಡೆದಿದ್ದು, 63ನೇ ಸಿಸಿಎಚ್ ನ್ಯಾಯಾಲಯ ನಲಪಾಡ್ ಮತ್ತು ತಂಡದ ಜಾಮೀನು ಅರ್ಜಿ ವಜಾ ಮಾಡಿತ್ತು. ಹೀಗಾಗಿ ಪ್ರಭಾವಿ ವ್ಯಕ್ತಿಯ ಮಗ ಎಂದು ಜಾಮೀನು ಸಿಗುತ್ತಿಲ್ಲ. ಆದ್ದರಿಂದ ಅಪ್ಪನಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಲಪಾಡ್ ಹೇಳಿದ್ದಾನೆ. ಇದನ್ನೂ ಓದಿ: ಜಾಮೀನು ಅರ್ಜಿ ತಿರಸ್ಕೃತ- ನಲಪಾಡ್ ಗೆ ಜೈಲೇ ಗತಿ
Advertisement
Advertisement
ಜೈಲಿನಿಂದ ತಂದೆ ಹ್ಯಾರಿಸ್‍ಗೆ ಫೋನ್ ಮಾಡಿದ್ದ ನಲಪಾಡ್, ನ್ಯಾಯಾಲಯದ ವಿಚಾರಣೆ ವೇಳೆ ಪ್ರಭಾವಿ ವ್ಯಕ್ತಿ ಎಂದು ಜಾಮೀನು ನಿರಾಕರಣೆಯಾಗುತ್ತಿದೆ. ಮುಂದೆ ಚುನಾವಣೆ ಸಹ ಬರುತ್ತಿದೆ. ಆದ್ದರಿಂದ ಈಗ ನೀನು ರಾಜೀನಾಮೆ ಕೊಡು, ನೀನು ರಾಜೀನಾಮೆ ನೀಡಿದರೆ ಆಗ ನನಗೆ ಜಾಮೀನು ಸಿಗುತ್ತದೆ ಎಂದು ಹೇಳಿರುವುದಾಗಿ ಜೈಲಿನ ಮೂಲಗಳಿಂದ ತಿಳಿದು ಬಂದಿದೆ.
Advertisement
ಹೈಕೋರ್ಟ್ ನಲ್ಲಿ ಜಾಮೀನು ಪಡೆಯಲು ನಲಪಾಡ್ ಹೊಸ ಉಪಾಯ ಹುಡುಕಿದ್ದಾನೆ. ನಲಪಾಡ್ ಉಪಟಳ ಜಾಸ್ತಿಯಾದ್ದರಿಂದ ನಲಪಾಡ್ ಇರುವ ಸೆಲ್‍ಗೆ ಹೆಚ್ಚಿನ ಭದ್ರತೆಗಾಗಿ ಹೆಚ್ಚುವರಿ ಜೈಲು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಜೈಲಿಂದ ಹೊರಬಂದ ಮೇಲೆ ನಿಂಗೆ ಇದೆ ನೋಡು- ತಂದೆ ಹ್ಯಾರಿಸ್ ಗೆ ಫೋನ್ ಮಾಡಿ ನಲಪಾಡ್ ಕ್ಲಾಸ್
Advertisement
ನಲಪಾಡ್‍ನಿಂದ ಹಲ್ಲೆಗೊಳಗಾದ ವಿದ್ವತ್ ಇನ್ನೂ ಪೊಲೀಸರ ಮುಂದೆ ಹೇಳಿಕೆ ನೀಡಲು ಸಾಧ್ಯವಾಗಿಲ್ಲ. ವಿದ್ವತ್ ಆರೋಗ್ಯ ಸ್ಥಿತಿ ಇನ್ನೂ ಸುಧಾರಿಸಿಲ್ಲ ಎಂಬ ಅಂಶವನ್ನು ಪರಿಗಣಿಸಿ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿತ್ತು. ಇದನ್ನೂ ಓದಿ: ಈ 4 ಕಾರಣಗಳಿಗಾಗಿ ನಲಪಾಡ್ ಜಾಮೀನು ಅರ್ಜಿ ವಜಾ ಆಯ್ತು