Bengaluru City

ನನ್ನ ಮನೆಯಲ್ಲಿ ಸಿಕ್ಕಿದ ಹಣ ಸರ್ಕಾರಿ ಅಧಿಕಾರಿಗಳಿಗೆ ಸೇರಿದ್ದು: ರೌಡಿ ನಾಗನ ಮನಿ ಬಾಂಬ್

Published

on

Share this

– ಈ ವಿಡಿಯೋದಲ್ಲಿರುವ ಸತ್ಯಾಸತ್ಯತೆ ಪಬ್ಲಿಕ್ ಟಿವಿ ದೃಢೀಕರಿಸಲ್ಲ
– ಮಂಜುನಾಥ್ ನನ್ನ ಪಿಎ ಅಲ್ಲ: ಸಿಎಂ

ಬೆಂಗಳೂರು: ನನ್ನ ಮನೆಯಲ್ಲಿ ಸಿಕ್ಕಿದ ಹಣ ಸರ್ಕಾರಿ ಅಧಿಕಾರಿಗಳ ದುಡ್ಡು ಎನ್ನುವ ಸ್ಫೋಟಕ ಮಾಹಿತಿಯನ್ನು ರೌಡಿ ನಾಗ ತಿಳಿಸಿದ್ದಾನೆ.

ವಿಡಿಯೋ ಹೇಳಿಕೆಯಲ್ಲಿ, ಮನೆಯಲ್ಲಿದ್ದ ಕಪ್ಪು ಹಣ ಸಿಎಂ ಪಿಎ ಮಂಜುನಾಥ್‍ಗೆ ಸೇರಿದ್ದು. ನನ್ನ ಮನೆಯಲ್ಲಿ ಐಎಎಸ್ ಅಧಿಕಾರಿಗಳೇ ಹಣವನ್ನು ಬಚ್ಚಿಡುತ್ತಿದ್ದರು ಎನ್ನುವ ಮನಿ ಬಾಂಬನ್ನು ನಾಗರಾಜ್ ಅಲಿಯಾಸ್ ರೌಡಿನಾಗ ಹೇಳಿದ್ದಾನೆ.

ಐಪಿಎಸ್ ಅಧಿಕಾರಿಗಳೇ ಖುದ್ದು ನೋಟು ಬದಲಿಸಲು ನನ್ನ ಬಳಿ ಬಂದಿದ್ರು. ಕಾರ್ ಡೀಲರ್ ನಡೆಸುತ್ತಿರುವ ಕಿಶೋರ್, ಮಧು, ಉಮೇಶ್, ನವೀನ, ಗಣೇಶ ನನ್ನ ಬಳಿ ಹಣ ತೆಗೆದುಕೊಂಡು ಬಂದಿದ್ದರು. ಈ ಹಳೇ ನೋಟು ವಿನಿಮಯದ ದಂಧೆಯ ರೂವಾರಿ ಸಿಎಂ ಪಿಎ ಮಂಜುನಾಥ್. ಅಧಿಕಾರಿಗಳ ಬಣ್ಣ ಬಯಲಾಗುತ್ತೆ ಅಂತ ಕೊನೆಗೆ ನನ್ನನ್ನು ಸಾಯಿಸಲು ಬಂದಿದ್ರು. ಮನೆ ಮೇಲೆ ದಾಳಿ ಹೆಸರಲ್ಲಿ ನನ್ನನ್ನ ಕೊಲ್ಲೋಕೆ ಪೊಲೀಸರು ಸಂಚು ರೂಪಿಸಿದ್ರು. ನಾನು ತಪ್ಪು ಮಾಡಿಲ್ಲ. ನನ್ನನ್ನು ಬದುಕಲು ಬಿಡಿ ಎಂದ ರೌಡಿನಾಗ ವಿಡಿಯೋದಲ್ಲಿ ತಿಳಿಸಿದ್ದಾನೆ.

ಇವರೆಲ್ಲ ನನ್ನ ಮನೆ ಬಳಿ ದುಡ್ಡು ತಂದಿದ್ದಕ್ಕೆ ಸಿಸಿಟಿವಿ ವಿಡಿಯೋ ಇದೆ. ಇವರ ಬಂಡವಾಳ ಬಯಲಾಗುತ್ತೆ ಅಂತಾ ನನ್ನನ್ನ ಶೂಟ್ ಮಾಡಲು ಬಂದಿದ್ರು. ನಾನು ಏನು ತಪ್ಪು ಮಾಡದಿದ್ದರೂ ನನ್ನನ್ನು ಅವರು ಬದುಕಲು ಬಿಡುತ್ತಿಲ್ಲ. ಉಮೇಶ್‍ನನ್ನು ನಾನು ಕಿಡ್ನ್ಯಾಪ್ ಮಾಡಿಲ್ಲ. ಇಬ್ಬರು ಗನ್ ಮ್ಯಾನ್ ಗಳು ಅವನ ಜೊತೆ ಇರ್ತಾರೆ ಇದು ಹೇಗೆ ಸಾಧ್ಯ..?ಇವರ ಅಕ್ರಮ ಹಣ ಮರೆ ಮಾಚಲು ನನ್ನನ್ನ ಮುಗಿಸಲು ಮಾಡ್ತಿರೊ ತಂತ್ರ ಇದು ಎಂದು ನಾಗ ವಿಡಿಯೋದಲ್ಲಿ ಹೇಳಿದ್ದಾನೆ.

ಮಂಜುನಾಥ್ ನನ್ನ ಪಿಎ ಅಲ್ಲ: ನಾಗನ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾರ್ರಿ ಅದು ಮಂಜುನಾಥ್? ಮಂಜುನಾಥ್ ನನ್ನ ಪಿಎ ಅಲ್ಲ. ಆ ಹೆಸರಿನವರು ಯಾರು ಇಲ್ಲ. ಬಾಂಬ್ ನಾಗನಿಗೂ ನಮಗೂ ಏನ್ರೀ ಸಂಬಂಧ? ಗೊತ್ತಿಲ್ಲದೇ ಏನೇನೂ ಕೇಳಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ.

ದುಡ್ಡು ಕೊಟ್ಟಿಲ್ಲ: ರೌಡಿ ನಾಗ ಹೈಕೋರ್ಟ್ ನ್ಯಾಯಾಧೀಶರಿಗೆ ಕಿಕ್ ಬ್ಯಾಕ್ ನೀಡಿರುವ ಆರೋಪವನ್ನು ಆತನ ವಕೀಲ ಶ್ರೀ ರಾಮರೆಡ್ಡಿ ತಿರಸ್ಕರಿಸಿದ್ದಾರೆ. ನಾಗ ಯಾವುದೇ ಜಡ್ಜ್ ಗಳಿಗೆ ಹಣ ನೀಡಿಲ್ಲ. ನಾಗರಾಜ್ ಸಹಿಯನ್ನ ಸ್ಕ್ಯಾನ್ ಮಾಡಿ ಈ ರೀತಿ ಮಾಡಲಾಗಿದೆ. ನಾಗರಾಜ್‍ಗೆ ಜಾಮೀನು ಸಿಗಬಾರದು ಅಂತಾ ಈ ರೀತಿ ಮಾಡಲಾಗಿದೆ. ಇದೆಲ್ಲಾ ಕಾಸರಘಟ್ಟ ರಾಜಣ್ಣನದ್ದೇ ಕೃತ್ಯ ಎಂದು ಅವರು ಹೇಳಿದ್ದಾರೆ. ದುರುದ್ದೇಶ ಪೂರಿತವಾದ ಕೃತ್ಯದ ಬಗ್ಗೆ ರಿಜಿಸ್ಟ್ರಾರ್‍ಗೆ ಶ್ರೀರಾಮ ರೆಡ್ಡಿ ದೂರು ನೀಡಿದ್ದು, ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೂ ಫ್ಯಾಕ್ಸ್ ಮುಖಾಂತರ ದೂರು ನೀಡಿದ್ದಾರೆ.

ಇದನ್ನೂ ಓದಿ: ಬಾಂಬ್ ನಾಗನ ಕೊಠಡಿಯ ಮಂಚದ ಕಳಗೆ ಸಾವಿರ ಕೋಟಿ ಮೌಲ್ಯದ ಭೂ ದಾಖಲೆ ಪತ್ತೆ – ನಾಗನ ಹೈಫೈ ಮನೆ ಹೇಗಿದೆ ಗೊತ್ತಾ?

ಇದನ್ನೂ ಓದಿ: ಬಾಂಬ್ ನಾಗನ ಮನೆಯಲ್ಲಿ ಬಗೆದಷ್ಟೂ ಸಿಕ್ತಿದೆ ಕೋಟಿ ಕೋಟಿ ಹಳೇ ನೋಟು

Click to comment

Leave a Reply

Your email address will not be published. Required fields are marked *

Advertisement
Advertisement