ಶಿವಮೊಗ್ಗ: ಪಾರ್ಟಿ ಮಾಡುತ್ತಿದ್ದ ಕುಖ್ಯಾತ ರೌಡಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ನಗರದ ಹೊರವಲಯದಲ್ಲಿನ ಮಲವಗೊಪ್ಪ ಬಳಿ ನಡೆದಿದೆ.
ಬಂಕ್ ಬಾಲು ಕೊಲೆಯಾದ ಕುಖ್ಯಾತ ರೌಡಿ. ಈತ ಮಲವಗೊಪ್ಪ ಬಳಿಯ ಹಾತಿ ನಗರದ ಬೀಳು ಗದ್ದೆಯಲ್ಲಿ ಗೆಳೆಯರೊಂದಿಗೆ ಪಾರ್ಟಿ ಮಾಡುತ್ತಿದ್ದನು. ಆಗ ಮಚ್ಚು, ಲಾಂಗು ಬೀಸಿ ಕೊಲೆ ಮಾಡಲಾಗಿದೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದೆ.
Advertisement
Advertisement
ಬಂಕ್ ಬಾಲು ಕುಖ್ಯಾತ ರೌಡಿ ಮಾರ್ಕೆಟ್ ಲೋಕಿಯ ಗುರುವಾಗಿದ್ದನು. ಮೃತ ಬಾಲು, ಲೋಕಿ ಕೊಲೆ ಮಾಡಿದ್ದ ಮೆಂಟಲ್ ಸೀನಾ ಹಾಗೂ ಮೋಟಿ ವೆಂಕಟೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು. ಕೊಲೆ, ದರೋಡೆ ಮತ್ತು ಸುಲಿಗೆ ಪ್ರಕರಣಗಳು ಈತನ ಮೇಲೆ ಶಿವಮೊಗ್ಗ ಹಾಗೂ ಭದ್ರಾವತಿ ಠಾಣೆಗಳಲ್ಲಿ ದಾಖಲಾಗಿದ್ದವು. ಅಲ್ಲದೆ ಬಂಕ್ ಬಾಲು ಮೇಲೆ ಶಿವಮೊಗ್ಗ ಪೊಲೀಸರು ಕೋಕಾ(ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಪ್ರಕರಣ ದಾಖಲಿಸಿ, ವಾರಂಟ್ ಜಾರಿ ಮಾಡಿದ್ದರು.
Advertisement
ಆಂಧ್ರದ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ ಬಾಲು ಬೆಂಗಳೂರಿನಲ್ಲಿ ನೆಲೆಸಿದ್ದನು. ಶಿವಮೊಗ್ಗದ ಪೊಲೀಸರಿಂದ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ಬಾಲುನನ್ನು ಆತನ ವಿರೋಧಿ ಗುಂಪು ಬರ್ಬರವಾಗಿ ಹತ್ಯೆ ಮಾಡಿದೆ ಎಂದು ಹೇಳಲಾಗುತ್ತಿದೆ. ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಎಸ್‍ಪಿ ಅಭಿನವ್ ಖರೆ ತಿಳಿಸಿದ್ದಾರೆ.
Advertisement
ಈ ಘಟನೆ ನಡೆದ ಸ್ಥಳಕ್ಕೆ ಎಸ್‍ಪಿ ಅಭಿನವ್ ಖರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತುಂಗಾ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv