ಹನುಮಂತನ ಫೋಟೋ, ದೇವಾಲಯ ಆಕಾರದ ಕೇಕ್ ಕತ್ತರಿಸಿ ಕೈ ನಾಯಕನ ಬರ್ತ್‍ಡೇ ಸೆಲೆಬ್ರೇಷನ್

Public TV
2 Min Read
Kamal Nath

ಭೋಪಾಲ್: ಕೇಸರಿ ಧ್ವಜ ಮತ್ತು ಹನುಮಂತನ ಫೋಟೋವಿರುವ ನಾಲ್ಕು ಸ್ಟೆಪ್ಸ್‍ನ ದೇವಾಲಯದ ಆಕಾರವಿರುವ ಕೇಕ್ ಅನ್ನು ಕಾಂಗ್ರೆಸ್ ಮುಖ್ಯಸ್ಥ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ(Congress chief and former Madhya Pradesh Chief Minister) ಕಮಲ್‍ನಾಥ್ (Kamal Nath) ಅವರು, ಕತ್ತರಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಧಾರ್ಮಿಕ ಚಿಹ್ನೆಗಳಿರುವ ಕೇಕ್ ಕತ್ತರಿಸುವ ಮೂಲಕ ಕಮಲ್ ನಾಥ್ ಅವರು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಆರೋಪಿಸಿದ್ದಾರೆ. ಇದನ್ನೂ ಓದಿ: ವೈಟ್‍ಫೀಲ್ಡ್ ಮೆಟ್ರೋ ಸಂಚಾರ – ವೋಲ್ವೋ ಬಸ್ ಸಂಚಾರಕ್ಕೆ ಹೊಡೆತ

ಕಮಲ್‍ನಾಥ್ ಮತ್ತು ಅವರ ಪಕ್ಷದವರು ದೇವರ ಮೇಲೆ ಯಾವುದೇ ಭಕ್ತಿಯನ್ನು ಹೊಂದಿಲ್ಲ. ಅವರೆಲ್ಲಾ ಸುಳ್ಳು ಭಕ್ತರು. ರಾಮ ಮಂದಿರ ನಿರ್ಮಿಸುವಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ ಈ ವಿಚಾರದಿಂದ ಚುನಾವಣೆ ಸಮಯದಲ್ಲಿ ತೊಂದರೆಯಾಗಬಹುದು ಎಂದು ಅರಿತು, ಇದೀಗ ಹನುಮಂತನ ಭಕ್ತರಾಗಿ ಬದಲಾಗಿದ್ದಾರೆ. ಯಾರಾದರೂ ಹುಟ್ಟುಹಬ್ಬಕ್ಕೆ ಹನುಮಂತನ ಫೋಟೋವಿರುವ ಕೇಕ್ ಅನ್ನು ತಯಾರಿಸುತ್ತಾರಾ? ಹನುಂತನ ಫೋಟೋವಿರುವ ಕೇಕ್ ಕತ್ತರಿಸುತ್ತಾರಾ? ಇದು ಸನಾತನ ಧರ್ಮ ಮತ್ತು ಇದರಿಂದ ಹನುಮಂತನ ಭಕ್ತರಿಗೆ ಅಪಮಾನವಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಡಿಕೆಶಿ ರಾಮನಗರ ಸಸ್ಪೆನ್ಸ್- ಡಿಕೆಸು ಬದಲಿಗೆ ಇಕ್ಬಾಲ್‍ಗೆ ಟಿಕೆಟ್ ಸಾಧ್ಯತೆ

ಗುರುವಾರ ಕಮಲ್‍ನಾಥ್ ಅವರು 76ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಕಮಲ್‍ನಾಥ್ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ವಿಧಾನಸಭಾ ಕ್ಷೇತ್ರ ಛಿಂದ್ವಾರಾ ಜಿಲ್ಲೆಯಲ್ಲಿರುವ ಅವರ ನಿವಾಸದಲ್ಲಿ ಹುಟ್ಟುಹಬ್ಬವನ್ನು ಮುಂಚಿತವಾಗಿಯೇ ಆಚರಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *