ನವದೆಹಲಿ/ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ವಿ ಕಾರ್ಯಾಚರಣೆಗೆ ಇನ್ನು 10 ದಿನಗಳು ಮಾತ್ರ ಬಾಕಿ ಉಳಿದಿದ್ದು, ಪ್ರಜ್ಞಾನ್ ರೋವರ್ (Pragyan Rover) ಚಂದ್ರನ ಮೇಲ್ಮೈನ ದತ್ತಾಂಶ ಸಂಗ್ರಹಿಸುವ ಕಾರ್ಯವನ್ನು ಚುರುಕುಗೊಳಿಸಿದೆ. ಒಂದು ಚಂದ್ರನ ದಿನ ಪೂರ್ಣಗೊಳ್ಳಲು ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದೆ. ಚಂದ್ರನ ಅಂಗಳದಲ್ಲಿ ಅಧ್ಯಯನ ನಡೆಸುತ್ತಿರುವ ಪ್ರಜ್ಞಾನ್ ರೋವರ್ ದೊಡ್ಡದೊಂದು ಕುಳಿಗೆ ಮುಖಾಮುಖಿಯಾಗಿದೆ.
Chandrayaan-3 Mission:
On August 27, 2023, the Rover came across a 4-meter diameter crater positioned 3 meters ahead of its location.
The Rover was commanded to retrace the path.
It’s now safely heading on a new path.#Chandrayaan_3#Ch3 pic.twitter.com/QfOmqDYvSF
— ISRO (@isro) August 28, 2023
Advertisement
4 ಮೀಟರ್ ಸುತ್ತಳತೆ ಹೊಂದಿರುವ ಗುಂಡಿಯೊಂದನ್ನ ರೋವರ್ ಗುರುತಿಸಿದೆ. ಈ ಕುಳಿಯಿಂದ ಪ್ರಜ್ಞಾನ್ ರೋವರ್ 3 ಮೀಟರ್ ದೂರದಲ್ಲಿ ಇತ್ತು. ಹೀಗಾಗಿ ರೋವರ್‌ನ ಪಥ ಬದಲಾವಣೆಗೆ ಇಸ್ರೋ (ISRO) ನಿಯಂತ್ರಣ ಕೊಠಡಿ ಸೂಚನೆ ರವಾನಿಸಿತು. ಇದೀಗ ಹೊಸ ಹಾದಿಯಲ್ಲಿ ರೋವರ್ ಮುಂದೆ ಸಾಗಿದೆ ಎಂದು ಇಸ್ರೋ ತನ್ನ ಟ್ವಿಟ್ಟರ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಈಗ ಇಸ್ರೋದಿಂದ ಸೂರ್ಯನ ಅಧ್ಯಯನ – ಆದಿತ್ಯ ಉಡಾವಣೆಗೆ ಮುಹೂರ್ತ ಫಿಕ್ಸ್
Advertisement
Chandrayaan-3 Mission:
Here are the first observations from the ChaSTE payload onboard Vikram Lander.
ChaSTE (Chandra’s Surface Thermophysical Experiment) measures the temperature profile of the lunar topsoil around the pole, to understand the thermal behaviour of the moon’s… pic.twitter.com/VZ1cjWHTnd
— ISRO (@isro) August 27, 2023
Advertisement
ಸೋಮವಾರ ಮಧ್ಯಾಹ್ನ ಇಸ್ರೋ ನಿಯಂತ್ರಣ ಕೊಠಡಿಗೆ ಪ್ರಜ್ಞಾನ್ ತನಗೆ ಗುಂಡಿಯೊಂದು ಎದುರಾಗಿರುವ ಕುರಿತಾಗಿ ಮಾಹಿತಿ ನೀಡಿತ್ತು. ಆ ನಂತರ ಸಕ್ರಿಯರಾದ ತಜ್ಞರ ತಂಡ ರೋವರ್‌ಗೆ ಹೊಸ ಮಾರ್ಗ ಸೂಚಿಸಿತು. ನಂತರ ರೋವರ್‌ನ ಬದಲಾದ ಮಾರ್ಗದ ಫೋಟೋ ಸಮೇತ ಇಸ್ರೋ ಸಾರ್ವಜನಿಕರಿಗೆ ಮಾಹಿತಿ ನೀಡಿದೆ. ಇದನ್ನೂ ಓದಿ: 15 ದಿನಗಳ ನಿತ್ಯ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಿ – ಕರ್ನಾಟಕಕ್ಕೆ CWRC ಆದೇಶ
Advertisement
ಚಂದ್ರನ ಅಂಗಳದಲ್ಲಿ ಈಗಾಗಲೇ 4 ದಿನಗಳ ಕಾರ್ಯಾಚರಣೆ ನಡೆಸಿರುವ ಪ್ರಗ್ಯಾನ್ ರೋವರ್‌ಗೆ ಇನ್ನು ಕೇವಲ 10 ದಿನ ಮಾತ್ರ ಬಾಕಿ ಉಳಿದಿದೆ. ಚಂದ್ರನ ಮೇಲೆ ಒಂದು ದಿನ ಕಳೆಯಲು ಭೂಮಿಯ 14 ದಿನಗಳು ಆಗುತ್ತವೆ. ನಂತರದ 14 ದಿನಗಳ ಕಾಲ ಚಂದ್ರನ ದಕ್ಷಿಣ ಧ್ರುವದ ಮೇಲೆ ಕತ್ತಲು ಕವಿಯುತ್ತದೆ. ಹೀಗಾಗಿ ಈ 14 ದಿನಗಳ ಒಳಗೆ ಕಾರ್ಯಾಚರಣೆ ಮುಕ್ತಾಯಗೊಳಿಸಬೇಕಿದೆ. ಒಂದು ವೇಳೆ ಚಂದ್ರನ ದಕ್ಷಿಣ ಧ್ರವದಲ್ಲಿ ಕತ್ತಲು ಕವಿಯುವ 14 ದಿನಗಳ ಬಳಿಕವೂ ರೋವರ್ ಜೀವಂತವಾಗಿದ್ದರೆ, ಅದನ್ನು ಮುಂದಿನ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಬಹುದಾಗಿದೆ.
Web Stories