ರಾಟ್‌ವೀಲರ್, ಪಿಟ್‌ಬುಲ್ ತಳಿಯ ನಾಯಿಗೆ ಈ ನಗರದಲ್ಲಿ ನಿಷೇಧ – ಉಲ್ಲಂಘಿಸಿದ್ರೆ ದಂಡ

Public TV
1 Min Read
pitbull

ಲಕ್ನೋ: ಮನುಷ್ಯರ ಮೇಲೆ ನಾಯಿಗಳಿಂದಾಗುತ್ತಿರುವ (Dog) ದಾಳಿಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಉತ್ತರ ಪ್ರದೇಶದ ಈ ಒಂದು ನಗರದಲ್ಲಿ ರಾಟ್‌ವೀಲರ್ (Rottweiler) ಹಾಗೂ ಪಿಟ್‌ಬುಲ್ (Uttar Pradesh) ತಳಿಯ ನಾಯಿಗಳನ್ನು ನಿಷೇಧಿಸಲಾಗಿದೆ.

ಹೌದು, ಕಾನ್ಪುರ (Kanpur) ಮುನ್ಸಿಪಲ್ ಕಾರ್ಪೊರೇಷನ್ ಪಿಟ್‌ಬುಲ್ ಹಾಗೂ ರಾಟ್‌ವೀಲರ್ ತಳಿಯ ನಾಯಿಗಳನ್ನು ನಿಷೇಧಿಸಿದೆ. ಈ ತಳಿಯ ನಾಯಿಗಳನ್ನು ಸಾಕಿರುವುದು ಕಂಡುಬಂದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಈ ನಿಯಮವನ್ನು ಉಲ್ಲಂಘಿಸಿದರೆ ಅವರಿಗೆ 5,000 ರೂ. ದಂಡ ಹಾಕಿಸಲಾಗುತ್ತದೆ ಎನ್ನಲಾಗಿದೆ. ಇದನ್ನೂ ಓದಿ: ಹೆಸರು ಬದಲಾವಣೆಗೆ ಮುಂದಾದ ಶೋಭಾ ಕರಂದ್ಲಾಜೆ – ಏನಿದು ಹೊಸ ವರಸೆ?

Pitbull

ಈ ತಳಿಯ ನಾಯಿಗಳು ಆಕ್ರಮಣಕಾರಿ ಹಾಗೂ ಮನುಷ್ಯರಿಗೆ ಅಪಾಯಕಾರಿಯಾಗಿದೆ ಎಂದು ನಿಗಮ ಅಭಿಪ್ರಾಯಪಟ್ಟಿದೆ. ಈ ನಾಯಿಗಳು ಆರೋಗ್ಯವಾಗಿರಲು ಫಾರ್ಮ್ಹೌಸ್‌ನಂತಹ ತೆರೆದ ಸ್ಥಳದ ಅಗತ್ಯವಿದೆ. ಆದರೂ, ಜನರು ತಮ್ಮ ಮನೆಗಳಲ್ಲಿ ಇಕ್ಕಟ್ಟಾದ ಸ್ಥಳಗಳಲ್ಲಿ ಸಾಕುಪ್ರಾಣಿಗಳಾಗಿ ಇರಿಸುತ್ತಾರೆ. ಈ ಕಾರಣದಿಂದಾಗಿ ಅವು ಮನುಷ್ಯರ ಮೇಲೆ ಆಕ್ರಮಣ ಮಾಡುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಮನೆ ಬಾಗಿಲಿಗೆ ಪಡಿತರ – ಮಮತಾ ಬ್ಯಾನರ್ಜಿಯ ನೂತನ ಯೋಜನೆ ಕಾನೂನುಬಾಹಿರ ಎಂದ ಹೈಕೋರ್ಟ್

ನಾಯಿಗಳಿಂದ ಜನರನ್ನು ರಕ್ಷಿಸಲು, ಅವುಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ನಗರದ ವ್ಯಾಪ್ತಿಯಲ್ಲಿ ಅವುಗಳ ಸಂತಾನೋತ್ಪತ್ತಿ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ನಗರಸಭೆ ಆಯುಕ್ತರಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅಧಿಕೃತ ಆದೇಶವನ್ನು ಶೀಘ್ರದಲ್ಲೇ ಕಳುಹಿಸಲಾಗುವುದು ಎಂದು ವರದಿಯಾಗಿದೆ.

ಕೆಲವು ವಾರಗಳ ಹಿಂದೆ ಲಕ್ನೋದಲ್ಲಿ ಪಿಟ್‌ಬುಲ್ ತಳಿಯ ನಾಯಿಯೊಂದು ತನ್ನ ಮಾಲೀಕನನ್ನೇ ಕೊಂದಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *