LatestDharwadDistrictsKarnatakaMain Post

ನೂರಕ್ಕೂ ಹೆಚ್ಚು ಜನರಿಗೆ ಕೃತಕ ಕೈ ಜೋಡಣೆ ಮಾಡಿದ ರೋಟರಿ 7 ಹಿಲ್ಸ್ ಸಂಸ್ಥೆ

ಧಾರವಾಡ: ಕೆಲ ಅಪಘಾತಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ತಮ್ಮ ಕೈಗಳನ್ನು ಕಳೆದು ಕೊಂಡವರಿದ್ದಾರೆ. ಅಂಥವರಿಗಾಗಿ ಧಾರವಾಡದ ರೋಟರಿ 7 ಹಿಲ್ಸ್ ಸಂಸ್ಥೆ ಸಹಾಯ ಹಸ್ತ ಚಾಚಿದ್ದು, ಅವರಿಗೆ ಕೃತಕ ಕೈ ಜೋಡಿಸಿದೆ.

RCOSL drawada 3

ಧಾರವಾಡ 7 ಹಿಲ್ಸ್ ಸಂಸ್ಥೆ, ಬೆಂಗಳೂರಿನ ರೋಟರಿ ಕ್ಲಬ್ ಸೌಥ್ ಹಾಗೂ ಸೆಂಟ್ರಲ್ ಸಂಸ್ಥೆಯವರು ಇವತ್ತು ಕೃತಕ ಕೈ ಜೋಡಿಸುವ ಕಾರ್ಯಕ್ರಮ ನಡೆಸಿದರು. ಇದರಲ್ಲಿ ತಮ್ಮ ಕೈ ಕಳೆದುಕೊಂಡ ಹಲವು ಮಕ್ಕಳಿಂದ ಹಿಡಿದು ವೃದ್ಧರವರೆಗೆ ನೂರಕ್ಕೂ ಹೆಚ್ಚು ಜನರಿಗೆ ಈ ಕೃತಕ ಕೈಗಳನ್ನು ಜೋಡಿಸಿಕೊಂಡರು. ಇವತ್ತು ಇಲ್ಲಿ ಬಂದವರಲ್ಲಿ ಅಪಘಾತದಲ್ಲಿ ಎರಡೂ ಕೈ ಕಳೆದುಕೊಂಡವರು ಕೂಡಾ ಇದ್ದರು. ಅವರಿಗೆ ಎರಡೂ ಕೈಗಳಿಗೆ ಈ ಕೃತಕ ಕೈಗಳನ್ನು ಜೋಡಿಸಲಾಯಿತು. ಇದನ್ನೂ ಓದಿ: ನೀವೆಂದಾದ್ರು ಕುರಿ ಕಾದಿದ್ದಿರಾ, ಖಂಡಿತವಾಗಿಯೂ ನಾನು ಕುರಿ ಕಾದಿದ್ದೇನೆ: ಸಿದ್ದುಗೆ ಟಾಂಗ್ ಕೊಟ್ಟ ಸಿಎಂ

ಉಚಿತವಾಗಿ ಕೃತಕ ಕೈ ಜೋಡಣೆ ಮಾಡುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಜನರು ಬಂದಿದ್ದರು. ಬೇರೆ ರಾಜ್ಯದ ಜನ ಕೂಡಾ ಬಂದು ಈ ಕೈಗಳನ್ನು ಹಾಕಿಸಿಕೊಂಡರು. ಈ ಸಂಸ್ಥೆಯವರು ಎಲ್ ಎನ್ 4 ಎನ್ನುವ ಈ ಕೃತಕ ಕೈಗಳನ್ನು ಜೋಡಿಸುವುದಲ್ಲದೇ, ಕೈ ಕಳೆದುಕೊಂಡವರಿಗೆ ಈ ಕೃತಕ ಕೈ ಹಾಕಿದ ಮೇಲೆ ಹೇಗೆ ಪೆನ್ನು ಹಿಡಿದು ಬರೆಯಬಹುದು, ಊಟ ಮಾಡಬಹುದು ಎಂದು ಕೂಡಾ ತೊರಿಸಿಕೊಟ್ಟರು.

RCOSL drawada 2

ಈ ವೇಳೆ ವಿದ್ಯುತ್ ಅವಘಡದಲ್ಲಿ ಎರಡೂ ಕೈ ಕಳೆದುಕೊಂಡ ಹಾವೇರಿ ಜಿಲ್ಲೆಯ ಬಾಲಕನೊಬ್ಬನಿಗೂ ಕೂಡಾ ಎರಡೂ ಕೃತಕ ಕೈಗಳನ್ನು ಜೋಡಿಸಲಾಯಿತು. ಅಲ್ಲದೇ ದೇಶದಲ್ಲಿ 25 ಕಡೆಗಳಲ್ಲಿ ಈ ಸಂಸ್ಥೆಯವರು ಸೆಂಟರ್‍ಗಳನ್ನು ಮಾಡಿ ಉಚಿತ ಕೈಜೋಡಣೆ ಕೆಲಸ ಮಾಡುತ್ತಿದ್ದಾರೆ. ಧಾರವಾಡದಲ್ಲಿ ಇವತ್ತಿನಿಂದ ಖಾಯಂ ಕೈಜೋಡಣೆ ಕೇಂದ್ರ ಕೂಡಾ ಮಾಡಲಾಗಿದ್ದು, ಯಾರೇ ಕೃತಕ ಕೈಗಳ ಅವಶ್ಯಕತೆ ಇದ್ದಲ್ಲಿ ಮುಂಚಿತವಾಗಿ ನೋಂದಣಿ ಮಾಡಿಸಿ ಕೈಜೋಡಣೆ ಮಾಡಿಸಿಕೊಳ್ಳಬಹುದು ಎಂದು ರೋಟರಿ 7 ಹಿಲ್ಸ್ ಸಂಸ್ಥೆ ಅಧ್ಯಕ್ಷ ಪಲ್ಲವಿ ದೇಶಪಾಂಡೆ ಹೇಳಿದರು. ಇದನ್ನೂ ಓದಿ: ಅಫ್ಘಾನಿಸ್ತಾನದ ಜನತೆಗೆ ತಾಲಿಬಾನ್ ಸರ್ಕಾರದಿಂದ ಉಚಿತ ಗೋಧಿ ವಿತರಣೆ

Related Articles

Leave a Reply

Your email address will not be published. Required fields are marked *