ಬೆಂಗಳೂರು: ಬಿಬಿಎಂಪಿ ಶಾಲೆಗಳಿಗೆ ಡಿಜಿಟಲ್ ಶಿಕ್ಷಣ ಕೊಡೋ ಉದ್ದೇಶದಿಂದ ಜಾರಿಗೆ ಬಂದ ರೋಶಿನಿ ಯೋಜನೆ ಹಳ್ಳ ಹಿಡಿಯುತ್ತಿದೆ. ಕಳೆದ ಒಂದು ವರ್ಷದಲ್ಲಿ ರೋಶಿನಿ ಕೇವಲ ಕಡತಗಳಿಗೆ ಮಾತ್ರ ಸೀಮಿತವಾಗಿದ್ದು, ಪಾಲಿಕೆ ಶಾಲೆಗಳು ರೋಶಿನಿಯಿಂದ ಖಾಸಗೀಕರಣದ ಭಯವನ್ನು ಎದುರಿಸುತ್ತಿದೆ.
ಬಿಬಿಎಂಪಿ ಶಾಲಾ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ಕೊಡೋ ಉದ್ದೇಶದೊಂದಿಗೆ ಸರ್ಕಾರ ರೋಶಿನಿ ಯೋಜನೆಯನ್ನ ಜಾರಿಗೆ ತಂದಿತ್ತು. ಟ್ಯಾಗ್ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ರೋಶಿನಿ ಯೋಜನೆಯನ್ನ ಉದ್ಘಾಟನೆ ಕೂಡ ಮಾಡಲಾಗಿತ್ತು. ಆದರೆ ಈ ಸಂಸ್ಥೆ ಪಾಲಿಕೆ ಶಾಲೆಗಾಗಿ ಬಿಡುಗಾಸಿನ ಕೆಲಸವನ್ನು ಮಾಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
Advertisement
Advertisement
ರೋಶಿನಿ ಅನ್ನೋದು ಯೋಜನೆಯನ್ನು ಗುತ್ತಿಗೆ ಪಡೆದಿರೋ ಕಂಪನಿ ಮಾಲೀಕರ ಮಗಳ ಹೆಸರು. ಈ ಹೆಸರಿನಲ್ಲೇ ಸರ್ಕಾರದ ಜೊತೆ ಟ್ಯಾಗ್ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಬಿಬಿಎಂಪಿ ಶಾಲೆಗೆ ಟ್ಯಾಬ್, ಲ್ಯಾಪ್ ಟಾಪ್, ಡಿಜಿಟಲ್ ಶಿಕ್ಷಣ, ಟಿವಿ ಎಲ್ಲಾ ಕೊಡುತ್ತೇವೆ ಎಂದು ಶಾಲೆ ಆವರಣವನ್ನ ರೋಶಿನಿಮಯ ಮಾಡಿದ್ದಾರೆ. ಅಲ್ಲದೆ ಪಾಲಿಕೆ ಬೋರ್ಡ್ ಗಳನ್ನು ಕೂಡ ಕಿತ್ತುಹಾಕಿದ್ದಾರೆ. ಫ್ರೆಜರ್ ಟೌನ್ ಶಾಲೆಯಲ್ಲಂತೂ ಕೊಠಡಿಗೆ ಬೀಗ ಜಡಿದು ಹೋದವರು ಇವತ್ತಿನವರೆಗೂ ತಿರುಗಿ ನೋಡಿಲ್ಲ ಎನ್ನಲಾಗುತ್ತಿದೆ.
Advertisement
Advertisement
ಇದೆಲ್ಲಾ ಯಾಕೆ ಎಂದು ಕೇಳೋ ಅಧಿಕಾರ ಪಾಲಿಕೆಗೆ ಇಲ್ಲ. ಯಾಕೆಂದರೆ ಒಪ್ಪಂದದ ಪ್ರಕಾರ ಪಾಲಿಕೆ ಶಾಲೆಗೆ ಸಾಫ್ಟ್ ವೇರ್ ಕಂಪನಿಗಳು ಸಿಎಸ್‍ಆರ್ ಫಂಡ್ ನೀಡಿದರೆ ಅದು ಈ ಟ್ಯಾಗ್ ಕಂಪನಿಗೆ ನೀಡಬೇಕು. ಹೀಗಾಗಿ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೇಳಿದರೆ, ನನಗೆ ಗೊತ್ತಿಲ್ಲ ಕಮಿಷನರ್ ಬಳಿ ಕೇಳಿ ಎಂದು ಹೇಳುತ್ತಿದ್ದಾರೆ.
ಕಳೆದ ಒಂದು ವರ್ಷದಲ್ಲಿ ರೋಶಿನಿಗಾಗಿ ಎಷ್ಟು ಸಿಎಸ್‍ಆರ್ ಹಣ ಬಂದಿದೆ ಎನ್ನುವ ಬಗ್ಗೆ ಪಾಲಿಕೆಗೆ ಗೊತ್ತಿಲ್ಲ. ಹೀಗೆ ಬಂದವರು ಹೋದವರು ಪಾಲಿಕೆ ಹೆಸರಲ್ಲಿ ಏನು ಬೇಕಾದರು ಮಾಡಬಹುದು ಎಂಬ ಆರೋಪವೂ ಹರಿದಾಡುತ್ತಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]