ಚಿಕ್ಕಬಳ್ಳಾಪುರ: ಪಿತೃ ಪಕ್ಷದ ಹಿನ್ನಲೆ ಹೂ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿ ರೈತರೊಬ್ಬರು ಟ್ರ್ಯಾಕ್ಟರ್ ಲೋಡ್ ರೋಸ್ ಹೂವನ್ನು ಬಿಸಾಡಿ ಹೋಗಿದ್ದಾರೆ.
Advertisement
ಮೇರಾಬುಲ್ ರೋಸ್ ಹೂವಿನ ಬೆಲೆ ಒಂದು ಕೆಜಿಗೆ 5 ರೂಪಾಯಿಗೆ ಬಿಕರಿಯಾಗಿದೆ. ಇದರಿಂದ ನೊಂದ ರೈತ ಹೂವನ್ನು ಬಿಸಾಡಿದ್ದಾರೆ. ಅಂದಹಾಗೆ ಪಿತೃಪಕ್ಷ ಆರಂಭವಾದ ನಂತರ ಹೂ ಕೇಳುವವರಿಲ್ಲ. ಮಾರ್ಕೆಟ್ ಗೆ ತೆಗೆದುಕೊಂಡು ಹೋದರೂ ವರ್ತಕರು ಖರೀದಿ ಮಾಡುತ್ತಿಲ್ಲ. ಚಿಕ್ಕಬಳ್ಳಾಪುರ ತಾಲೂಕಿನ ಹಲವೆಡೆ ಸಾವಿರಾರು ಎಕರೆಯಲ್ಲಿ ರೈತರು ಗುಲಾಬಿ, ಚೆಂಡು ಹೂ ಸೇರಿದಂತೆ ಸೇವಂತಿಗೆ ಬೆಳೆಯುತ್ತಾರೆ. ಇದನ್ನೂ ಓದಿ: ರೇಪ್ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು
Advertisement
Advertisement
ಇಲ್ಲಿನ ಹೂ ದೇಶದ ವಿವಿಧ ರಾಜ್ಯಗಳಿಗೂ ರಫ್ತಾಗುತ್ತದೆ. ಆದರೀಗ ಪಿತೃ ಪಕ್ಷದಿಂದ ಯಾವುದೇ ಶುಭ ಸಮಾರಂಭಗಳಿಲ್ಲ. ಮದುವೆ ಕಾರ್ಯಕ್ರಮಗಳು ಇಲ್ಲದಂತಾಗಿದೆ. ಹೀಗಾಗಿ ಹೂವಿಗೆ ಬೇಡಿಕೆ ಕಡಿಮೆಯಾಗಿದ್ದು, ಬೇರೆ, ಬೇರೆ ರಾಜ್ಯಗಳಿಗೆ ಎಕ್ಸ್‌ಪೋರ್ಟ್ ಆಗುತ್ತಿಲ್ಲ. ಚೆಂಡು ಹೂ ಸಹ ಕೆಜಿಗೆ 5 ರೂಪಾಯಿಯಾಗಿದೆ. ಸೇವಂತಿಗೆ 10 ರೂಪಾಯಿಯಾಗಿದೆ. ಹೀಗಾಗಿ ಪಿತೃ ಪಕ್ಷದ ಎಫೆಕ್ಟ್‌ನಿಂದ ಹೂವಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಮತಾಂತರವೇ ಮಾಡಲ್ಲ ಅನ್ನೋ ಬಿಷಪ್‍ಗಳು ಯಾಕೆ ಸಿಎಂ ಬಳಿ ಓಡಿ ಬಂದಿದ್ದಾರೆ: ಪ್ರತಾಪ್ ಸಿಂಹ ಪ್ರಶ್ನೆ
Advertisement