– ಹೋಂ ಮಿನಿಸ್ಟರ್, ಪೊಲೀಸ್ ಆಯುಕ್ತರು ನೋಡಲೇಬೇಕಾದ ಸುದ್ದಿ
ಬೆಂಗಳೂರು: ಕೋಳಿ ಪಂದ್ಯ ಅಂದ್ರೆ ಎಲ್ಲೋ, ಹಳ್ಳಿ ಪ್ರದೇಶಗಳಲ್ಲೋ, ದೂರದ ಜಿಲ್ಲೆಗಳ ನಿರ್ಜನ ಪ್ರದೇಶದಲ್ಲೋ ಕದ್ದು ಮುಚ್ಚಿ ನಡೆಯೋದರ ಬಗ್ಗೆ ವರದಿ ಆಗಿರುತ್ತದೆ. ಬೆಂಗಳೂರು ಮಹಾನಗರದ ಕಮೀಷನರೆಟ್ ವ್ಯಾಪ್ತಿಯಲ್ಲೇ ದೊಡ್ಡ ಮಟ್ಟದಲ್ಲಿ ಕೋಳಿ ಪಂದ್ಯ ನಡೆಯುತ್ತದೆ. ಈ ಕೋಳಿ ಅಂಕದ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಬೆಂಗಳೂರು ಈಶಾನ್ಯ ಭಾಗದ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾರಸಂದ್ರ ಗ್ರಾಮದ ಬಳಿ ಕೋಟಿ ಕೋಟಿ ವ್ಯವಹಾರ ಕೋಳಿ ಪಂದ್ಯ ನಡೆಯುತ್ತದೆ. ಬೆಂಗಳೂರು ವ್ಯಾಪ್ತಿಯಲ್ಲೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕೋಳಿ ಪಂದ್ಯ ನಡೆಯುತ್ತಿರುವ ವಿಚಾರ ತಿಳಿದ ನಿಮ್ಮ ಪಬ್ಲಿಕ್ ಟಿವಿ ತಂಡ ಆ ಹೈಫೈ ಕೋಳಿ ಪಂದ್ಯದ ಜಾಗಕ್ಕೆ ಹೋಗಿತ್ತು. ಮಾರಸಂದ್ರ ಗ್ರಾಮದ ಮೈನ್ ರೋಡ್ ನಿಂದ ಸುಮಾರು ಒಂದು ಕಿಲೋಮೀಟರ್ ನಷ್ಟು ಜಲ್ಲಿ ರಸ್ತೆಯ ನಿರ್ಜನ ಪ್ರದೇಶದ ಆ ಮಾವಿನ ತೋಟಕ್ಕೆ ಎಂಟ್ರಿಯಾದ ಒಂದಿಬ್ಬರು ಕಾಣಿಸುತ್ತಾರೆ.
Advertisement
Advertisement
ನೆರೆಯ ರಾಜ್ಯದ ಫೈಟರ್ ಹುಂಜಗಳು:
ತೋಟದಲ್ಲಿಯ ಕಬ್ಬಿಣದ ಬ್ಯಾರಿಗೇಡ್ ಹಾಕಿ ಶೆಡ್ ಹಾಕಲಾಗಿತ್ತು. ಮಧ್ಯಾಹ್ನ ಆಗುತ್ತಿದ್ದಂತೆ, ಕಾರು, ಬೈಕುಗಳಲ್ಲಿ ಫೈಟರ್ ಕೋಳಿಗಳ ಸಮೇತ ಹಂತ ಹಂತವಾಗಿ ಜನ ಆಗಮಿಸಿದರು. ಮೂರು ಗಂಟೆ ಹೊತ್ತಿಗೆ ಆ ಜಾಗಕ್ಕೆ ಬರೋಬ್ಬರಿ 300ಕ್ಕೂ ಹೆಚ್ಚು ಜನ ಸೇರಿದ್ದರು. ಇಲ್ಲಿಗೆ ಬರುವ ಫೈಟರ್ ಹುಂಜಗಳು ಸ್ಥಳೀಯದ್ದಲ್ಲ. ಬೆಂಗಳೂರು ಸಿಟಿ ಮಧ್ಯೆ ನಡೆಯೋ ಈ ಕೋಳಿ ಅಂಕಕ್ಕೆ ತಮಿಳುನಾಡು, ಆಂಧ್ರಪ್ರದೇಶ, ಮಂಗಳೂರಿನಿಂದ ಬೇರೆ ಬೇರೆ ಜಾತಿಯ ಫೈಟರ್ ಹುಂಜಗಳನ್ನು ಕಾರುಗಳಲ್ಲಿ ತೆಗೆದುಕೊಂಡು ಬರಲಾಗುತ್ತದೆ, ಅದರಲ್ಲೂ ತಮಿಳುನಾಡಿನ ವ್ಯಕ್ತಿ ಕಾರಲ್ಲಿ ಬಟ್ಟೆ ಮುಚ್ಚಿ ಕೋಳಿ ತರೋದು ಹೆಚ್ಚು ಎಂಬ ಮಾತುಗಳ ಸಹ ಕೇಳಿ ಬಂದವು.
Advertisement
Advertisement
ಪ್ರವೇಶ ಫೀ 500 ರೂಪಾಯಿ:
ಕನಿಷ್ಠ 20 ರಿಂದ 30 ಬೇರೆ ಬೇರೆ ಜಾತಿ ಹುಂಜಾಗಳನ್ನು ತಂದು ಮಸಾಜ್ ಶುರು ಮಾಡ್ತಾರೆ. ಒಬ್ಬ ವ್ಯಕ್ತಿಯ ಎಂಟ್ರಿಗೆ 500 ರೂಪಾಯಿ. ಆದ್ರೆ ಕೋಳಿ ಎಂಟ್ರಿಗೆ ಐದು ಸಾವಿರ ಕೊಡಬೇಕು. ಯಾವ ಹುಂಜದ ಮೇಲೆ ಯಾವ ಹುಂಜ ಫೈಟ್ ಮಾಡಬೇಕು ಅಂತಾ ಸ್ಥಳದಲ್ಲೇ ಬೆಡ್ಡಿಂಗ್ ಮಾಡಿ ನಿರ್ಧಾರ ಮಾಡಲಾಗುತ್ತದೆ. ನಂತರ ಮಂಗಳೂರಿನಿಂದ ಸ್ಪೆಷಲ್ ಆಗಿ ತಂದಿರೋ ಈ ಶಾರ್ಪ್ ಚಾಕುಗಳನ್ನು ಫೈಟ್‍ಗೆ ರೆಡಿಯಾದ ಹುಂಜಗಳ ಕಾಲಿಗೆ ಕಟ್ಟುತ್ತಾರೆ.
ಒಂದೊಂದು ಫೈಟ್‍ಗೆ 5-15 ಲಕ್ಷ ಬೆಟ್ಟಿಂಗ್:
ಒಂದೊಂದು ಹುಂಜ ಕೂಡ ಐದು ಕೆಜಿಗೆ ಮೇಲ್ಪಟ್ಟು ತೂಕ ಇರುತ್ತವೆ. ಒಂದೊಂದು ಫೈಟ್ ವೇಳೆಯೂ ಕನಿಷ್ಠ ಐದರಿಂದ ಹದಿನೈದು ಲಕ್ಷ ರೂ.ವರೆಗೆ ನಡೆಯುತ್ತದೆ. ಬೆಂಗಳೂರು, ಮಂಗಳೂರು, ಆಂಧ್ರ ಪ್ರದೇಶ, ತಮಿಳುನಾಡಿನಿಂದ ಬರುವ ಜನಗಳು ಹೆಚ್ಚಾಗಿ ಬರುತ್ತಾರೆ. ಇನ್ನೂ ಇಲ್ಲಿಗೆ ಬರುವ ಜನರಿಗೆ ಬಿಸಿ ಬಿಸಿ ರಾಗಿ ಮುದ್ದೆ, ಮಟನ್ ಸಾರು ರೆಡಿ ಇರುತ್ತದೆ. ಒಂದು ಊಟಕ್ಕೆ ಬರೋಬ್ಬರಿ ಇನ್ನೂರೈವತ್ತು ರೂ. ಕಾಸು ಫಿಕ್ಸ್ ಇರುತ್ತೆ. ಒಂದು ಸಿಗರೆಟ್ 40 ರೂ., ಅರ್ಧ ಲೀಟರ್ ನೀರಿನ ಬೆಲೆ ಮೂವತ್ತು ರೂಪಾಯಿ. ಒಂದು ಬಾಳೆಹಣ್ಣು 15 ರೂ. ಅಂತ ನಿಗದಿ ಮಾಡಲಾಗುತ್ತದೆ. ಇದನ್ನೂ ಓದಿ: ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?
ಈ ಚಟುವಟಿಕೆಗಳ ಕಿಂಗ್‍ಪಿನ್ ಹೆಸರು ದೇವರಾಜ್. ಈ ಜಾಗಕ್ಕೆ ಅಪರಿಚಿತರು ಯಾರು ಬರದಂತೆ ಮತ್ತು ಇಲ್ಲಿ ಯಾವುದೇ ಗಲಾಟೆ ಆಗದಂತೆ ನೋಡಿಕೊಳ್ಳಲು ಸುಮಾರು 20 ಜನರನ್ನು ನೇಮಿಸಲಾಗಿದೆ. ಅವರೆಲ್ಲ ಅಂಕದ ಸುತ್ತಲೇ ನಿಂತು ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಕೋಳಿ ಪಂದ್ಯದ ಜೊತೆ ಮಟ್ಕಾ ದಂಧೆ ಸಹ ನಡೆಯುತ್ತಿದೆ. ಇದನ್ನೂ ಓದಿ: ಸಿದ್ಧಾರ್ಥ್ ಶುಕ್ಲಾ ಕುಸಿದ ವೀಡಿಯೋ ವೈರಲ್ – ಸತ್ಯ ಇಲ್ಲಿದೆ