ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮಿ ನಿವಾಸ’ ಸೀರಿಯಲ್‌ನಿಂದ ದಿವ್ಯಶ್ರೀ ಗುಡ್ ಬೈ ಹೇಳಿದ್ದಾರೆ. ಅವರ ಪಾತ್ರಕ್ಕೆ ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯ ಆಗಮನವಾಗಿದೆ. ದಿವ್ಯಶ್ರೀ ಕೈಬಿಟ್ಟ ಪಾತ್ರಕ್ಕೆ ‘ಚೆಲುವಿನ ಚಿಲಿಪಿಲಿ’ ನಟಿ ರೂಪಿಕಾ ಅವರು ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ತಮನ್ನಾ ಬಾಯ್‌ಫ್ರೆಂಡ್ ವಿಜಯ್ ಜೊತೆ ಕಾಣಿಸಿಕೊಂಡ ಸಮಂತಾ
‘ಲಕ್ಷ್ಮಿ ನಿವಾಸ’ದಲ್ಲಿ ಸ್ಟಾರ್ ಕಲಾವಿದರ ದಂಡೇ ಇರುವ ಧಾರಾವಾಹಿ. ಕರ್ಪೂರದ ಗೊಂಬೆ ಸೀರಿಯಲ್ ನಟಿ ಶ್ವೇತಾ, ಪವಿತ್ರಾ ಲೋಕೇಶ್, ರಘು ಮುಖರ್ಜಿ, ದಿಶಾ ಮದನ್, ‘ಬಿಗ್ ಬಾಸ್’ ಬೆಡಗಿ ಚಂದನಾ ಅನಂತಕೃಷ್ಣ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ತುಂಬು ಕುಟುಂಬದ ಕಥೆ ಜನರ ಮನಮುಟ್ಟಿದೆ. ಇತ್ತೀಚೆಗೆ ಹಿರಿಯ ನಟಿ ಪವಿತ್ರಾ ಲೋಕೇಶ್, ರಘು ಮುಖರ್ಜಿ ಪಾತ್ರ ಅಂತ್ಯವಾಗಿದೆ. ಆದರೆ ಈ ಸೀರಿಯಲ್ ಕಥೆಗೆ ಉತ್ತಮ ಟಿಆರ್‌ಪಿ ಕೂಡ ಬರುತ್ತಿದೆ.
View this post on Instagram
ಈ ಸೀರಿಯಲ್‌ನಲ್ಲಿ ಮತ್ತೊರ್ವ ನಾಯಕಿ ನಟಿ ಚಂದನಾ ಅಂದರೆ ಜಾಹ್ನವಿ ಅತ್ತಿಗೆ ಪಾತ್ರದಲ್ಲಿ ನಟಿಸುತ್ತಿದ್ದ ದಿವ್ಯಶ್ರೀ ತಮ್ಮ ಪಾತ್ರಕ್ಕೆ ಅಂತ್ಯ ಹಾಡಿದ್ದಾರೆ. ಸದ್ಯ ಅವರು ನವೀನ್ ಸಜ್ಜು ಜೊತೆ ಮುಖ್ಯಪಾತ್ರದಲ್ಲಿ ಚುಕ್ಕಿತಾರೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.
ದಿವ್ಯಶ್ರೀ ಬಿಟ್ಟು ಹೋದ ಪಾತ್ರಕ್ಕೆ ಸ್ಯಾಂಡಲ್‌ವುಡ್ ನಟಿ ರೂಪಿಕಾ ಆಗಮನವಾಗಿದೆ. ಬೀರ, ಮಂಜರಿ, ನವರಂಗಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ರೂಪಿಕಾ ಲಕ್ಷ್ಮಿ ನಿವಾಸಕ್ಕೆ ಸಾಥ್ ನೀಡಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.
ರೂಪಿಕಾ ಅವರಿಗೆ ಕಿರುತೆರೆ ಏನು ಹೊಸದಲ್ಲ. ಈ ಹಿಂದೆ ‘ದೊರೆಸಾನಿ’ ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ರೂಪಿಕಾ ನಟಿಸಿದ್ದರು. ಈಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ರೂಪಿಕಾ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.