ಬಿಗ್ ಬಾಸ್ (Bigg Boss) ಆಟ ಈಗ ಅಂತಿಮ ಹಂತದಲ್ಲಿದೆ. ದಿವ್ಯಾ ಉರುಡುಗ ಎಲಿಮಿನೇಷನ್ (Elimination) ನಂತರ ಇದೀಗ ರೂಪೇಶ್ ರಾಜಣ್ಣ ಆಟಕ್ಕೆ ಬ್ರೇಕ್ ಬಿದ್ದಿದೆ. ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ರಾಜಣ್ಣ ಅವರ ಆಟ ಅಂತ್ಯವಾಗಿದೆ.
Advertisement
ಕನ್ನಡ ಪರ ಹೋರಾಟಗಾರ ಗಮನ ಸೆಳೆದಿದ್ದ ರೂಪೇಶ್ ರಾಜಣ್ಣ (Roopesh Rajanna) ನವೀನರ ಪೈಕಿ ಒಬ್ಬರಾಗಿ ಮನೆಗೆ ಕಾಲಿಟ್ಟಿದ್ದರು. ಇತರೆ ಸ್ಪರ್ಧಿಗಳಿಗೂ ಪೈಪೋಟಿ ಕೊಟ್ಟು ಟಾಪ್ 5 ಫೈನಲಿಸ್ಟ್‌ಗಳ ಪೈಕಿ ಇವರು ಒಬ್ಬರಾಗಿದ್ದರು. ಈಗ ರೂಪೇಶ್ ರಾಜಣ್ಣ ನಾಲ್ಕನೇ ರನ್ನರ್ ಅಪ್ ಆಗಿ ಬಿಗ್ ಬಾಸ್‌ನಿಂದ ಹೊರಬಂದಿದ್ದಾರೆ. ಇದನ್ನೂ ಓದಿ:ವಿನ್ನರ್ ಘೋಷಣೆಗೆ ಕೌಂಟ್‌ಡೌನ್, ಯಾರ ಕೈ ಸೇರಲಿದೆ ಬಿಗ್ ಬಾಸ್ ಟ್ರೋಫಿ?
Advertisement
Advertisement
ರೂಪೇಶ್ ಶೆಟ್ಟಿ, ರಾಕೇಶ್, ದೀಪಿಕಾ ದಾಸ್‌ಗೆ ಪೈಪೋಟಿ ಕೊಟ್ಟಿದ್ದರು. ಇದೀಗ ರಾಜಣ್ಣ ಅದೃಷ್ಟ ಕೈಕೊಟ್ಟಿದೆ. ದಿವ್ಯಾ ಉರುಡುಗ ನಂತರ ಮನೆಯಿಂದ ರಾಜಣ್ಣ ಹೊರಬಂದಿದ್ದಾರೆ.
Advertisement
ಸಿನಿಮಾ ರಂಗದ ಯಾವುದೇ ಹಿನ್ನೆಲೆ ಇಲ್ಲದೇ, ರಿಯಾಲಿಟಿ ಶೋ ಬಗ್ಗೆ ಅರಿವಿಲ್ಲದೇ ನವೀನರ ಪೈಕಿ ಗಟ್ಟಿ ಸ್ಪರ್ಧಿಯಾಗಿ ರೂಪೇಶ್ ರಾಜಣ್ಣ ಫೈಟ್ ಕೊಟ್ಟರು. ಟಾಸ್ಕ್, ಮನರಂಜನೆಯ ಮೂಲಕ ಕನ್ನಡಿಗರ ಮನೆಗೆದ್ದಿದ್ದರು.