ಬಿಗ್ ಬಾಸ್ ಮನೆಯ(Bigg Boss House) ಲವ್ ಬರ್ಡ್ಸ್ ಆಗಿ ಹೈಲೆಟ್ ಆಗಿದ್ದ ರೂಪೇಶ್ ಶೆಟ್ಟಿ(Roopesh Shetty) ಮತ್ತು ಸಾನ್ಯ ಅಯ್ಯರ್ ಗೆ(Sanya Iyer) ಇದೀಗ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಿತಿ ಮೀರಿದ ಸಾನ್ಯ ಮತ್ತು ರೂಪೇಶ್ ರೊಮ್ಯಾನ್ಸ್ಗೆ ಕಿಚ್ಚ ಸುದೀಪ್ ಚಳಿ ಬಿಡಿಸಿದ್ದಾರೆ.
Advertisement
ದೊಡ್ಮನೆಯಲ್ಲಿ ನಾವಿಬ್ಬರು ಕ್ಲೋಸ್ ಫ್ರೆಂಡ್ಸ್ ಅಷ್ಟೇ ಎಂದು ಹೇಳಿಕೊಂಡು ಬರುತ್ತಿದ್ದ ರೂಪೇಶ್ ಮತ್ತು ಸಾನ್ಯಳ ಮಿತಿ ಮೀರಿದ ಒಡನಾಟಕ್ಕೆ ಸುದೀಪ್ ಬ್ರೇಕ್ ಹಾಕಿದ್ದಾರೆ. ಕ್ಯಾಪ್ಟೆನ್ಸಿ ಅವಧಿ ಮುಗಿದ ನಂತರ ಕ್ಯಾಪ್ಟನ್ ರೂಮ್ ನಲ್ಲಿ ಗುರೂಜಿ ಜೊತೆ ಸಾನ್ಯ, ರೂಪೇಶ್ ಇದ್ದಂತಹ ರೀತಿಗೆ ಕಿಚ್ಚ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:ಈ ವಾರ ಬಿಗ್ ಬಾಸ್ ಮನೆಯಿಂದ ದರ್ಶ್ ಚಂದ್ರಪ್ಪ ಔಟ್
Advertisement
Advertisement
ಕ್ಯಾಪ್ಟನ್ಸಿ ಅವಧಿ ಮುಗಿದ ನಂತರ ನೀವು ಪಿಕ್ನಿಕ್ ಮಾಡ್ತಾ ಇದ್ರಿ. ಆ ರೂಂಗೆ ಒಂದು ಗೌರವ ಇದೆ. ಅದು ಪಿಕ್ನಿಕ್ ಸ್ಪಾಟ್ ಅಲ್ಲ ಎಂದರು ಸುದೀಪ್. ಅದಕ್ಕೆ ರೂಪೇಶ್ ಸ್ಪಷ್ಟನೆ ನೀಡುವ ಕೆಲಸ ಮಾಡಿದರು. ನಮ್ಮ ಉದ್ದೇಶ ಆ ರೀತಿ ಇರಲಿಲ್ಲ. ನಾನು ಯಾವಾಗಲೂ ಆ ರೀತಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಲು ಬಂದರು ರೂಪೇಶ್.
Advertisement
ನೀವು ಮಿತಿಮೀರಿ ನಡೆದುಕೊಂಡಿದ್ದೀರಿ. ಆ ರೀತಿ ಆಗಿದ್ದಕ್ಕಾಗಿಯೇ ನಾವು ಹೇಳ್ತಿರೋದು. ನೀವು ಮಧ್ಯರಾತ್ರಿ ಹಗ್ ಮಾಡಿಕೊಳ್ತೀರಿ. ಅದಕ್ಕೆ ನಾವು ಯಾವಾಗಲೂ ಅಪಸ್ವರ ತೆಗೆದಿಲ್ಲ. ಅದು ಇಲ್ಲಿ ಸಮಸ್ಯೆ ಅಲ್ಲ. ಈ ಮೊದಲು ಅನೇಕರು ಈ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ, ಈಗ ಇದನ್ನು ಹೇಳ್ತಿದೀವಿ ಎಂದರೆ ಅರ್ಥ ಮಾಡಿಕೊಳ್ಳಿ. ನೀವು ಈ ರೀತಿ ಮಾಡ್ತಾ ಇರೋದ್ರಿಂದಲೇ ನಮಗೆ ಕಂಟೆಂಟ್ ಸಿಗುತ್ತಿದೆ ಎಂದುಕೊಂಡರೆ ಈ ಮನೆ ಅದಕ್ಕಲ್ಲ ಎಂದು ಸುದೀಪ್ (Kiccha Sudeep) ಎಚ್ಚರಿಕೆ ನೀಡಿದರು.
ಇನ್ನೂ ಸುದೀಪ್ ಖಡಕ್ ಎಚ್ಚರಿಕೆ ನಂತರ ರೂಪೇಶ್ ಶೆಟ್ಟಿ ಭಾವುಕರಾಗಿದ್ದಾರೆ. ನಮ್ಮ ಉದ್ದೇಶ ಕೆಟ್ಟದಾಗಿ ಇರಲಿಲ್ಲ ನಾನು ಮನೆಯಿಂದ ವಾಕ್ ಔಟ್ ಆಗುತ್ತೇನೆ ಎಂದು ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]