ಬಿಗ್ ಬಾಸ್ ಮನೆಯಲ್ಲಿ (Bigg Boss House) ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ(Roopesh Rajanna), ಗುರೂಜಿ ನಡುವೆ ಒಳ್ಳೆಯ ಗೆಳೆತನವಿತ್ತು. ಈಗ ಆ ಫ್ರೆಂಡ್ಶಿಪ್ಗೆ ಬ್ರೇಕ್ ಬಿದ್ದಿದೆ. ರಾಜಣ್ಣನವರ ಆ ಒಂದು ನಡೆಯಿಂದ ರೂಪೇಶ್ ಶೆಟ್ಟಿ (Roopesh Shetty) ಬೇಸರ ಹೊರ ಹಾಕಿದ್ದಾರೆ.
Advertisement
ರೂಪೇಶ್ ಶೆಟ್ಟಿ ಮತ್ತು ರಾಜಣ್ಣ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಪತ್ರ ಬರೆಯುವ ಟಾಸ್ಕ್ನಲ್ಲಿ ರಾಜಣ್ಣ ನಡೆದುಕೊಂಡ ರೀತಿಗೆ ರೂಪೇಶ್ ಬೇಸರ ಮಾಡಿಕೊಂಡಿದ್ದಾರೆ. ಮುಂಚೆ ಇದ್ದ ಬಾಂಧವ್ಯ ಇದೀಗ ಇಲ್ಲ. ರೂಪೇಶ್ ಶೆಟ್ಟಿ ಬಗ್ಗೆ ಮಾತನಾಡಿದ್ದಕ್ಕೆ ಗುರೂಜಿ ಕೂಡ ರಾಜಣ್ಣ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಡೇಂಜರ್ ಝೋನ್ನಲ್ಲಿ 8 ಸ್ಪರ್ಧಿಗಳು, ಯಾರ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಗ್ ಬಾಸ್
Advertisement
Advertisement
ಬಿಗ್ ಬಾಸ್ (Bigg Boss) ಒಂದು ಟಾಸ್ಕ್ ನೀಡಿದ್ದರು. ತಮ್ಮಿಷ್ಟದ ಸ್ಪರ್ಧಿಗಳಿಗೆ ಪತ್ರ ಬರೆಯುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದರು. ಈ ವೇಳೆ ರೂಪೇಶ್ ರಾಜಣ್ಣ ಅವರು ರೂಪೇಶ್ ಶೆಟ್ಟಿಗೆ ಲೆಟರ್ ಬರೆದಿದ್ದರು. ನೀವು ಉತ್ತಮರು. ನಾನು ಮನಸ್ಸಲ್ಲಿ ಯಾವುದನ್ನೂ ಇಟ್ಟುಕೊಂಡು ಹೇಳಲ್ಲ. ನಾನು ಹಲವು ಬಾರಿ ಹೇಳಿದ್ರೂ ನೀವು ಅದನ್ನು ತಿದ್ದಿಕೊಂಡಿಲ್ಲ. ಶ್ಯೂ ಹಾಕಿಕೊಂಡಾಗ ಒದೆಯಬೇಡಿ ಎಂದು ಹೇಳಿದ್ದೆ. ಆದರೆ, ಅದನ್ನು ನೀವು ಮುಂದುವರಿಸಿದ್ದೀರಿ. ನನ್ನ ವಯಸ್ಸು 38, ನಿಮ್ಮ ವಯಸ್ಸು 31. ನೀವು ನನಗೆ ಅನೇಕ ಬಾರಿ ಮಗನೇ ಎಂದು ಹೇಳಿದ್ರಿ. ನಾನು ಅದನ್ನು ಹೇಳಬೇಡಿ ಎಂದು ಹೇಳಿದ್ದೆ. ಆದರೆ, ಅದನ್ನು ನೀವು ಮುಂದುವರಿಸಿದ್ದೀರಿ. ಇದು ಸರಿ ಅಲ್ಲ ಎಂದು ರಾಜಣ್ಣ ಓಪನ್ ಆಗಿ ಹೇಳಿದ್ದಾರೆ.
Advertisement
ಈ ಮಾತುಗಳನ್ನು ರೂಪೇಶ್ ರಾಜಣ್ಣ ತುಂಬಾನೇ ಗಂಭೀರವಾಗಿ ಹೇಳಿದ್ದಾರೆ. ಇದರಿಂದ ರೂಪೇಶ್ ಶೆಟ್ಟಿಗೆ ಬೇಜಾರಾಗಿದೆ. ಜೊತೆಯಲ್ಲೇ ಇದ್ದಾಗ ಇದನ್ನು ಹೇಳಬಹುದಿತ್ತು. ಎಲ್ಲರ ಎದುರು ರಾಜಣ್ಣ ಹೀಗೆ ಹೇಳಬಾರದಿತ್ತು ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ನಾನು ಯಾವತ್ತು ಡೌಟ್ನಲ್ಲಿ ಫ್ರೆಂಡ್ ಮಾಡಿಕೊಳ್ಳಲ್ಲ, ಫ್ರೆಂಡ್ ಆದಮೇಲೆ ಡೌಟ್ ಪಡಲ್ಲ ಎಂದು ರೂಪೇಶ್ ಶೆಟ್ಟಿ ಮಾತನಾಡಿದ್ದಾರೆ.